ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧನ ರಕ್ಷಣೆ

ವರದಿ: ಸ್ಪೂರ್ತಿ ಎನ್ ಶೇಟ್

ರಾಜ್ಯ ಸುದ್ದಿ 

CHETAN KENDULI

ಶಿರಸಿ: ತಾಲೂಕಿನ RTO ಕಛೇರಿ ಬಳಿ ಅನಾಥ ವ್ರದ್ಧ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಮಳೆಯಲ್ಲಿಯೇ ಅನಾಥ ಸ್ಥಿತಿಯಲ್ಲಿ ಇರುವ ಬಗ್ಗೆ ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ಕರೆ ಮಾಡಿ ಮಾಹಿತಿ ನೀಡಿದರು. ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ. ಎಸ್. ಐ ರವರಾದ ಭೀಮಾಶಂಕರ್ ರವರಿಗೆ ಕರೆಮಾಡಿ ಈಕುರಿತು ಮಾಹಿತಿ ನೀಡಲಾಗಿದ್ದು,

ಇದಲ್ಲದೆ ಸ್ಥಳೀಯರಾದ ರುದ್ರಗೌಡ್ ಪಾಟೀಲ್ ರವರು ಹಾಗೂ ಬಿಜೆಪಿ ಮುಖಂಡರು ಹಾಗೂ ಶಿರಸಿ ನಗರಸಭೆ ಸದಸ್ಯರಾದ ಶ್ರೀಕಾಂತ ಬಳ್ಳಾರಿ ರವರು ಖುದ್ದಾಗಿ ಪೋಲಿಸ್ ಠಾಣೆಗೆ ಹೋಗಿ ಪೋಲಿಸ್ ಅಧಿಕಾರಿಗಳಿಗೆ ಈ ಅಜ್ಜನ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುತ್ತಾರೆ. ತಕ್ಷಣ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿ .ಎಸ್. ಐ ಭೀಮಾಶಂಕರ್ ರವರು ತಮ್ಮ ಸಿಬ್ಬಂದಿಯವರೊಂದಿಗೆ ಈ ವೃದ್ಧ ಇರುವ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು.ನಂತರ ಪಿ .ಎಸ್. ಐ ರವರು ಈತನನ್ನು ಆಶ್ರಯಧಾಮ ಅನಾಥಾಶ್ರಮಕ್ಕೆ ಸೇರಿಸಿಕೊಳ್ಳುವಂತೆ ಕೋರಿಕೊಂಡರು. ಈ ಅನಾಥ ವ್ರದ್ಧ ವ್ಯಕ್ತಿಯನ್ನು ರಕ್ಷಣೆ ಮಾಡಿ ಸಿದ್ದಾಪುರದ ಮುಗದೂರಿನ ದೇವಸ್ಥಳದಲ್ಲಿರುವ ನಮ್ಮ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿರುತ್ತಾರೆ.

ನಂತರ ಈ ವೃದ್ಧನನ್ನು ಸಿದ್ದಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಆಶ್ರಯಧಾಮ ಅನಾಥಾಶ್ರಮಕ್ಕೆ ಕರೆತರಲಾಗಿದೆ. ಈ ವೃದ್ಧ ಕನ್ನಡ ಮಾತನಾಡುತ್ತಿದ್ದಾನೆ. ತನ್ನ ಹೆಸರು ಶಂಕರ ಊರು ಬಂಡಲ್ ಎಂದು ಹೇಳಿರುತ್ತಾನೆ.      ನಂತರ ಈತನ ಕಟಿಂಗ್ ,ದಾಡಿ ಸ್ನಾನ ಮಾಡಿಸಲಾಗಿದೆ. ವೃದ್ಧ ಈಗ ದೇವಸ್ಥಳದಲ್ಲಿರುವ ಆಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

Be the first to comment

Leave a Reply

Your email address will not be published.


*