ಬಾಗಲಕೋಟೆ:
ಕೊರೋನಾ ವೈರಸ್ 2 ನೇ ಅಲೆ ಹೆಚ್ಚಳ ದಿನ ಕಳೆದಂತೆ ನಿಯಂತ್ರಣವನ್ನು ಮೀರುತ್ತಿದೆ. ಮತ್ತೊಂದೆಡೆ ಜನರು ಸಹ ಮಾರ್ಗಸೂಚಿಗಳನ್ನ ಫಾಲೋ ಮಾಡುತ್ತಿಲ್ಲ.ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ.ಕೊರೊನಾ 2 ನೇ ಅಲೆಯ ವೇಗವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ನಾಳೆ ರಾತ್ರಿ 9 ರಿಂದ ಮೇ-10 ರವರೆಗೆ ಒಟ್ಟು 14 ದಿನಗಳ ಕಾಲ ಲಾಕ್ ಡೌನ್ ಪ್ರಕಟಿಸಿರುತ್ತದೆ.
ಆದ್ದರಿಂದ ಇಳಕಲ್ಲ ತಾಲೂಕಾ ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನಿಂದ,ಇತರೆ ಜಿಲ್ಲೆಗಳಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದ ತಮ್ಮ ಸ್ವಂತ ಊರುಗಳಿಗೆ ಬರುವ ಜನರು ತಮ್ಮ,ತಮ್ಮ ಮನೆಯವರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ತಮ್ಮ ಊರಿಗೆ ಬಂದ ಮೇಲೆ ನಾಲ್ಕೈದು ದಿನಗಳವರೆಗೆ ಸ್ವಯಂ ಪ್ರೇರಿತವಾಗಿ ಮನೆಯಲ್ಲಿ ಪ್ರತ್ಯೇಕವಾಗಿದ್ದು,ಈ ನಾಲ್ಕೈದು ದಿನ ಪ್ರತ್ಯೇಕವಾಗಿದ್ದಾಗ ಯಾವುದೇ ಕೋವಿಡ್ ಲಕ್ಷಣಗಳು ಕಂಡು ಬರದಿದ್ದಲ್ಲಿ ಅವರು ಇತರೆ ಸಾಮಾನ್ಯರಂತೆ ಇರಬಹುದು ಎಂದು ಇಳಕಲ್ಲ ತಾಲೂಕಾ ಆಡಳಿತ ಪ್ರಕಟಣೆಯಲ್ಲಿ ತಿಳಸಿದೆ.
ಹೊರ ಜಿಲ್ಲೆಯಿಂದ ಹಾಗೂ ಹೊರ ರಾಜ್ಯದಿಂದ ಬಂದ್ರೆ ಸ್ವಯಂ ಪ್ರೇರಿತವಾಗಿ ಮನೆಯಲ್ಲೆ ಇರಬೇಕು: ಡಂಗುರ ಸಾರಿದ ಕೆಲೂರ ಗ್ರಾಮಾಡಳಿತ.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವವರು ಸ್ವಯಂ ಪ್ರೇರಿತವಾಗಿ ನಾಲ್ಕೈದು ದಿನಗಳ ಕಾಲ ಮನೆಯಲ್ಲೆ ಇದ್ದು ಬಳಿಕ ಕೋವಿಡ್ ಲಕ್ಷಣಗಳು ಕಂಡುಬರದಿದ್ದರೆ ಸಾಮಾನ್ಯ ಜನರ ಜೊರೆ ಬರೆಯಬೇಕು ಎಂದು ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದಲ್ಲಿ ಡಂಗುರ ಸಾರಿಸಿ ಎಚ್ಚರಿಕೆ ನೀಡಲಾಗಿದೆ.
Be the first to comment