ರಾಜ್ಯ ಸುದ್ದಿ
ಹಳಿಯಾಳ: ಪ್ರಸಿದ್ಧ ಸಂಸ್ಥೆಯಾದ ‘BOSCH’ ವತಿಯಿಂದ ಕೋರೊನಾ ನಿಯಂತ್ರಿಸಲು ಮತ್ತು ಸಮುದಾಯದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ಮಾಜಿ ಸಚಿವ ಆರ್ ವಿ ದೇಶಪಾಂಡೆ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
‘BOSCH’ ನ ಸಿ.ಎಸ್.ಆರ್. ಅಡಿಯಲ್ಲಿ 25,000 ಎನ್.95 ಮಾಸ್ಕ, 2,500 ಪಿ.ಪಿ.ಇ. ಕಿಟ್, 1 ಲಕ್ಷ ವಿಟಾಮಿಸ್ -ಸಿ, 1 ಲಕ್ಷ ಪ್ಯಾರಾಸಿಟಿಮಲ್ ಮತ್ತು 10,000 ಐವರ ಮೆಕ್ಟಿನ್ ಗುಳಿಗೆಗಳನ್ನು ಪೂರೈಕೆ ಮಾಡಲಾಗಿದೆ. ಈ ಎಲ್ಲ ವೈದ್ಯಕೀಯ ಸಾಮಗ್ರಿಗಳನ್ನು ಹಳಿಯಾಳದ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಆರ್ವಿಡಿ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಭಾಷ್‍ನ ಪ್ರತಿನಿಧಿಗಳು ಹಾಜರಿದ್ದರು.
Be the first to comment