ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಫುಡ್ ಕೀಟ್ ಕೊಡುವು ಬಾರಿ ಹೆಮ್ಮೆಯಿಂದ ಹೇಳುತ್ತಿದೆ ಸರಕಾರ. ಎಷ್ಟು ದಿನ ಇಂತಹ ರಾಜಕಾರಣ ಮಾಡುತ್ತೀರಾ…?
ಕೊರೊನಾ ಮುಂಜಾಗ್ರತೆ ವಹಿಸಿಕೊಳ್ಳಿರಿ ಎಂದು ಮೊದಲೇ ಎಚ್ಚರಿಕೆ ಗಂಟೆ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಮಾಡಿದ್ದು ವಿವಿಧ ಸಭೆ ಸಮಾರಂಭಗಳಿಗೆ, ಅಮೇರಿಕ ಅಧ್ಯಕ್ಷರಿಗೆ ಸ್ವಾಗತಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆ ಮಾಡಿ ಜನರನ್ನು ತತ್ತರಿಸುವಂತೆ ಮಾಡಿದರು ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಕಿಡಿಕಾರಿದರು.
ಸೋಮವಾರ ಪಟ್ಟಣದ ಸರಕರಿ ತಾಲೂಕಾ ಆಸ್ಪತ್ರೆಗೆ ನಾಡಗೌಡ ಕುಟುಂಬದ ಡಿ.ಎಸ್.ಫೌಂಡೇಶನವತಿಯಿಂದ ಆಮ್ಲಜನಕ ಸಾಂದ್ರಕಗಳನ್ನು ಉಚಿತವಾಗಿ ನೀಡಿ ಅವರು ಮಾತನಾಡಿ, ಈಗಾಲೇ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಪ್ರತಿಕಾಯಗಳು(ಆಂಟಿಬಾಡಿಸ್) ಹೆಚ್ಚಾಗಿಲ್ಲ ಎಂದರೇ ಲಸಿಕೆ ಅವಶ್ಯಕತೆ ಏನಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಕಿಟಿಕಾರಿದರು.
ರಾಜಕೀಯ ಮಾಡಬೇಡಿ: ಜನಸಾಮಾನ್ಯರ ರಕ್ಷಣೆ ಮಾಡಿ
ದೇಶದಲ್ಲಿಯೇ ಕೊರೊನಾದಿಂದ ಜನರು ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಅಗತ್ಯವಿದ್ದ ಲಸಿಕೆಯನ್ನು ಸರಿಯಾದ ಪ್ರಮಾಣದಲ್ಲಿ ಕೊಡುವುದು ಸರಕಾರಗಳ ಜವಾಬ್ದಾರಿಯಾಗಿರುತ್ತದೆ. ಆದರೆ ಲಸಿಕೆಯನ್ನು ಬಿಟ್ಟು ಫುಡ್ ಕಿಟ್ ನೀಡುವುದೇ ಜನ ರಕ್ಷಣೆ ಎಂದು ವಿರೋಧಿಗಳು ತಿಳಿದುಕೊಂಡಿರಬೇಕು. ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡಬೇಡಿ ಜನರ ರಕ್ಷಣೆಗೆ ಭದ್ದರಾಗಿ ಎಂದು ಮಾಜಿ ಸಚಿವ ನಾಡಗೌಡ ಹೇಳಿದರು.
ಕಾಂಗ್ರೆಸ್ ವ್ಯಂಗ ನಿಜವಾಗಿದೆ:
ಪ್ರಥಮ ಹಂತದಲ್ಲಿಯೇ ದೇಶಕ್ಕೆ ಕೊರೊನಾ ಆವರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೇವಲ ಮೂರು ತಿಂಗಳಲ್ಲಿಯೇ ವ್ಯಾಕ್ಸಿಸ್ ನೀಡಲಾಗುವುದು ಎಂಬ ಭರವಸೆ ನೀಡಿತು. ಆದರೆ ವೈರಾಣು ನಿರ್ಣಾಮಕ್ಕೆ ಒಂದು ವ್ಯಾಕ್ಸಿನ್ ಸಿದ್ದಪಡಿಸಲು ವಿವಿಧ ಬಗೆಯ ಪರೀಕ್ಷೆಗಳನ್ನು ಮೊದಲು ಮಾಡಬೇಕಾಗುತ್ತದೆ. ಆದರೆ ಮೋದಿಯವರು ಕೇವಲ ಮೂರೇ ತಿಂಗಳಲ್ಲಿಯೇ ವ್ಯಾಕ್ಸಿನ ನೀಡಲಾಗುತ್ತದೆ ಎಂದು ಹೇಳಿದಾಗ ಅದನ್ನು ಮೋದಿ ಲಸಿಕೆ ಎಂದು ವ್ಯಂಗ ಮಾಡಿದ್ದರಲ್ಲಿ ಸತ್ಯವಿದೆ ಎಂದು ಮಾಜಿ ಸಚಿವರು ಸಮರ್ಥನೆ ಮಾಡಿದರು.
ಕಾಂಗ್ರೆಸನಿಂದ ಶ್ವೇತ ಪತ್ರಕ್ಕೆ ಆಗ್ರಹಿಸಲಾಗುವುದು:
ಈಗಾಗಲೇ ದೇಶದ ಜನರ ಕಣ್ಣಿಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಾಕಷ್ಟು ಮಣ್ಣು ಎರಚಿದೆ. ಇದಕ್ಕಾಗಿಯೇ ಕೊರೊನಾ ಸಂದಿಗ್ಧ ಪರಿಸ್ಥಿತಿಯ ನಂತರ ದೇಶದ ಎಷ್ಟು ಲಸಿಕೆ ನೀಡಲಾಯಿತು ಅದರಿಂದ ಎಷ್ಟು ಉಪಯುಕ್ತವಾಗಿದೆ ಎಂಬುವುದನ್ನು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಕಾಂಗ್ರೆಸ್ ಪಕ್ಷದಿಂದಲೇ ಸರಕಾರಗಳಿಗೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ತಿಳಿಸಿದರು.
ಜನ ಜಾಗೃತರಾಗುವುದು ಅವಶ್ಯಕವಿದೆ:
ಗ್ರಾಮೀಣ ಪ್ರದೇಶದಲ್ಲಿ ಹಳ್ಳಿ ಹಳ್ಳಿಗೂ ಬಿಜೆಪಿ ಕಾರ್ಯಕರ್ತೆಯರು ತೆರಲಿ ಜನ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ಹಳ್ಳಿಗೂ ಹೋಗಿಲ್ಲ. ಅಲ್ಲದೇ ಮನೆಗೆ ತೆರಲಿ ಕೋವಿಡ್ ಕಿಟ್ ಎಂದು ಹೇಳಿ ಆಂಟಿಬಯೋಕಿಟ್ ನೀಡಲಾಗುತ್ತಿದೆ. ಇವರೇನು ವೈದ್ಯರಾ…? ಅವರು ನೀಡುವ ಅಮೋಕ್ಸೊ ಸೈಕ್ಲೀನ್ ಸೇರಿದಂತೆ ಇನ್ನಿತರ ಔಷಧಿಗಳಿಂದ ಜನರ ಮೇಲಾಗುವ ಪರಿಣಾಮದ ಬಗ್ಗೆ ಇವರಿಗೆ ತಿಳುವಳಿಕೆ ಇದೆಯಾ…? ಜನರಿಗೆ ಔಷಧಿಯೇ ನೀಡಬೇಕು ಎನ್ನುವುದಾದರೆ ನಿಮ್ಮ ಔಷಧಿಗಳನ್ನು ವೈದ್ಯರಿಗೆ ಹಸ್ತಾಂರ ಮಾಡಿರಿ. ಅವರು ಜನರಿಗೆ ನೀಡಬೇಕಾದ ಔಷಧಿಯನ್ನು ನೀಡುತ್ತಾರೆ. ಸುಖಾಸುಮ್ಮನೆ ಜನಸಾಮಾನ್ಯ ಬದುಕಿನಲ್ಲಿ ಆಟವಾಡಬೇಡಿ ಎಂದು ಮಾಜಿ ಸಚಿವರು ಗುಡಿಗಿದ್ದಾರೆ.
Be the first to comment