ರಾಜ್ಯ ಸರ್ಕಾರ‌ದಿಂದ ಮೀನುಗಾರರ ರಕ್ಷಣೆಗೆ ‘ಕಡಲು’ ಆ್ಯಪ್

ವರದಿ ಯೋಗಿಶ ಶಿರೂರ ಉಡುಪಿ

 

ಉಡುಪಿ: ಕಡಲಿಗೆ ಮೀನುಗಾರಿಕೆ‌ಗೆ ಇಳಿಯುವ ಮೀನುಗಾರರ ರಕ್ಷಣೆಗಾಗಿ ರಾಜ್ಯ ಸರ್ಕಾರ ‘ಕಡಲು’ ಆ್ಯಪ್ ಅನ್ನು ಸಿದ್ಧಪಡಿಸಿದೆ.

ಆಳ ಸಮುದ್ರ ಮೀನುಗಾರಿಕೆ‌ಗೆ ತೆರಳುವ ಬೋಟ್‌ಗಳಲ್ಲಿ ಮೀನುಗಾರಿಕೆ‌ಗೆ ತೆರಳುವ ಮೀನುಗಾರರ ವಿವರಗಳನ್ನು ಈ ಆ್ಯಪ್‌ನಲ್ಲಿ ದಾಖಲಿಸುವ ಮೂಲಕ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲು ಸರ್ಕಾರ ಈ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಆ್ಯಪ್‌ನಲ್ಲಿ ಬಂದರು ಪ್ರದೇಶದಿಂದ ಮೀನುಗಾರಿಕೆ‌ಗೆ ತೆರಳಿದ ಮತ್ತು ವಾಪಾಸ್ಸಾದ ಜನರ ವಿವರ ದಾಖಲು ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ಬೋಟ್‌ನಲ್ಲಿ ಇರುವವರ ಸಂಖ್ಯೆ, ಬೋಟ್‌ನ ನೋಂದಣಿ ಸಂಖ್ಯೆ, ಪ್ರಯಾಣಿಕರ ಹೆಸರು, ಅವರ ಆಧಾರ್ ಸಂಖ್ಯೆಯನ್ನು ಈ ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಇದು ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಕಡಲಿನಲ್ಲಿರುವ ಮೀನುಗಾರರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದೆ. ಜೊತೆಗೆ ಅಪಾಯದ ಸನ್ನಿವೇಶದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೂ ಹೆಚ್ಚು ಪೂರಕವಾಗಲಿದೆ. ಸಮುದ್ರ ನಡುವೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಈ ಆ್ಯಪ್ ಮಾಹಿತಿ ನೀಡಲಿದೆ. ಜೊತೆಗೆ ಕಡಲ ತಡಿಯ ವಾತಾವರಣದ ಬಗ್ಗೆಯೂ ಮೀನುಗಾರರಿಗೆ ಮಾಹಿತಿ ಒದಗಿಸುವ ಕೆಲಸವನ್ನು ಮಾಡಲಿದೆ.

ಈ ಆ್ಯಪ್ ಬಳಕೆಯಿಂದ ದೋಣಿಗಳ ಚಲನವಲನ, ಮೀನುಗಾರಿಕೆ ಮಾಡುತ್ತಿರುವ ಪ್ರದೇಶದ ಮಾಹಿತಿ ಸಹ ಲಭ್ಯವಾಗಲಿದೆ. ಮೀನುಗಾರರ ಸುರಕ್ಷತಾ ದೃಷ್ಟಿಯಿಂದ ಈ ಆ್ಯಪ್ ಹೆಚ್ಚು ಉಪಯೋಗವಾಗಲಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*