ಉಜ್ಜಿನಿ: ಕೋ19ಲಸಿಕೆ ಪಡೆದ ಶ್ರೀಜಗದ್ಗುರುಗಳು

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

 

ವಿಜಯನಗರ:

ಜಿಲ್ಲೆ ಶ್ರೀಕ್ಷೇತ್ರ ಉಜ್ಜಿನಿ ಜಗದ್ಗುರುಗಳು, ಏ27ರಂದು ಸಮುದಾಯ ಅರೋಗ್ಯ ಕೇಂದ್ರದಲ್ಲಿ ಉಜ್ಜಿನಿ ಆಸ್ಪತ್ರೆ ವತಿಯಿಂದ ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಶ್ರೀ ಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳಿಗೆ, ಕರೋನ ಲಸಿಕೆ ಹಾಕುವುದರ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 

CHETAN KENDULI

ನಂತರ ಮಾತನಾಡಿದ ಜಗದ್ಗುರುಗಳವರು ಎಲ್ಲರೂ ಕರೋನ ಲಸಿಕೆ ಹಾಕಿಸಿಕೊಳ್ಳಿ, ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕರೋನ 2ನೇ ಅಲೆ ವ್ಯಾಪಕವಾಗಿ ಇರುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದರು. ನಂತರ 100 ಕ್ಕೂ ಅಧಿಕ ಜನರು ಲಸಿಕೆ ಪಡೆದರು. 

ಈ ಸಂಧರ್ಭದಲ್ಲಿ ವೈದ್ಯಾಧಿಕಾರಿ ಡಾ.ಪೃಥ್ವಿ,ಪೊನ್ನಮ್ಮ, ಮರುಳಾರಾಧ್ಯ,ವಿಜಯಕುಮಾ,. ರೂಪ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*