ಜಿಲ್ಲಾ ಸುದ್ದಿ
ಶಿರಸಿ: ಹಂಗಾಮಿ ಲಾಗಣಿಗೆ ನೀಡಲಾದ ಜಮೀನು ಖಾಯಂ ಲಾಗಣಿ ಖಾತೆಯಿಂದ ಮಂಜೂರಿ ಪಡೆಯುವ ಕಾನೂನು ಮತ್ತು ನಿಯಮ ಇಂದಿಗೂ ಊರ್ಜಿತವಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯವಸಾಯ ಸಾಗುವಳಿಯ ಹಂಗಾಮಿ ಲಾಗಣಿ ಗುತ್ತಿಗೆ ಖಾಯಂ ಮಂಜೂರಿ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಿದ್ದಾಗ್ಯೂ ಅರಣ್ಯ ಅಧಿಕಾರಿಗಳ ತಕರಾರಿಂದ ಖಾಯಂ ಭೂಮಿಯ ಹಕ್ಕು ಪತ್ರದಿಂದ ಹಂಗಾಮಿ ಲಾಗಣಿದಾರರಿಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅರಣ್ಯ ಇಲಾಖೆಯ ಫೂಕಸ್- 3 ಕ್ಕೆ ಸಂಬಂಧಿಸಿ ಖಾಯಂ ಮಂಜೂರಿಗೆ ಸರಕಾರದ ಆದೇಶ ಇದ್ದಾಗಲೂ ಅರಣ್ಯ ಅಧಿಕಾರಿಗಳ ಹಸ್ತಕ್ಷೇಪದ ಕುರಿತು ಸರಕಾರದ ಆದೇಶ ಪತ್ರ ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಸಂರಕ್ಷಣಾ ಕಾಯಿದೆ ಪೂರ್ವದಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿ 6156 ಕುಟುಂಬಗಳಿಗೆ ವ್ಯವಸಾಯ ಉದ್ದೇಶಕ್ಕಾಗಿ 19,529.24 ಸಾವಿರ ಎಕರೆ ಪ್ರದೇಶವನ್ನು ಹಂಗಾಮಿ ಲಾಗಣಿ ಖಾತೆಯಿಂದ ಕೃಷಿ ಕುಟುಂಬಗಳಿಗೆ ಹಸ್ತಾಂತರಿಸಲಾಗಿತ್ತು. ರಾಜ್ಯ ಸರ್ಕಾರವು ಸಾಕಷ್ಟು ಸಾರೇ ಆದೇಶದ ಅನ್ವಯ ಹಂಗಾಮಿ ಲಾಗಣಿ ವ್ಯವಸಾಯ ಭೂಮಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮದಡಿಯಲ್ಲಿ ಖಾಯಂಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಿದ್ದಾಗ್ಯೂ, ವೇದಿಕೆಗೆ ದೊರಕಿರುವ ಅಂಕೆ-ಸಂಖ್ಯೆ ಪ್ರಕಾರ ಕೇವಲ 2029 ಪ್ರಕರಣಗಳಿಗೆ ಮಾತ್ರ ಖಾಯಂ ಮಂಜೂರಿ ಆದೇಶ ನೀಡಿ ಅಂತಹ ಸಾಗುವಳಿದಾರರ ಹೆಸರನ್ನು ಪಹಣಿಪತ್ರಿಕೆಯಲ್ಲಿ ಖಾಯಂ ಲಾಗಣಿದಾರರು ಎಂದು ದಾಖಲಾಗಲ್ಪಟ್ಟಿದೆ. ಇನ್ನುಳಿದಂತ ಹಂಗಾಮಿ ಸಾಗುವಳಿದಾರರು ಖಾಯಂ ಸಾಗುವಳಿಯ ಭೂಮಿ ಹಕ್ಕಿನ ಪ್ರಕ್ರೀಯೆಗೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಹಾಗೂ ಕಾನೂನು ಬಾಹಿರ ತಕರಾರುಗಳಿಂದ ಖಾಯಂ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅವರು ಅಪಾದಿಸಿದರು.
ಹಂಗಾಮಿ ಭೂಮಿ ಖಾಯಂ ಮಂಜೂರಿಗೆ ಸರಕಾರ ಅಂತಿಮ ಆದೇಶ ನೀಡಿ 27 ವರ್ಷವಾದರೂ ಅರಣ್ಯ ಇಲಾಖೆಯ ವಿನಾಃ ಕಾರಣ ಹಸ್ತಕ್ಷೇಪದಿಂದ ಭೂಮಿ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಹೇಳುತ್ತಾ. ಪೂರ್ಣಪ್ರಮಾಣದ ಖಾಯಂ ಲಾಗಣಿ ಆಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು..
Be the first to comment