ಬಾಗಲಕೋಟೆ:(ಗುಡೂರ ಎಸ್.ಸಿ) ಸ್ವತ್ಛತೆ, ನೈರ್ಮಲ್ಯ ಕಾಪಾಡಲು ಹರಸಾಹಸ ಪಡುತ್ತಿರುವ ಗುಡೂರ ಗ್ರಾಮ ಪಂಚಾಯತ್ ಹಸಿ ಕಸ,ಒಣ ಕಸ ಬೇರ್ಪಡಿಸಲು ಪ್ರತಿ ಮನೆಗೂ ತಲಾ ಎರಡೆರೆಡು ಬಕೆಟ್ಗಳನ್ನು ಅನುಕೂಲವಾಗುವಂತೆ ವಿತರಿಸುವ ಮೂಲಕ ಗಮನ ಸೆಳೆಯುತ್ತಿದೆ.
ಗಾಂಧೀಜಿ ಕಂಡ ಸ್ವಚ್ಚ ಭಾರತ ಕಲ್ಪನೆಯನ್ನು ಸಾಕಾರಗೊಳಿಸಲು ಗುಡೂರ ಗ್ರಾಮ ಪಂಚಾಯತಿ ಮಾದರಿಯಾಗಿದೆ.ವಾರ್ಡ್ ನಂಬರ್ 2ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ ಇಲಾಳ, ರಾಯಪ್ಪ ತಿಲಗರ,ರಫೀಕ್ ಇಟಗಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನೆಮನೆಗೆ ತೆರಳಿ ಒಣಕಸ ಮತ್ತು ಹಸಿಕಸ ಬೆರ್ಪಡುಸುವ ಬಕೇಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
Be the first to comment