ಬಾಗಲಕೋಟೆ:(ಗುಡೂರ) ಇಲಕಲ್ಲ ತಾಲೂಕಿನ ಗುಡೂರ ಗ್ರಾಮ ಪಂಚಾಯತಿ ಸಿಬ್ಬಂದಿಯವರು ಅಧ್ಯಕ್ಷರ ಹಾಗೂ ಪಿಡಿಓ ರವರ ಸೂಚನೆಯ ಮರೆಗೆ ವಿಶ್ವ ಪರಿಸರ ದಿನಾಚರಣೆಯಂದು ನೆಟ್ಟ ಸಸಿಗಳ ರಕ್ಷಣೆ ಮಾಡುತ್ತ ಸಸಿ ನೆಡುವುದು ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಿರದೇ ನಿತ್ಯ ಕಾಯಕ ಮಾಡಿಕೊಂಡಾಗ ಶಾಶ್ವತ ಬರ ಅಳಿಸಲು ಸಾಧ್ಯ. ಸಾರ್ವಜನಿಕ ಸ್ಥಳದಲ್ಲಿ ಮರ, ಗಿಡ ಬೆಳಸುವ ಮೂಲಕ ಸೌಂದರ್ಯ ಹೆಚ್ಚುವುದರ ಜತೆಗೆ ಆರೋಗ್ಯಕರ ವಾತಾವರಣ ನಿರ್ಮಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚುತ್ತಿರುವ ಭೂಮಿ ತಾಪಮಾನ ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿ ಪಡೆಯಲು ಮರ, ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕಾಗಿದೆ. ಇದರಲ್ಲಿ ಪರಿಸರ ಹಿತ ಅಡಗಿದೆ ಎಂದರು.
Be the first to comment