ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಇಂದು ಬೆಳಿಗ್ಗೆ 07.00 ಗಂಟೆಗೆ ಸೆಕ್ಟರ ನಂ-15 ರ ಶ್ರೀ ಅಂಬಾ ಭವಾನಿ ದೇವಸ್ಥಾನ ದಿಂದ ಸುಕ್ಷೇತ್ರ ತುಳಜಾಪೂರ ಭಕ್ತ ಮಂಡಳಿಯು ಪ್ರಾರಂಭಿಸಿದ ಪಾದಯಾತ್ರೆ ಸೆಕ್ಟರ ನಂ 29ರ ಶ್ರೀ ಮಹಾಲಕ್ಷ್ಮಿ ಕೋರವಮ್ಮ ದೇವಸ್ಥಾನ, ಸೆಕ್ಟರ ನಂ 50ರ ಅಂಬಾ ಭವಾನಿ ದೇವಸ್ಥಾನ ಮಾರ್ಗವಾಗಿ ಗದ್ದನಕೇರಿ ತಾಂಡಾದ ಶ್ರೀ ದುರ್ಗಾ ದೇವಿ ದೇವಸ್ಥಾನದ ವರೆಗೆ ತಲುಪಿತು.
ವಿಜಯದಶಮಿಯ ನಂತರದ ಹುಣ್ಣಿಮೆಯ ಪ್ರಯುಕ್ತ ಪಾದಯಾತ್ರೆ ಮುಖಾಂತರ ಗದ್ದನಕೇರಿ ತಾಂಡಾ ಶ್ರೀ ದುರ್ಗಾ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಸುಲಾಖೆ ಮಾತನಾಡಿ ಪ್ರತಿ ವರ್ಷ ತುಳಜಾಪೂರ ಶ್ರೀ ತುಳಜಾ ಭವಾನಿ ದೇವಿಯ ದರ್ಶನಕ್ಕೆ ಬಾಗಲಕೋಟೆಯಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಹೋಗಿ ಶ್ರೀ ದೇವಿಯ ಆಶೀರ್ವಾದ ಪಡೆಯುತ್ತಿದ್ದರು ಆದರೆ ಈ ವರ್ಷ ಕೊರೊನ ಎಂಬ ಮಹಾಮಾರಿ ಕಾರಣದಿಂದ ಮಹಾರಾಷ್ಟ್ರದ ಎಲ್ಲಾ ದೇವಸ್ಥಾನ ಗಳು ಬಂದ ಇರುವದರಿಂದ ಶ್ರೀ ತುಳಜಾಪೂರ ಸಹ ಬಂದ ಇರುತ್ತದೆ, ಹಾಗೂ ನವರಾತ್ರಿಯ ಹಬ್ಬದ ಹತ್ತು ದಿನಗಳ ಕಾಲ ದೇವಿಯ ಪೂಜೆ ವಿಶೇಷ ಹಾಗೂ ದುರ್ಗಾಷ್ಟಮಿಯ ದಿನದಂದು ದೇವಿ ದುಷ್ಟಸಂಹಾರ ಮಾಡುವ ಮೂಲಕ ಶಿಷ್ಟರ ರಕ್ಷಣೆ ಮಾಡುತ್ತಾಳೆ.ನಂತರ ಮಹಾನವಮಿಗೆ ದೇವಿಗೆ ಬಲಿ ಕೊಡುವ ಮೂಲಕ ಭಕ್ತರು ವಿಶೇಷ ಪೂಜೆ ಮಾಡುತ್ತಾರೆ.
ವಿಜಯದಶಮಿಯಂದು ದೇವಿಗೆ ಬಂಗಾರವನ್ನು (ಬನ್ನಿಯನ್ನು) ಅರ್ಪಿಸಿ ನಂತರ ಬನ್ನಿಯನ್ನು ಒಬ್ಬರಿಗೊಬ್ಬರು ಪರಸ್ಪರ ಹಂಚಿಕೊಳ್ಳುತ್ತಾರೆ.
ವಿಜಯದಶಮಿ ನಂತರ ಐದು ದಿನಗಳು ದೇವಿಯ ದೇವಸ್ಥಾನ ಬಂದ ಇರುತ್ತದೆ, ಹುಣ್ಣಿಮೆಯ ದಿನ ಭಕ್ತರಿಗೆ ದೇವಿಯ ದರ್ಶನ ವಿಶೇಷ ಮಾಡಿ ಧರ್ಮ ಕಾರ್ಯಕ್ಕೆ ಎಲ್ಲರೂ ದೇವಿ ಆಶಿರ್ವಾದ ಪಡೆಯೋನ ಎಂದು ಹೇಳಿದರು.
ನಂತರ ಸಂತೋಷ ಹೋಕ್ರಾಣಿ ಅವರು ಮಾತನಾಡಿ ದಸರಾ ಹಾಗೂ ದೀಪಾವಳಿಯ ಶುಭಾಶಯಗಳು ತಿಳಿಸಿ ಭಕ್ತರಿಗೆ ದೇವಿಯ ಆಶೀರ್ವಾದ ಸದಾ ಇರಲಿ ಎಂದರು ನಂತರ ಪ್ರಾಸ್ತಾವಿಕವಾಗಿ ಜಿಲ್ಲಾ ಪಂಚಾಯಿತಿ ಸದಸ್ಯರು ಹೂವಪ್ಪ ರಾಠೋಡ ಮಾತನಾಡಿ ದುರ್ಗಾದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲ್ಲಿ ದೇವಿ ಭಕ್ತರಿಗೆ ಬೇಡಿದ್ದ ನೀಡುವ ಕಲ್ಪವೃಕ್ಷವಿದಂತೆ ಎಂದು ಪಾದಯಾತ್ರೆಗಳನ್ನು ಉದ್ದೇಶಿಸಿ ನುಡಿದರು ಧರ್ಮ ಕಾರ್ಯ ಮಾಡುತ್ತಿರುವ ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ಈ ಸಂದರ್ಭದಲ್ಲಿ ಬಸವರಾಜ ಕಟಗೇರಿ, ಅಶೋಕ ಮತ್ತಿನಮಠ,ಆಲೇಶ ಬಳ್ಳಾರಿ, ಶಂಕರ ಕೆಂಚನವರ, ರಾಜು ಗೌಳಿ, ರಾಜು ಬಾಸೂತಕರ್ ಅಶೋಕ್ ಮಹಿಂದ್ರಕರ ಮತ್ತಿತ್ತರು ಉಪಸ್ಥಿತರಿದ್ದರು.
Be the first to comment