ಗುಡೂರ ಹುಲ್ಲೇಶ್ವರ ದೇವಸ್ಥಾನದ ಜಾತ್ರೆ ರದ್ದು: ಕೇವಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆಗೆ ಅವಕಾಶ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:(ಗುಡೂರ)

ಕೋವಿಡ್ ಹರಡುತ್ತಿರುವ ಹಿನ್ನೆಲೆ ಮೇ.26 ರಂದು ನಡೆಯಲಿದ್ದ ಇಲಕಲ್ಲ ತಾಲೂಕಿನ ಗುಡೂರ ಗ್ರಾಮದ ಹುಲ್ಲೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಹೊರ ವಲಯದ ಪೋಲಿಸ್ ಠಾಣೆಯ ಆವರಣದಲ್ಲಿ ಸಭೆ ಸೇರಿ ನುಡಿ ಜಾತ್ರೆಯನ್ನು ಅದ್ದೂರಿಯಾಗಿ ನಡೆಸದೆ ಕೇವಲ ಧಾರ್ಮಿಕ ವಿಧಿ ವಿಧಾನಗಳ ಅತ್ಯಂತ ಸರಳವಾಗಿ ಆಚರಿಸಲು ತಿರ್ಮಾನಿಸಲಾಯಿತು.

ಮೇ-25 ಮತ್ತು 26 ರ ಎರಡು ದಿನ ದೇವರಿಗೆ ಅರ್ಚಕರ ಮುಖೇನ ವಿಧಿವತ್ತಾಗಿ ಪೂಜೆ ನಡೆಯಲಿದ್ದು ಕೇವಲ ಅರ್ಚಕರು ಮಾತ್ರ ಭಾಗವಹಿಸಲಿದ್ದು ಭಕ್ತರಿಗೆ ಪ್ರವೇಶ ವಿರುವುದಿಲ್ಲ.ಅಂದು ಬೆಳಿಗ್ಗೆ 5 ಘಂಟೆಗೆ ಪೂಜೆ ಮುಗಿಸಿ ನಂತರ ದೇವಸ್ಥಾನದ ಬಾಗಿಲು ಮುಚ್ಚಲು ತಿರ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇವಡಿ,ಗ್ರಾಮ ಲೆಕ್ಕಾಧಿಕಾರಿ ವಿಜಯ ರೋಣದ,ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಕುಲಕರ್ಣಿ,ಗ್ರಾಮದ ಪ್ರಮುಖರಾದ ಮಲ್ಲಣ್ಣ ಹೂಲಗೇರಿ,ನಾಗರಾಜ ಕಂಚೇರ,ತೊಟ್ಲಪ್ಪ ತೊಟ್ಲಪ್ಪನವರ,ದೇವಸ್ಥಾನದ ಅರ್ಚಕರು ಹಾಗೂ ಶ್ರೀ ಹುಲ್ಲೇಶ್ವರ ದೇವಸ್ಥಾನದ ಬಾಬುದಾರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*