ಕೆಲೂರ ಸ್ವಯಂಪ್ರೇರಿತ ಲಾಕ್ ಡೌನ್:ಬುಧವಾರ ಶುಕ್ರವಾರ ಮಾತ್ರ ದಿನಸಿ ಖರೀದಿಗೆ ಅವಕಾಶ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಸ್ವಯಂಪ್ರೇರಿತ ಲಾಕ್ ಡೌನ್ ಗೆ ತಿರ್ಮಾನಿಸಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸವುದು|ಎರಡನೆ ಬಾಗಿಲಿನಿಂದ ವ್ಯಾಪಾರಕ್ಕೆ ಕಡಿವಾಣ|ವ್ಯಾಪಾರಕ್ಕೆ ಹೊರಗಿನವರಿಗೆ ಅವಕಾಶ ಇಲ್ಲ|ಗುಂಪು ಗುಂಪಾಗಿ ಜನ ಸೇರುವಂತಿಲ್ಲ|

ಬಾಗಲಕೋಟೆ: (ಕೆಲೂರ)

ಇಲಕಲ್ಲ ತಾಲೂಕಿನ ಕೆಲೂರ ಗ್ತಾಮದಲ್ಲಿ ದಿನೆ ದಿನೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತಿದ್ದು ಅದರ ಮುಂಜಾಗ್ರತಾ ಕ್ರಮವಾಗಿ ಜೂನ್-07 ರ ವರೆಗೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಲು ಗ್ರಾಮ ಪಂಚಾಯತಿ ಅಧ್ಯಕ್ಷರ ಅಪ್ಪಣೆಯ ಮೆರೆಗೆ ಇಂದು ಗ್ರಾಮದ ಶ್ರೀ ವಿಜಯ ಮಹಾಂತೇಶ ಮಠದ ಆವರಣದಲ್ಲಿ ಸಭೆ ನಡೆಸಲಾಯಿತು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ ಮಾತನಾಡಿ ಗ್ರಾಮದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು,ತಳ್ಳಿಕೇರಿ ಗ್ರಾಮದಲ್ಲಿ ಈಗಾಗಲೆ ಇಬ್ಬರು ಸಾವನಪ್ಪಿದ್ದಾರೆ. ಗ್ರಾಮದಲ್ಲಿರುವ ಕೊರೋನಾ ಸೊಂಕಿತರನ್ನು ಹೋಮ್ ಐಸೋಲೇಶನನಲ್ಲಿಟ್ಟಿದ್ದು ಅವರು ಹೊರಬರದಂತೆ ಪಂಚಾಯತಿ ಸಿಬ್ಬಂದಿಯವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.ಗ್ರಾಮದಲ್ಲಿ ಸೊಂಕಿತರ ಸಂಖ್ಯೆ ಸಂಪೂರ್ಣವಾಗಿ ಇಲ್ಲವಾಗಬೇಕಾದರೆ ಅಧ್ಯಕ್ಷರು ತಿರ್ಮಾನಿಸಿದಂತೆ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಒಂದೆ ದಾರಿ ಎಂದರು.

ಸ್ವಯಂ ಘೋಷಿತ ಲಾಕ್‌ ಡೌನ್‌ ಕುರಿತು ಕರೆದ ಸಭೆಯಲ್ಲಿ ಸೇರಿದ ಗ್ರಾಮದ ಎಲ್ಲ ವ್ಯಾಪಾರಸ್ಥರು, ಸಾರ್ವಜನಿಕರು, ಪ್ರಮುಖರು ಚರ್ಚಿಸಿ ಸ್ಪಷ್ಟನೆ ಕೇಳಿದ ನಂತರ ಬುಧವಾರ ಮತ್ತು ಶುಕ್ರವಾರ ವಾರದಲ್ಲಿ ಎರಡು ದಿನ ಮಾತ್ರ ಬೆಳಿಗ್ಗೆ 6 ರಿಂದ 10 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲು ನಿರ್ದಾರ ತೆಗೆದುಕೊಳ್ಳಲಾಯಿತು. ಗ್ರಾಮಾಡಳಿತ ತೆಗೆದುಕೊಂಡ ನಿರ್ಧಾಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಂತಹ ಅಂಗಡಿಗಳನ್ನು ಸೀಜ್ ಮಾಡಬೇಕಾಗುತ್ತದೆ ಎಂಬ ನಿರ್ಣಯಕ್ಕೆ ಬರಲಾಯಿತು.

ಗ್ರಾಮಾಡಳಿತ ತೆಗೆದುಕೊಂಡ ನಿರ್ಣಯಕ್ಕೆ ನಾವು ನಿವೆಲ್ಲರೂ ಇವತ್ತು ಬದ್ದರಾಗಬೇಕಾಗಿದೆ ಕಾರಣ ಕೊರೊನಾ ಮಹಾಮಾರಿ ಇವತ್ತು ಯಾರನ್ನು ಬಿಡದೆ ತನ್ನ ರೌದ್ರ ನರ್ತನ ತೋರಿಸುತ್ತಿದೆ ಇದಕ್ಕೆ ಲಾಕ್ ಡೌನ್ ಮದ್ದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗಪ್ಪ ಹೂಗಾರ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಕೋವಿಡ್ ಎರಡನೆ ಅಲೆ ಬಹಳಷ್ಟು ಜನರನ್ನ ಬಲಿ ತೆಗೆದುಕೊಂಡಿದ್ದು ನಮ್ಮ ಗ್ರಾಮ ಕೊರೊನಾ ಮುಕ್ತ ಗ್ರಾಮ ಮಾಡಲು ಎಲ್ಲ ಸಾರ್ವಜನಿಕರ ಸಹಕಾರ ಅಗತ್ಯವಿದೆ ಹಾಗಾಗಿ ನಾಳೆಯಿಂದ ಜೂನ್-7 ರ ವರೆಗೆ ಸ್ವಯಂಪ್ರೇರಿತ ಲಾಕ್ ಡೌನ್ ಗೆ ನಿರ್ಧರಿಸಲಾಯಿತು.

ಈ ಸಂಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಪಿ.ಕೆ.ಪಿ.ಎಸ್ ಸದಸ್ಯರಾದ ವಜಿರಪ್ಪ ಪೂಜಾರಿ, ಮಾಜಿ ಗ್ರಾ.ಪಂ ಸದಸ್ಯರಾದ ಮುತ್ತಣ್ಣ ನಾಡಗೌಡರ,ವರದಿಗಾರರಾದ ಶಂಕರ ಮಂಡಿ,ನವ ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಹಡಪದ, ಬಸವರಾಜ ಮಾದರ, ಕಿರಾಣಿ ಅಂಗಡಿ ಮಾಲಿಕರು, ವ್ಯಾಪಾರಸ್ಥರು, ವಿವಿಧ ಕಸಬುದಾರರು, ಗ್ರಾ.ಪಂ ಸಿಬ್ಬಂದಿಯವರು, ಕಂದಾಯ ಇಲಾಖೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸಂಪರ್ಕಿತರ ಕೋವಿಡ್ ಪರೀಕ್ಷೆ

ಗ್ರಾಮದಲ್ಲಿ ಕೋವಿಡ್ ಪಾಸಿಟಿವ್ ಬಂದವರನ್ನು ಹೋಮ್ ಐಸೋಲೇಶನ ಮಾಡಲಾಗಿದ್ದು ಅವರ ಸಂಪರ್ಕದಲ್ಲಿದ್ದ ಎಲ್ಲ ಕುಟುಂಬದ ಸದಸ್ಯರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯವರೊಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು.

Be the first to comment

Leave a Reply

Your email address will not be published.


*