ಗುಡೂರ ಎಸ್.ಎಸ್.ಎಲ್.ಸಿ ಪರೀಕ್ಷೆ ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆ

ವರದಿ:ಶಾಂತಯ್ಯ ಯಾವಗಲ್ಲಮಠ

ಬಾಗಲಕೋಟೆ: ಗುಡೂರ(ಎಸ್.ಸಿ) ಗ್ರಾಮದಲ್ಲಿರುವ ಶ್ರೀ ಅಕೃಪೋ ಶ್ರೀ ಖೋಡೆ ಈಶ್ವರಸಾ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡ ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆಯನ್ನು ಶಾಲೆಯ ಸಭಾ ಭವನದಲ್ಲಿ ಜರುಗಿತು.

ಸುಸೂತ್ರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲು ಬೇಕಾಗಿರು ಅಗತ್ಯ ಎಲ್ಲಾ ಪೂರ್ವಸಿದ್ದತೆಗಳನ್ನು ಸಿಬ್ಬಂದಿಯವರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಮಾಡಿದ್ದು ಮಕ್ಕಳ ಸುರಕ್ಷತಾ ದೃಷ್ಠಿಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಹ್ರಾಮ ಪಂಚಾಯತ್ ಕಾರ್ಯಲಯ,ಆರೋಗ್ಯ ಇಲಾಖೆಯವರಿಗೆ ವಿನಂತಿಸಿದ್ದು ಹಾಗೂ ಭದ್ರತೆಗಾಗಿ ಪೋಲೀಸ್ ಇಲಾಖೆಯವರಿಗೆ ವಿನಂತಿಸಿದ್ದು ಇಲಾಖಾ ನಿಯಮಾವಳಿಯನ್ವಯ ಎಲ್ಲರೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಯಶಸ್ವಿಯಾಗಿ ಪರೀಕ್ಷೆಗಳನ್ನು ನಿರ್ವಹಿಸಲು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಹೆಚ್.ಬಿ.ದಶವಂತ ಕರೆ ನೀಡಿದರು.

ನಂತರ ಪ್ರಶ್ನೆಪತ್ರಿಕೆ ಪಾಲಕರಾದ ಎಸ್.ಬಿ.ಹೆಳವರ ಕೊಠಡಿ ಮೇಲ್ವಿಚಾರಕರಿಗೆ ಪರೀಕ್ಷಾ ಮಾರ್ಗಸೂಚಿಗಳನ್ನು ವಿವರಿಸಿ ಈ ವರ್ಷ ಒಂದೆ ದಿನ ಮೂರು ವಿಷಯಗಳ ಪರೀಕ್ಷೆಗಳು ಏಕಕಾಲದಲ್ಲಿ ಜರುಗುವುದರಿಂದ ಮಕ್ಕಳು ಯಾವುದೇ ರೀತಿಯ ಗೊಂದಲಕ್ಕಿಡಾಗದೆ ಸೂಕ್ತ ಕೊಠಡಿ ಮೇಲ್ವಚಾರಣೆಗೆ ಅಗತ್ಯವಿರುವ ಮಾರ್ಗದರ್ಶನ ನೀಡಿದರು.ಒಟ್ಟು 28 ಬ್ಲಾಕ್ ರಚನೆಮಾಡಿದ್ದು ಒಂದು ವಿಶೇಷ ಕೊಠಡಿ ರಚಿಸಲಾಗಿದೆ.ಸಭೆಯಲ್ಲಿ ಪ್ರೌಢಶಾಲೆಯ ಹಿರಿಯ ಸಿಬ್ಬಂದಿ ತೊಗುಣಸಿ ಹಾಗೂ ಇಲಾಖೆಯಿಂದ ನಿಯೋಜನೆಗೊಂಡ ಎಲ್ಲ ಕೊಠಡಿ ಮೆಲ್ವಿಚಾರಕರಿದ್ದರು.

Be the first to comment

Leave a Reply

Your email address will not be published.


*