ಪ್ರವಾಹದಲ್ಲಿ ಸಿಲುಕಿದ ಗರ್ಭಿಣಿ; ಬೋಟ್ ಮೂಲಕ ಆಸ್ಪತ್ರೆ ತಲುಪಿಸಿದ ಗ್ರಾಮಸ್ಥರು

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ದಾಂಡೇಲಿ

ನಿರಂತರ ಮಳೆಯಿಂದಾಗಿ ಪ್ರವಾಹದ ನಡುವೆ ಸಿಲುಕಿಕೊಂಡಿದ್ದ ಗರ್ಭಿಣಿಯನ್ನು ಬೋಟ್ ಮೂಲಕ ಸುರಕ್ಷಿತವಾಗಿ ಆಸ್ಪತ್ರೆಗೆ ರವಾನಿಸಿದ ಘಟನೆ ನಡೆದಿದೆ
ಇಲ್ಲಿನ ಮೌಳಂಗಿಯ ಭೂಮಿಕಾ ಕಾಂಬ್ಳೆ ಎನ್ನುವವರಿಗೆ ಪ್ರವಾಹದಲ್ಲಿ ಸಿಲುಕಿದ ಸಂದರ್ಭದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸುತ್ತಲೂ ಜಲಾವೃತಗೊಂಡು ಮಹಿಳೆ ಕಷ್ಟಕ್ಕೆ ಸಿಲುಕಿದ್ದರು‌ ಈ ಸಂದರ್ಭದಲ್ಲಿ ಕಾರ್ಯಪ್ರವೃತ್ತವಾದ ಗ್ರಾಮಸ್ಥರು ಹಾಗೂ ಯುವಕರ ತಂಡ ಮಹಿಳೆಯ ರಕ್ಷಣೆಗೆ ಧಾವಿಸಿದರು.

CHETAN KENDULI


ಮಳೆಯಿಂದಾಗಿ ಮೌಳಂಗಿ ರಸ್ತೆ ಜಲಾವೃತಗೊಂಡಿದ್ದರಿಂದ ಸಂಚಾರ ಬಂದ್ ಆಗಿತ್ತು‌. ಗ್ರಾಮಸ್ಥರು ಹಾಗು ಯುವಕರು ಸೇರಿ ಮೌಳಂಗಿ ಇಕೋ ಪಾರ್ಕ್ ನ ಟ್ಯೂಬ್ ಬೋಟ್ ತರಿಸಿ ಅದರ ಸಹಾಯದಿಂದ ಗರ್ಭಿಣಿಯನ್ನು ನೆರೆಯಿಂದ ಪಾರು ಮಾಡಿ ಕಾರಿನ ಮೂಲಕ ದಾಂಡೇಲಿ ಸರಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.

Be the first to comment

Leave a Reply

Your email address will not be published.


*