ಮೈಸೂರು ಜೀಲ್ಲಾ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಅರ್ಜಿ ಆಹ್ವಾನ


   ಉದ್ಯೋಗ -ಮತ್ತು-ಉದ್ಯಮ


03-08-2019::ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು 70 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್​ 28, 2019 ಆಗಿದ್ದು, ಮೂಲಕ ಅರ್ಜಿ ಸಲ್ಲಿಬಹುದು.

ಖಾಲಿ ಹುದ್ದೆಗಳ ಸಂಖ್ಯೆ : 70

ಹುದ್ದೆಗಳ ವಿವರ: ಸಾಮಾನ್ಯ ಅಭ್ಯರ್ಥಿಗಳಿಗೆ – 33 ಹುದ್ದೆಗಳು
ಎಸ್‌ಸಿ- 9 ಹುದ್ದೆಗಳು
ಎಸ್‌ಟಿ- 2 ಹುದ್ದೆಗಳು
ಪ್ರವರ್ಗ1- 3 ಹುದ್ದೆಗಳು
ಪ್ರವರ್ಗ2ಎ- 12 ಹುದ್ದೆಗಳು
ಪ್ರವರ್ಗ 3ಎ- 4 ಹುದ್ದೆಗಳು
ಪ್ರವರ್ಗ 3ಬಿ- 4 ಹುದ್ದೆಗಳು

ವಿದ್ಯಾರ್ಹತೆ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಅಥವಾ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಹಾಗೆಯೇ ಅರ್ಜಿದಾರನು ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ವಯೋಮಿತಿ:
ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯೋಮಿತಿ 35 ವರ್ಷ.
ಪ್ರವರ್ಗ, ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ:
ಸಾಮಾನ್ಯ ವರ್ಗದವರಿಗೆ 300 ರೂ.
ಪ್ರವರ್ಗ-2ಎ,2ಬಿ, 3ಎ, 3ಬಿರ ಅಭ್ಯರ್ಥಿಗಳಿಗೆ 150 ರೂ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ರೂ.
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಅಥವಾ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಬ್ಯಾಂಕ್‌ ಖಾತೆಗೆ ಜಮಾ ಮಾಡತಕ್ಕದು.

ವೇತನ:
21,400 ರೂ. ರಿಂದ 42,000 ರೂ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್‌ 28, 2019

ಹೆಚ್ಚಿನ ವಿವರಗಳಿಗಾಗಿ ಮೈಸೂರು ಜಿಲ್ಲಾ ಅಧಿಕೃತ ಜಾಲತಾಣ ಭೇಟಿ ನೀಡಬಹುದು.

https://mysore.nic.in/

Be the first to comment

Leave a Reply

Your email address will not be published.


*