ಹಿಂದುಳಿದ ಸಮಾಜದ ಈಶ್ವರಪ್ಪರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್‍ಗೆ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಮನವಿ.

ಬೆಂಗಳೂರು: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಅವರನ್ನು ಬದಲಾವಣೆ ಮಾಡಿದರೆ ಕುರುಬ ಜನಾಂಗದ ಹಿರಿಯರು, ಬಿಜೆಪಿ ನಾಯಕರಾದ ಕೆ.ಎಸ್ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಹಿಂದುಳಿದ ಜಾಗೃತಿ ವೇದಿಕೆ ಮುಖಂಡರು ಬಿಜೆಪಿ ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನಮ್ಮ ಬೆಂಬಲವಿದೆ. ವಯೋಮಿತಿ ಕಾರಣ ನೀಡಿ ಅವರನ್ನು ಬದಲಾಯಿಸುವುದಾದರೆ ಅವರ ಸಮಕಾಲೀನರಾದ ಹಾಗೂ ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಎಸ್. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಮಾರ್ಗದರ್ಶಕ ಕೆ. ಮುಕುಡಪ್ಪ ಒತ್ತಾಯಿಸಿದ್ದಾರೆ.

2018 ರಿಂದ 2013 ರವರೆಗೆ ಬಿಜೆಪಿ ಅಧಿಕಾರವಿದ್ದ ಸಂದರ್ಭದಲ್ಲಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಸದಾನಂದಗೌಡ ಹಾಗೂ ಲಿಂಗಾಯಿತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿತ್ತು. ರಾಜ್ಯದ 31 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದ ಸಮಾಜದ ಜೋತೆಗೆ ಸಾಗುತ್ತಿರುವ ಕುರುಬ ಸಮುದಾಯ ಮುಖಂಡರಾದ ಈಶ್ವರಪ್ಪ ನವರನ್ನು ಗಣನೆಗೆ ತೆಗೆದುಕೋಳಬೇಕು ಕುರಬ ಸಮಾಜ ರಾಜ್ಯದ ಮೂರನೆ ದೊಡ್ಡ ಸಮಾಜ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ಇದನ್ನು ಗಮನಿಸಿ ಹೈಕಮಾಂಡ್ ಸಮುದಾಯದ ಮುಖಂಡರಾದ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕೆಂದು ಎಂದು ತಿಳಿಸಿದರು.

ಅಖಿಲ ಭಾರತೀಯ ಕೋಲಿ ಸಮಾಜದ ಮುಖಂಡರಾದ ತಿಪ್ಪಾರೆಡ್ಡಿ, ಅಮರೇಶ ಕಾಮನಕೇರಿ,ಸಿದ್ದಣ್ಣ ಚಾಮನೂರ ಸವಿತ ಸಮಾಜದ ಎಂ.ಬಿ. ಶಿವಪ್ಪ, ಮಾಲಿ ಸಮಾಜದ ಬಸವರಾಜ ಬಾಳೇಕಾಯಿ, ಯಾದವ ಸಮಾಜದ ಪ್ರಸನ್ನಕುಮಾರ್,ತಿಗಳ ಸಮಾಜದ ಮುಖಂಡ ಸಿದ್ದರಾಜು ವಿಶ್ವ ಕರ್ಮ ಸಮುದಾಯದ ವಿಶ್ವನಾಥ್ ವಿಶ್ವಕರ್ಮ, ಈಡಿಗ ಸಮಾಜದ ಬಸವರಾಜ ಓಟೂರು, ಹುಚ್ಚಪ್ಪ ಮರಸ ಸೇರಿದಂತೆ ವಿವಿಧ ಮುಖಂಡರು ಮಾತನಾಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು. ಬಿಜೆಪಿಯಲ್ಲಿ ಅತ್ಯಂತ ಹಿರಿಯರು ಮತ್ತು ಪಕ್ಷ ನಿಷ್ಠರಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಯುವ ಘಟಕದಿಂದ ಆರಂಭಿಸಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ, ಉಪ ಮುಖ್ಯಮಂತ್ರಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.ಬಿಜೆಪಿ ಪಕ್ಷ ಸಂಕಷ್ಟ ಕಾಲದಲ್ಲಿ ಇದ್ದಾಗ ಈಶ್ವರಪ್ಪ ಬಿಜೆಪಿ ಕಟ್ಟಾಳ್ಳು ಆಗಿ ಪಕ್ಷಕ್ಕೆ ದುಡಿದರು ಇವರನ್ನು ಮುಖ್ಯಮಂತ್ರಿಯಾಗಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದ್ದಾರೆ

Be the first to comment

Leave a Reply

Your email address will not be published.


*