ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ತಾಲೂಕಿನಲ್ಲಿ ಕುತುಹಲಕಾರಿಯಾಗಿದ್ದ ಯರಝರಿ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶವು ಸೋಮವಾರ ಹೊರಬಂದಿದ್ದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸೋಮಶೇಖರ ಬಸವರಾಜ ದೇಶಮುಖ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ ಒಟ್ಟು 11 ಜನ ಸದಸ್ಯರಲ್ಲಿ ಸೋಮಶೇಕರ ದೇಶಮುಖ ಅವರು ನಾಮಪತ್ರ ಸಲ್ಲಿಸಿದ್ದರು. ಡಿ.6 ರಂದು ಘೋಷಣೆಯಾಗಬೇಕಾದ ಫಲಿತಾಂಸವು ಚುನಾವಣೆಯ ಸಭೆಗೆ ಕೊರಂ ಭರ್ತಿಯಾಗದ ಕಾರಣ ಚುನಾವಣೆ ಪ್ರಕ್ರೀಯೆಯನ್ನು ಯತಾರೀತಿಯಲ್ಲಿ ಮುಂದೋಡಿಸಿದ ಚುನಾವಣಾಧಿಕಾರಿ ಸಂತೋಷ ಇಲಕಲ್ಲ ಅವರು ಡಿ.11 ಸೋಮವಾರ ಫಲಿತಾಂಶ ಘೋಷಣೆಯ ದಿನಾಂಕವನ್ನು ನಿಗದಿಪಡಿಸಿದ್ದರು. ಅದರಂತೆ ಸೋಮವಾರ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಘೋಷಣೆ ಮಾಡಿದರು.
ಮುಂದೋಡಿಕೆಯ ಸಭೆಯಲ್ಲೂ ಹಾಜರಾದ ಕೇವಲ 6 ಸದಸ್ಯರು:
ಕೊರಂ ಭರ್ತಿಯಾಗದ ಕಾರಣ ಚುನಾವಣೆಯನ್ನು ಮುಂದೊಡಿಸಿದ್ದ ಚುನಾವಣಾಧಿಕಾರಿಗಳು ಸೋಮವಾರವೂ ಮಲ್ಲಣ್ಣ ಅಪರಾಧಿ ಅವರ ಪ್ಯಾನಲ್‌ನ 6 ಜನ ಸದಸ್ಯರುಗಳು ಮಾತ್ರ ಹಾಜರಾಗಿದ್ದರು. ಚುನಾವಣೆ ದಿನಾಂಕ ಮುಂದೊಡಿಸಿದ್ದರೂ ಹಾಜರಾಗದ ಉಳಿದ 5 ಸದಸ್ಯರನ್ನು ಗೈರು ಹಾಜರಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಫಲಿತಾಂಶವನ್ನು ಘೋಷಣೆ ಮಾಡಲಾಯಿತು.
ಚುನಾವಣಾ ಪ್ರಕ್ರೀಯೆಯಲ್ಲಿ ಬ್ಯಾಂಕ್ ಸದಸ್ಯರಾದ ಸಾಹೇಬಪಟೇಲ ಪೀರಪಟೇಲ ಮೋಕಾಶಿ, ಬಸನಗೌಡ ಮಹಾಂತಗೌಡ ಪಾಟೀಲ, ಸಿದ್ದಪ್ಪ ಗುಂಡಪ್ಪ ಗೌಡವ, ಪರಮಣ್ಣ ಭೀಮಪ್ಪ ಹುಲ್ಲೂರ, ಸೋಮಶೇಕರ ಬಸವರಾಜ ದೇಶಮುಖ, ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಖಾನಗೌಡ ಇದ್ದರು.
ವಿಜಯೋತ್ಸವ:
ಅಧ್ಯಕ್ಷ ಸ್ಥಾನದ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಿಕೆಪಿಎಸ್ ಎದುರಿಗೆ ಪಟಾಕಿ ಸಿಡಿಸಿ ಗೂಲಾಲ ಎರಚುವ ಮೂಲಕ ಎಂ.ಎಂ.ಅಪರಾಧಿ ಅವರ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮುತ್ತಣ್ಣ ಗಡೇದ, ಇಬ್ರಾಹಿಂ ಮಾಗಿ, ಮುಡಂಖರಾದ ಬಾಪು ದೇಶಮುಖ, ಲಕ್ಕಪ್ಪ ಹುಲ್ಲೂರ, ಹಣಮಂತ ಸಿಂದಗಿ, ಪರಸಪ್ಪ ಚಲಮಿ, ಎಂ.ಬಿ.ಗುರಿಕಾರ, ಮಾಲು ಚಲಮಿ ಸೇರಿದಂತೆ ಇತರರಿದ್ದರು.
Be the first to comment