ಮುದ್ದೇಬಿಹಾಳ:(ಅ;8) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಸಾಪೂರದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗ್ರಾಪ ಪಂಚಾಯತಿ ಸದಸ್ಯರಾದ ಸಿದ್ದಪ್ಪ ತಳವಾರರವರು ಉದ್ಘಾಟಿಸಿದರು, ಸಿ.ಆರ್.ಪಿ ಗಳಾದ ವಿ.ಎನ್.ನವಲಿ ರವರು ಇಚ್ಚಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು ಹಾಗೂ ಪ್ರತಿಭೆ ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಲೂರ ಕ್ಲಸ್ಟರ್ ನ ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಭಾಗವಹಿಸಿದ್ದರು.ಅತಿಥಿಗಳಾಗಿ ವೈ.ಬಿ.ತಳವಾರ,ಎಚ್.ಸಿ.ಹಡಪದ,ಕೆಂಪರಾಜು ಇದ್ದರು.
ಸಹ ಶಿಕ್ಷಕರಾದ ಬಿ.ಎಚ್. ಸ್ವಾಗತಿಸಿ,ಕೆ.ಬಿ.ಕೊಂಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು, ರೇಣುಕಕುಮಾರ.ಕೆ.ಪಿ ನಿರೂಪಿಸಿ, ಎಸ್.ಎಸ್.ವಸ್ತ್ರದ ವಂದಿಸಿದರು.
ಕಾರ್ಯಕ್ರಮದಲ್ಲಿ ಗಮನ ಸೆಳೆದ ಕೇಸಾಪೂರ ಶಾಲಾ ಮಕ್ಕಳ ಛದ್ಮವೇಶಧಾರಿ ಹಾಗೂ ಜಡೆ ಕೋಲಾಟ ಎಲ್ಲರ ಗಮನ ಸೆಳೆಯಿತು.
ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
Be the first to comment