ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಸಂಸದ ಅಮರೇಶ್ವರ ನಾಯಕ


           ರಾಜ್ಯ ಸುದ್ದಿಗಳು


ಲಿಂಗಸುಗೂರು:(ಅ;9)ನಾನಿಲ್ಲೇ ಪಕ್ಕದ ಗುಡುಗುಂಟಿಯಾತ, ನಿಮ್ಗ ಸಹಾಯ ಮಾಡಾಕಂತನೇ ಬಂದೀನಿ.‌ ದೇವರದಾನ ಎಲ್ಲಾ ಸರಿಹೋಗ್ತದ. ಯಾರೂ ನೀವು ಹೆದರಬ್ಯಾಡ್ರಿ..’ ಪ್ರವಾಹದ ಹೊಡೆತಕ್ಕೆ ಕಂಗಾಲಾಗಿರುವ ಸಂತ್ರಸ್ತರನ್ನು ಅಕ್ಕರೆಯಿಂದ  ಸಂಸದ ರಾಜಾ ಅಮರೇಶ್ವರ ನಾಯಕ ಸಂತೈಸಿದರು.

 

ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಬಳಿಕ ಯರಗೋಡಿಯಲ್ಲಿನ‌ ಗಂಜಿಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು. ಅವರಿಗೆ ಬೆಡ್ ಶೀಟ್, ಜಮಖಾನ, ಸ್ವೆಟರ್, ಸೀರೆ ಸೇರಿ ಅಗತ್ಯ ವಸ್ತುಗಳನ್ನು ವಿತರಿಸಿದರು.

ನಡುಗಡ್ಡೆಯಿಂದ ಕರೆದುಕೊಂಡು ಬಂದು ಗಂಜಿಕೇಂದ್ರದಲ್ಲಿ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ‌. ಅಗತ್ಯ ಸೌಲಭ್ಯ ನೀಡುತ್ತಿಲ್ಲ ಎಂದು ಸಂತ್ರಸ್ತರು ಸಂಸದರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ಸಂತ್ರಸ್ತರ ಅಳಲನ್ನು‌ ಆಲಿಸಿದ ಸಂಸದರು, ಗಂಜಿಕೇಂದ್ರಕ್ಕೆ ಅಗತ್ಯ ಸೌಲತ್ತು ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖಂಡರಾದ ನಾಗಪ್ಪ ವಜ್ಜಲ್, ರಾಜಾ ಸೋಮನಾಥ ನಾಯಕ, ಖಾದರಬಾಷಾ, ರಾಜಾ ಶ್ರೀನಿವಾಸ ನಾಯಕ, ಡಾ.ಶಿವಬಸಪ್ಪ, ವೀರನಗೌಡ ಲೆಕ್ಕಿಹಾಳ, ಜಗನ್ನಾಥ ಕುಲಕರ್ಣಿ, ಸೋಮನಾಥ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

ವರದಿ:ಅಮರೇಶ್. ಲಿಂಗಸೂಗೂರು

Be the first to comment

Leave a Reply

Your email address will not be published.


*