ವಿಜಯಾ ಕರದಂಟು ಹಾಗೂ ಬೇಕ್ ಆ್ಯಂಡ್ ಬೈಟ್ ಬೇಕರಿ ಸಂಸ್ಥೆಯಿಂದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಪಟ್ಟಣದ ಪ್ರತಿಷ್ಠಿತ ದಿ.ಸಾವಳಿಗೆಪ್ಪ ಐಹೊಳ್ಳಿ ಕುಟುಂಬದ ವಿಜಯಾ ಕರದಂಟು ಹಾಗೂ ಬೇಕ್ ಅ್ಯಂಡ್ ಬೈಟ್ ಬೇಕರಿವತಿಯಿಂದ ಕಂಪನಿಯ ಸುಮಾರು 45 ಜನ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಬಾಗಲಕೋಟೆ:(ಅಮೀನಗಡ)ವೈರಸ್ ಎರಡನೇ ಹಂತದ ಅಲೆಗೆ ಬಡ ಮಧ್ಯಮ ವರ್ಗದ ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದು, ಆಸ್ಪತ್ರೆಯಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ವೈದ್ಯ ಸಿಬ್ಬಂದಿಗಳು ಸಾರ್ವಜನಿಕರ ಆರೋಗ್ಯ ಹಿತ ಕಾಪಾಡುವುದಕ್ಕೆ ಮುಂದಾಗಿದ್ದಾರೆ ಇಂಥ ಸಂದರ್ಭದಲ್ಲಿ ಹುನಗುಂದ ತಾಲೂಕಿನ ಅಮಿನಗಡ ಪಟ್ಟಣದ ದಿ.ಸಾವಳಿಗೆಪ್ಪ ಐಹೊಳ್ಳಿ ಕುಟುಂಬದ ವಿಜಯಾ ಕರದಂಟು ಹಾಗೂ ಬೇಕ್ ಆ್ಯಂಡ್ ಬೈಟ್ ಬೇಕರಿ ಸಂಸ್ಥೆಯ ವತಿಯಿಂದ ಕಾರ್ಮಿಕರಿಗೆ ಆಹಾರದ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಜಯಾ ಕರದಂಟು ಉದ್ಯಮಿ ಸಂತೋಷ ಐಹೊಳ್ಳಿ ಮಾತನಾಡಿ ಕಳೆದ ಒಂದು ತಿಂಗಳಿನಿಂದ ನಮ್ಮ ಸಂಸ್ಥೆಯಲ್ಲಿ ಕರದಂಟು ತಯಾರಿಕೆ ಸ್ಥಗಿತಗೊಂಡಿದೆ.ಇದರಿಂದ ಕರದಂಟು ತಯಾರಿಕಾ ಸಂಸ್ಥೆಯನ್ನು ನಂಬಿಕೊಂಡಿರುವ ಹಲವಾರು ಕಾರ್ಮಿಕ‌ ಕುಟುಂಬಗಳು ಸಂಕಷ್ಟದಲ್ಲಿವೆ.ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲೆ ಇದ್ದ ನಮ್ಮ ಸಂಸ್ಥೆಯ ಕಾರ್ಮಿಕರು ಎದೆ ಗುಂದದೆ ಧೈರ್ಯ ದಿಂದಿರಬೇಕೆಂಬ ಉದ್ದೇಶದಿಂದ ದಿನಸಿ ಕಿಟ್ ವಿತರಿಸಲಾಯಿತು.

ವಿಜಯ ಕರದಂಟು ಸಂಸ್ಥೆಯವತಿಯಿಂದ 45 ಜನ ಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಿಕ ಸಂತೋಷ ಬಸವರಾಜ ಐಹೊಳ್ಳಿ, ಆಡಳಿತಾಧಿಕಾರಿ ಶ್ರೀಮತಿ ಲಕ್ಷ್ಮಿ ಸಂತೋಷ ಐಹೊಳ್ಳಿ,ಅರ್ಜುನ, ಹುಲಿಗೇಶ,ಶಶಿಕಲಾ,ಗೀತಾ ಸೇರಿದಂತೆ ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*