ಯಾವುದೇ ಆದೇಶವಿಲ್ಲದೇ ಪಂಚಾಯತಿಯಿಂದ ಚರಂಡಿ ಕಾಮಗಾರಿಗೆ ಚಾಲನೆ: ಜಮೀನು ಹಾನಿಗೀಡು ಮಾಡಿದ ಪಿಡಿಓ….!!! ಅನಧಿಕೃತ ಚರಂಡಿ ಕಾಮಗಾರಿಯನ್ನು ನಿಲ್ಲಿಸುವಂತೆ ರೈತ ಬಸನಗೌಡ ಪಾಟೀಲ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ನ.27:

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಯಾವುದೇ ಆದೇಶವಿಲ್ಲದೇ ರೈತನ ಜಮೀನು ಹಾಳು ಮಾಡುವ ದುರುದ್ದೇಶದಿಂದ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದು ಕೂಡಲೇ ಇದನ್ನು ನಿಲ್ಲಿಸಿ ರೈತನಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ತಾಲೂಕಿನ ಅಗಸಬಾಳ ಗ್ರಾಮಸ್ಥರು ಹಾಗೂ ನೊಂದ ರೈತ ಬಸನಗೌಡ ಪಾಟೀಲ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಗಸಬಾಲ ಗ್ರಾಮದ ಸ.ನಂ.೭೩/೧ರ ಒಟ್ಟು ೮ ಎಕರೆ ಜಮೀನಿನಲ್ಲಿ ಈಗಾಗಲೇ ರಸ್ತೆಗಾಗಿ ಸ್ವಾಧಿನ ಮಾಡಿಕೊಳ್ಳಲಾಗಿತ್ತು. ಆದರೆ ಕೆಲ ರಾಜಕೀಯ ದುರುದ್ದೇಶದಿಂದ ಅರವಿಂದ ಕಾಶಿನಕುಂಟಿ ಹಾಗೂ ದುಂಡಪ್ಪ ಅರಸಣಗಿ ಎಂಬುವರು ಇಲ್ಲಸಲ್ಲದ ಆರೋಪವನ್ನು ಹೂಡಿ ಪಂಚಾಯತಿ ಅಧಿಕಾರಿಗಳಿಂದಲೇ ಅನಧಿಕೃತ ಕಾಮಗಾರಿಯನ್ನು ನಡೆಸಿದ್ದಾರೆ. ಇದನ್ನು ತಡೆಯಲು ಹೋದ ಪಾಟೀಲ ಕುಟುಂಬಸ್ಥರಿಗೆ ದಬ್ಬಾಲಿಕೆ ಮಾಡಿದ್ದಾರೆ.



ನೋಟಿಸ್‌ಗೂ ಕಿವಿಗೊಡದ ಗ್ರಾಪಂ ಅಧಿಕಾರಿ:
ಈಗಾಗಲೇ ಬಸನಗೌಡ ಪಾಟೀಲ ಅವರ ಜಮೀನಿನಲ್ಲಿ ಕೆಲ ಪುಢಾರಿಗಳು ದಬ್ಬಾಳಿಕೆಯಿಂದ ಅನಧಿಕೃತ ಚರಂಡಿ ಕಾಮಗಾರಿಯನ್ನು ನಡೆಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಏರಲಾಗಿದೆ. ಅಲ್ಲದೇ ಬಸನಗೌಡ ಪಾಟೀಲ ಅವರ ವಕೀಲರು ಇದರ ಬಗ್ಗೆ ನೋಟಿಸನ್ನು ನೀಡಿದ್ದಾರೆ. ಆದರೂ ಇದಕ್ಕೆ ಕಿವಿಗೊಡದ ಪಿಡಿಓ ಅವರು ಪುಢಾರಿಗಳೊಂದಿಗೆ ಶಾಮಿಲಾಗಿ ಅನಧಿಕೃತ ಕಮಗಾರಿಯನ್ನು ನಡೆಸಿದ್ದಾರೆ.


ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ ಪುಢಾರಿಗಳು:
ಆದಿಕಾಲದಿಂದಲೂ ಚರಂಡಿ ನೀರು ಗೌಠಾಣ ಜಾಗದಲ್ಲಿ ಹರಿಯುತ್ತಿತ್ತು. ಆದರೆ ಗ್ರಾಮದ ಶಂಕರಗೌಡ ಕಶಿನಕುಂಟಿ, ಶಂಕರ ಚಕ್ರಸಾಲಿ(ಕುಂಬಾರ), ಭೀಮರಾಯ ಕಾಶಿನಕುಂಟಿ, ಬಸಪ್ಪ ಬಿಸನಾಳ ಅವರು ಒಳಸಂಚು ಮಾಡಿ ಗೌಠಾಣ ಜಾಗದಲ್ಲಿ ಹರಿಯುತ್ತಿದ್ದ ಚರಂಡಿ ನೀರು ನಮಗೆ ಸಂಬAಧಿಸಿದ ಜಮೀನಿನ ಒಡ್ಡಿನಲ್ಲಿಯೇ ಹರಿಯುತ್ತಿತ್ತು ಎಂದು ಪಂಚಾಯತಿಯ ಗುಡಿಮನಿ ಅವರಿಗೆ ಸುಳ್ಳು ಮಾಹಿತಿಯನ್ನು ನೀಡಿ ನಮ್ಮ ಜಮೀನಿನ ಒಡ್ಡು ಜೆಸಿಬಿಯಿಂದ ತೆಗೆದು ಜಮೀನನ್ನು ಹಾಳು ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ ಆರೋಪಿಸಿದ್ದಾರೆ.




ಕಾಮಗಾರಿಗೆ ಪಂಚಾಯತಿಯಿಂದ ಆದೇಶವಿಲ್ಲ:
ಜಮೀನಿನಲ್ಲಿ ಪಂಚಾಯತಿಯಿಂದ ನಿರ್ಮಾಣ ಮಾಡುತ್ತಿರುವ ಚರಂಡಿಗೆ ಢವಳಗಿ ಗ್ರಾಮ ಪಂಚಾಯತಿಯಲ್ಲಿ ಹಾಗೂ ತಾಪಂನಲ್ಲಿ ಯಾವುದೇ ಅಧಿಕೃತವಾದ ಆದೇಶವಿಲ್ಲ. ಆದರೂ ಪಂಚಾಯತಿ ಅಭೀವೃದ್ಧಿ ಅಧಿಕಾರಿಗಳು ಕೆಲ ಪುಢಾರಿಗಳೊಂದಿಗೆ ಕೈಜೋಡಿಸಿ ಕಾಮಗಾರಿಯನ್ನು ಮಾಡುತ್ತಿದ್ದಾರೆ ಎಂದು ಪಾಟೀಲ ಕುಟುಂಬಸ್ಥರು ಆರೋಪಿಸಿದ್ದಾರೆ.



ಕೂಡಲೇ ಈ ಹಿಂದೆ ಪಂಚಾಯತಿಯಿಂದ ಗೌಠಾಣ ಜಾಗದಲ್ಲಿ ನೀರು ಹರಿಯಲು ಹಾಕಿದ ಚರಂಡಿಯನ್ನು ಅಲ್ಲಿಯೇ ನಿರ್ಮಾಣಿಸುವಂತೆ ಆದೇಶಿಸಿ ರೈತನಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಸನಗೌಡ ಬಿರಾದಾರ, ಜಿ.ಎನ್.ಪೂಜಾರಿ, ಶಿವಶಂಕರಯ್ಯ ಉಪ್ಪಲದಿನ್ನಿ, ರವೀಂದ್ರ ಪಾಟೀಲ, ಶಿವನಗೌಡ ಪಾಟೀಲ ಇದ್ದರು.

Be the first to comment

Leave a Reply

Your email address will not be published.


*