ರಾಜ್ಯ ಸುದ್ದಿ
ಭಟ್ಕಳ: ಏಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಹೊಂದಿದೆ ಎಂಬ ಪ್ರಖ್ಯಾತಿ ಪಡೆದಿರುವ ಮುರುಡೇಶ್ವರ, ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನ ಸೆಳೆಯುತ್ತವೆ.
ಇದೀಗ ಅಮೇರಿಕಾದ ಇ-ಗ್ಲೋಬಲ್ ಫಿಲಿಪ್ಸ್ ಸಂಸ್ಥೆ ಆಯೋಜಿಸಿದ್ದ ಪೀಪಲ್ ಚೋಯಿಸ್ ಅವಾರ್ಡ್ 2021 ಪ್ರಶಸ್ತಿಯನ್ನು ವಿದ್ಯುದಲಂಕಾರಗೊಂಡ ಮುರುಡೇಶ್ವರದ ದೇವಾಲಯ ಪಡೆದುಕೊಂಡಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ ಒಟ್ಟು 25 ಗ್ಲೋಬಲ್ ಪ್ರಾಜೆಕ್ಟ್ ಸಂಸ್ಥೆ ಭಾಗವಹಿಸಿತ್ತು.
Be the first to comment