ಮುದ್ದೇಬಿಹಾಳ ಪುರಸಭೆ ಅಧ್ಯಕ್ಷೆ ಜೆಡಿಎಸ್ ಅಧಿಕೃತ ಅಭ್ಯರ್ಥಿ….!!! ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನೆಡೆಯುತ್ತಿದೆ ಗಲೀಜು ರಾಜಕಾರಣ…!!! ಜೆಡಿಎಸ್ ಪಕ್ಷದವರನ್ನು ಬೆಂಬಲಿಸಿದ ಸರ್ವರಿಗೂ ಧನ್ಯಾವದ ಹೇಳಿದರ ಮಂಗಳಾದೇವಿ ಬಿರಾದಾರ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.30:
ಪ್ರತಿಭಾ ಅಂಗಡಗೇರಿ ಅವರನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ದುರುದ್ದೇಶ ಕಾಂಗ್ರೆಸ್ ಮುಖಂಡರು ಇಟ್ಟುಕೊಂಡಿದ್ದರೆ ಮೊದಲು ಅವರನ್ನು ನಮ್ಮ ಪಕ್ಷದಿಂದ ರಾಜಿನಾಮೆ ಕೊಡಿಸಿ ನಂತರ ಕಾಂಗ್ರೆಸ್ ಪಕ್ಷದಿಂದ ಮತ್ತೊಮ್ಮೆ  ಚುನಾಯಿತ ಸದಸ್ಯರನ್ನಾಗಿ ಮಾಡಿಸಬೇಕಿತ್ತು. ಅಂಗಡಗೇರಿ ಅವರಿಗೆ ವಾರ್ಡನಲ್ಲಿ ಜೆಡಿಎಸ್ ಪಕ್ಷ ಎನ್ನುವದರಿಂದಲೇ ಮತದಾರರು ಮತಹಾಕಿದ್ದಾರೆ ಎನ್ನುವುದು ಯಾರೂ ಮರೆಯಬಾರದು ಎಂದು ಮಂಗಳಾದೇವಿ ಬಿರಾದಾರ ಪರೋಕ್ಷವಾಗಿ ಕಿಡಿಖಾರಿದರು.



ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಜೆಡಿಎಸ್ ಅಕೃತ ಅಭ್ಯರ್ಥಿಗೆ ಬೆಂಬಲಿಸಿ ಸೂಕ್ತಸ್ಥಾನ ಮಾನ ದೊರಕಿಸಿದ್ದಕ್ಕೆ ನಮ್ಮ ಪಕ್ಷದಿಂದ ಧನ್ಯವಾಗಳನ್ನು ಅರ್ಪಿಸುತ್ತೇವೆ. ಆದರೆ ಕೆಲವರು ಅಭ್ಯರ್ಥಿಯ ಮೇಲೆ ಒತ್ತಡ ಹೇರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎನ್ನುವಂತೆ ಹೇಳುವುದು ಕೀಳ ರಾಜಕಾರಣ ಮಾಡಿದಂತಾಗುತ್ತದೆ ಎಂದು ಅವರು ಪರೋಕ್ಷವಾಗಿ ಮಾಜಿ ಸಚಿವ ನಾಡಗೌಡ ಅವರ ಮೇಲೆ ಹರಿಹಾಯ್ದರು.

ರಾಜಕೀಯ ಎನ್ನುವುದು ಶ್ರೇಯೋಭಿವೃದ್ಧಿಗಾಗಿ:

ರಾಜಕೀಯ ಮಾಡುವುದು ಸಮಾಜದ ಶ್ರೇಯೋಭಿವೃದ್ಧಿಗಾಗಿ. ಆದರೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ರಾಜಕೀಯ ಎನ್ನುವುದು ಆರ್ಥಿಕವಾಗಿ ಬೆಳೆದು ಇನ್ನೊಬ್ಬರನ್ನು ಕಂಗಾಲು ಮಾಡುವುದಾಗಿದೆ. ಇಂತಹ ರಾಜಕೀಯಕ್ಕೆ ಇಂದಿನ ರಾಜಕಾರಣಿ ಮುಗಿಬಿದ್ದಿದ್ದು ನಾಚಿಕೆಗೇಡಾಗಿದೆ ಎಂದು ಮಂಗಳಾದೇವಿ ಬಿರಾದಾರ ಹೇಳಿದರು.



ಜೆಡಿಎಸ್‌ನಿಂದ ಯಾರೂ ಕಾಂಗ್ರೆಸ್‌ಗೆ ಸೇರಿಲ್ಲ:
ಮುದ್ದೇಬಿಹಾಳ ಪುರಸಭೆ ಚುನಾಯಿತ ಸದಸ್ಯರಲ್ಲಿ ಇಬ್ಬರೂ ಜೆಡಿಎಸ್ ಪಕ್ಷದಿಂದ ಆಯ್ಕೆಯಾದವರಿದ್ದಾರೆ. ಇವರಲ್ಲಿ ಯಾರೊಬ್ಬರೂ ಕಾಂಗ್ರೆಸ್‌ಗೆ ಸೇರಿಲ್ಲ. ನೈತಿಕತೆ ಚೌಕಟ್ಟಿನಲ್ಲಿ ನಡೆಯುವುದನ್ನು ಮೊದಲು ರಾಷ್ಟ್ರೀಯ ಪಕ್ಷದವರು ತಿಳಿದುಕೊಳ್ಳಬೇಕಿದೆ ಎಂದು ಮಂಗಳಾದೇವಿ ಬಿರಾದಾರ ಕಿಡಿಖಾರಿದರು.


ಮುದ್ದೇಬಿಹಾಳ ತಾಪಂ ಹಾಗೂ ನಾಲತವಾಡ ಪಪಂಯಲ್ಲೂ ಗುಂಡಾಗಿರಿಯ ವರ್ತನೆ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ರಾಜಕೀಯ ಗಲೀಜಾಗಿದೆ ಎನ್ನುವುದಕ್ಕೆ ಇತ್ತಿಚಿಗಷ್ಟೇ ನಡೆದ ನಾಲತವಾಡ ಪಪಂ ಹಾಗೂ ಮುದ್ದೇಬಿಹಾಳ ತಾಪಂ ಅಧ್ಯಕ್ಷ ಚುನಾವಣೆಯೇ ಸಾಕ್ಷಿಯಾಗಿದೆ. ಬಸವಣ್ಣನ ನಾಡಿನಲ್ಲಿ ಇಂತಹ ಅನ್ಯಾ ನಡೆಯುತ್ತಿದೆ ಎಂದರೆ ನಾವು ಇನ್ನೂ 18ನೇ ಶತಮಾನದಲ್ಲಿದ್ದೇವೆ ಎಂದು ಮನಸ್ಸಿಗೆ ಅನಿಸುತ್ತಿದೆ ಎಂದು ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.


ವಿರೋಗಳಿಗೂ ಧನ್ಯವಾದ ಹೇಳಿದ ಬಿರಾದರ:
ಮುದ್ದೇಬಿಹಾಳ ಪುರಸಭೆಯಲ್ಲಿ ಜೆಡಿಎಸ್ ಮೂಲದ ಅಭ್ಯರ್ಥಿಗೆ ಬೆಂಬಲಿಸಿದ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರಿಗೆ ಧನ್ಯವಾದಗಳು. ಅಲ್ಲದೇ ಚುನಾವಣೆಯಲ್ಲಿ ನಡೆದ ದುಸ್ಥಿತಿಯನ್ನು ನೇರವಾಗಿ ಮಾಧ್ಯಮದ ಮೂಲಕ ಜನರ ಮುಂದಿಟ್ಟ ಸ್ಥಳೀಯ ಶಾಸಕ ನಡಹಳ್ಳಿ ಅವರಿಗೂ ಧನ್ಯವಾದಗಳನ್ನು ಜೆಡಿಎಸ್ ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ತಿಳಿಸಿದರು.


ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುರುಪ್ರಸಾದ ದೇಶಮುಖ,  ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ಮಾಜಿ ಪುರಸಭೆ ಅಧ್ಯಕ್ಷ ರಸೂಲ ದೇಸಾಯಿ, ಹಿರಿಯ ಮುಖಂಡ ಜಲಾಲ ಮುದ್ನಾಳ, ಹರ್ಷದ ಮೋಮಿನ, ನಗರ ಘಟಕ ಅಧ್ಯಕ್ಷ ಮೆಹಬೂಬ ಹಡಗಲಗೇರಿ, ಮುನ್ನಾ ಮಕಾನದಾರ, ರಫೀಕ ನಾಲತವಾಡ, ಕೃಷ್ಣಾ ರಠೋಡ, ಶಮಕರ ಮುರಾಳ, ಮೆಹಬೂಬ ಕುಂಟೋಜಿ, ಮುತ್ತು ಮಾದನಾಳ ಇದ್ದರು.

 

Be the first to comment

Leave a Reply

Your email address will not be published.


*