ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ನ.4:
ಮುದ್ದೇಬಿಹಾಳ ಮಿನಿ ವಿಧಾನ ಸೌಧದ ಆವರಣದಲ್ಲಿ ಇಡಲಾಗಿರುವ ಡಬ್ಬಾ ಅಂಗಡಿಗಳು ಸಂಪೂರ್ಣ ಅನಧಿಕೃತವಾಗಿದ್ದು ಹಾಗೂ ಇವುಗಳಿಂದ ಸಾರ್ವಜನಿಕರಿಗೂ ಸಮಸ್ಯೆಯಾಗಿದ್ದು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಯುವಜನ ಸೇನೆ ಸಂಘಟನೆ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ ಜಿ.ಎಸ್.ಮಳಗಿ ಅವರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಜಂಟಿ ಮನವಿ ಸಲ್ಲಿಸಿದರು.
ತಹಸೀಲ್ದಾರ ಕಛೇರಿ ಆವರಣದಲ್ಲಿ ಇಟ್ಟಂತಹ ಡಬ್ಬಾ ಅಂಗಡಿಗಳು ಸಂಪೂರ್ಣವಾಗಿ ಅನಧಿಕೃತವಾಗಿವೆ. ಇಂತಹ ಅಂಗಡಿಗಳಿಗೆ ವಿದ್ಯುತ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಅಂಗಡಿಗಳ ಮಾಲಿಕರು ಡಬ್ಬಾ ಅಂಗಡಿಗಳನ್ನು ಬೇರೊಬ್ಬರಿಗೆ ದುಪ್ಪಟ್ಟು ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಅಲ್ಲದೇ ದಿನನಿತ್ಯ ತಹಸೀಲ್ದಾರ ಕಛೇರಿಗೆ ದ್ವಿಚಕ್ರ ವಾಹನದ ಮೂಲಕ ಆಗಮಿಸುವ ಸಾರ್ವಜನಿಕರಿಗೆ ವಾಹನ ನಿಲುಗಡೆ ಇಲ್ಲದ ಕಾರಣ ತುಂಬಾ
ಅನಾನುಕೂಲವಾಗಿದೆ. ಆದ್ದರಿಂದ ಕೂಡಲೇ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರೆವುಗೊಳಿಸಿ ಕಛೇರಿ ಸುತ್ತಲೂ ಕಂಪೌಂಡ ನಿರ್ಮಾಣ ಮಾಡಬೇಕು. ಈಗಾಗಲೇ ಕಂಪೌಂಡ ನಿರ್ಮಾಣ ಮಾಡಲು ಪಿಡಬ್ಲೂಡಿ ಇಲಾಖೆಯಲ್ಲಿ ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದ್ದು ಇದನ್ನು ಕೂಡಲೇ ತಹಸೀಲ್ದಾರ ಅವರು ತನಿಖೆ ಮಾಡಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಮುಂದಾಗಬೇಕು. ನ.10ರೊಳಗೆ ಸಾರ್ವಜನಿಕರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ತಹಸೀಲ್ದಾರ ಕಚೇರಿಗೆ ಬೀಗ ಜಡೇದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಡಿವೈಡರ್ ಮಾಡದ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ ಜನರು:
ಮುದ್ದೇಬಿಹಾಳ ತಹಸೀಲ್ದಾರ ಕಛೇರಿಗೆ ಆಗಮಿಸಲು ಕಾರ್ ತೆಗೆದುಕೊಂಡು ಬಂದರೆ ಅದೇ ಗತಿ. ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ಮಿನಿ ವಿಧಾನಸೌದಕ್ಕೆ ತಿರುವು ಪಡೆಯಲು ಹೋದ ಕಾರೊಂದು ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ಗಮನಿಸಿದ ಸ್ಥಳೀಯರು ಡಿವೈಡರ್ ಮಾಡದ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಹಿಢಿ ಶಾಪ ಹಾಕಿದ್ದು ಕಂಡು ಬಂದಿತು.
ಈ ಸಂದರ್ಭದಲ್ಲಿ ಯುವಜನ ಸೇನೆ ತಾಲೂಕಾಧ್ಯಕ್ಷ ಪ್ರಕಾಶ ಕೆಂದೂಳಿ, ಉಪಾಧ್ಯಕ್ಷ ಜಗದೇವರಾವ ಚಲವಾದಿ, ಚಾಂದಅಹ್ಮದ ಗೋಮರ್ಶಿ, ಸಿದ್ದು ಬಿರಾದಾರ, ಕಾಶೀಮ ನಾಲತವಾಡ, ಸಂಗು ಬಿರಾದಾರ, ರಾಜಹ್ಮದ ಗೋಮರ್ಶಿ ಇದ್ದರು.
Be the first to comment