ಜಿಲ್ಲಾ ಸುದ್ದಿಗಳು
ಬಾಗಲಕೋಟೆ :
ಇಂದು ರಾತ್ರಿ 9 ರಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿರುವ ನಡುವೆಯೇ ಕೊರೋನಾ ನಿಯಂತ್ರಣಕ್ಕೆ ಇಳಕಲ್ಲ ತಾಲೂಕಾಡಳಿತ ವಿವಿಧ ಕ್ರಮಗಳಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೆಲೂರ ಗ್ರಾಮಾಡಳಿತವು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದು ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಸಮೀಕ್ಷೆಗೆ ಮುಂದಾಗಿದೆ. ಹೊರ ಜಿಲ್ಲೆಯಿಂದ ಬಂದವರಿಗೆ ನಾಲ್ಕೈದು ದಿನ ಹೋಂ ಕ್ವಾರಂಟೈನ್ ನಲ್ಲಿದ್ದು ಕಡ್ಡಾಯವಾಗಿ ಮಾಸ್ಕ,ಸ್ಯಾನಿಟೈಸರ್ ಬಳಕೆ ಮಾಡಲು ಸೂಚನೆ ನೀಡಲಾಯಿತು.
ಈಗಾಗಲೆ ಹುಬ್ಬಳ್ಳಿ, ಶಿವಮೊಗ್ಗ,ಮಂಗಳೂರು, ಉಡುಪಿ ಜಿಲ್ಲೆಗಳಿಂದ ಕೆಲೂರ ಗ್ರಾಮಕ್ಕೆ 20ಕ್ಕೂ ಅಧಿಕ ಜನರು ಆಗಮಿಸಿದ್ದು ಇವರೆಲ್ಲರ ಸಮೀಕ್ಷೆ ಮಾಡಲಾಗಿದ್ದು ಕೋವಿಡ್19 ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರದಿರಲು ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗೇಶ ನಾಡಗೌಡರ, ಸದಸ್ಯರಾದ ಉಮೇಶ ಹೂಗಾರ,ಬಾಬು ,ಗ್ರಾಮ ಲೆಕ್ಕಾಧಿಕಾರಿ ಧರ್ಮಣ್ಣ ಯತ್ನಟ್ಟಿ,ಗ್ರಾಮ ಪಂಚಾಯತಿ ಸಿಬ್ಬಂದಿ ರಮಗಪ್ಪ ತಳವಾರ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Be the first to comment