ಬಾಗಲಕೋಟೆ: ಅಮೀನಗಡ ಪಟ್ಟಣದ ಕ್ರೀಯಾಶೀಲ ಪತ್ರಕರ್ತ ಹಾಗೂ ಕರದಂಟು ಕೋಟೆ ಪತ್ರಿಕೆಯ ಸಂಪಾದಕರಾದ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಸೇವೆಯನ್ನು ಗುರುತಿಸಿ ತಾಲೂಕ ಆಡಳಿತ ಮಂಡಳಿ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ನಗರದ ತಾಲೂಕ ಆಡಳಿತ ಭವನದಲ್ಲಿ ತಾಲೂಕಾ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ,ಕಳೆದ ಹಲವಾರು ವರ್ಷಗಳಿಂದ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಎಚ್.ಎಚ್.ಬೇಪಾರಿ ಅವರ ಸಾಧನೆ ಗುರುತಿಸಿ ತಾಲೂಕ ಆಡಳಿತ ಮಂಡಳಿ ವತಿಯಿಂದ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಸ್ಥಳದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ, ಪಾಟೀಲ, ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ,ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಮಹಾಂತೇಶ ಹಳ್ಳೂರ,ಖ್ಯಾತ ವೈದ್ಯರಾದ ಡಾ.ಮಹಾಂತೇಶ ಕಡಪಟ್ಟಿ ಸೇರಿದಂತೆ ಇನ್ನಿತರರು ಇದ್ದರು.
ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿಯವರಿಂದ ಸನ್ಮಾನ.
ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಪತ್ರಕರ್ತ ಬೇಪಾರಿ ಅವರಿಗೆ ಸನ್ಮಾನ ಮಾಡಿ ಮಾತನಾಡಿದ ಶ್ರೀಗಳು,ಸೇವಾ ಮನೋಭಾವದಿಂದ ಕಳೆದ ಹಲವಾರು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಠದ ಶಿಷ್ಯರಾಗಿರುವ ಪತ್ರಕರ್ತ ಎಚ್.ಎಚ್.ಬೇಪಾರಿ ಅವರಿಗೆ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ನಮಗೆ ತುಂಬ ಸಂತಸವಾಗಿದೆ ಇದೇ ರೀತಿ ಅವರ ಸೇವೆ ನಿರಂತರವಾಗಿರಲಿ ಹಾಗೂ ಮುಂಬರುವ ದಿನಮಾನಗಳಲ್ಲಿ ಇನ್ನು ಅವರಿಗೆ ಉನ್ನತವಾದ ಗೌರವಸಿಗಲಿ ಎಂದರು.
Be the first to comment