ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭೋಯಾಕೇರಿಯ ಬಳಿ ಸೇವೆಸಲ್ಲಿಸುತ್ತಿದ್ದ ಯೋಧ ಅಶೋಕ ಕುಮಾರ ಹಾಗೂ ಅವರ ಕುಟುಂಬದ ಮೇಲೆ ಮರಣಾಂತಿಕ ಹಲ್ಲೆ ನಡೆದಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಮುದ್ದೇಬಿಹಾಳ ತಾಲೂಕಾ ಮಾಜಿ ಸೈನಿಕರ ಸಂಘ ಹಾಗೂ ದೇಶ ಭಕ್ತರು ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಬಸವೇಶ್ವರ ವೃತ್ತದಲ್ಲ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಸಂಘದ ಪದಾಧಿಕಾರಿಗಳು, ಗಾಡಿಯಲ್ಲಿ ದೇಶ ರಕ್ಷಣೆಗೆ ನಿಂತ ಸೈನಿಕನ ಕುಟುಂಬಕ್ಕೆ ದೇಶದೊಳಗೆ ರಕ್ಷಣೆ ಇಲ್ಲದಂತಾಗಿರುವುದು ದುರದೃಷ್ಟದ ಸಂಗತಿಯಾಗಿದೆ. ಕೂಡಲೇ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೈನಿಕನ ಹಾಗೂ ಅವನ ಕುಟುಂಬದ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಲ್ಲವಾದರೆ ಗಡಿಯೊಳಗಿನ ರಕ್ಷಣದಳಕ್ಕೆ ಕಳಂಕವಾಗುತ್ತದೆ. ಆದರಿಂದ ಕೂಡಲೇ ಸ್ಥಳೀಯ ತಹಸೀಲ್ದಾರರು ಕೊಡಗು ಜಿಲ್ಲಾಯ ಜಿಲ್ಲಾಧಿಕಾರಿಗಳಿಗೆ ಹಾಗೂ ಅಲ್ಲಿನ ಪೊಲೀಸ ಮಹಾ ನಿರ್ದೇಶಕರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮಾಡಬೇಕು ಎಂದು ಅವರು ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಮಾಡಿ ತಹಸೀಲ್ದಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾಲೂಕಾ ಮಾಜಿ ಸೈನಿಕರ ಸಂಘದ ಗೌರವಅಧ್ಯಕ್ಷ ಎಸ್.ಆರ್.ಕುಲಕರ್ಣಿ, ಅಧ್ಯಕ್ಷ ಆರ್.ಐ.ಹಿರೇಮಠ, ಉಪಾಧ್ಯಕ್ಷ ಬಿ.ಎಚ್.ನಗರಬೆಟ್ಟ, ಕಾರ್ಯದರ್ಶಿ ಎ.ಎಸ್.ನಾಗೂರ, ಸದಸ್ಯರಾದ ವಾನಮರಾವ್ ಲಮಾಣಿ, ಎಂ.ಬಿ.ವಠಾರ, ಎಸ್.ಬಿ.ಹೊಳಿ, ಎಸ್. ವ್ಹಿ. ಹಿರೇಮಠ, ಎ. ಎಚ್. ಕಕ್ಕೇರಿ, ಎಸ್. ಜೆ.ಕುರಿ, ಐ. ಬಿ. ಮ್ಯಾಗೇರಿ,ಸುಧೀರ ಲಮಾಣಿ, ಎಸ್. ಡಿ. ಹೂಗಾರ, ಸಿ. ಐ. ಬಿದರಕುಂದಿ ಸೇರಿದಂತೆ ವೀರಯೋಧರ ಸ್ಮಾರಕ ಸಮಿತಿ ಸದಸ್ಯರಿದ್ದರು.
Be the first to comment