ರೈತ ಧ್ವನಿ
ಮುದ್ದೇಬಿಹಾಳ::(ಅ;8)
ಚಿಮ್ಮಲಗಿ ಏತ್ ನೀರಾವರಿ ಯೋಜನೆಯ ಪೂರ್ವ ಕಾಲುವೆಯ ವಿತರಣಾ ಕಾಲುವೆ ‘೧೩ಎ’ಯನ್ನು ಮುಖ್ಯ ಕಾಲುವೆಗೆ ಜೋಡೆನೆ ಮಾಡದೇ ಈ ಭಾಗದ ರೈತರನ್ನು ನೀರಾವರಿಯಿಂದ ವಂಚಿತರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ತಾಲೂಕಿನ ನೆರಬೆಂಚಿ ಗ್ರಾಮಸ್ಥರು ಹುಡ್ಕೊ ಕಾಲೋನಿಯಲ್ಲಿರುವ ಎ.ಎಲ್.ಬಿ.ಸಿ. ಕಛೇರಿಗೆ ಬೀಗ ಜಡೇದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮುದ್ದೇಬಿಹಾಳ ತಾಲೂಕಿನ ಅಕ್ಕಪಕ್ಕದಲ್ಲಿ ಎರಡು ಆಣೆಕಟ್ಟುಗಳಿವೆ. ಈಗಾಗಲೇ ಬಹು ವರ್ಷಗಳ ಹಿಂದೆಯೇ ಮುದ್ದೇಬಿಹಾಳ ಕ್ಷೇತ್ರ ಸಂಪೂರ್ಣವಾಗಿ ನೀರಾವರಿಯಾಗಬೇಕಿತ್ತು.ಆದರೆ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಸಮರ್ಪಕವಾಗಿ ಕಾಲುವೆಗಳನ್ನು ಮಾಡದ ಕಾರಣ ಕ್ಷೇತ್ರವು ನೀರಾವರಿಯಿಂದ ವಂಚಿತಗೊಂಡಿದೆ. ಇದನ್ನು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ. ಆದ್ದರಿಂದ ರೈತರಿಗೆ ಉಪಯೋಗಕ್ಕೆ ಬಾರದ ಕಛೇರಿಗೆ ಬೀಗ ಜಡೆಯಲಾಗಿದೆ ಎಂದು ಪ್ರತಿಭಟನಾ ರೈತರು ದೂರಿದರು.
Be the first to comment