ಹುಣಸಗಿ: ವೀರಶೈವ ಪಂಚಮಸಾಲಿ ಸಮಾಜವನ್ನು ಪ್ರವರ್ಗ ೨ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಸೇರಿಸುವಂತೆ ಕೋರಿ ಹುಣಸಗಿಯ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ 86 ಲಕ್ಷ ಜನಸಂಖ್ಯೆ ಹೊಂದಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಶೇಕಡಾ 90% ಕೃಷಿ ಹಾಗೂ ಕಾರ್ಮಿಕ ಕೆಲಸ ಮಾಡುತ್ತಿದ್ದು. ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವುದರ ಸಲುವಾಗಿ, ರಾಜ್ಯ ಸರ್ಕಾರದ ಪ್ರವರ್ಗ ೨ಎ ದಲ್ಲಿ ಸೇರಿಸಿ ಆರ್ಥಿಕ ಸಮಾನತೆ ಸಮಾಜಿಕ ನ್ಯಾಯ ಪರತೆಯನ್ನು ಕಾಪಾಡಿಕೊಳ್ಳಲು ಈ ಮೂಲಕ ರಾಜ್ಯದ 86 ಲಕ್ಷ ಜನಸಂಖ್ಯೆಯ ಪರವಾಗಿ ಮುಖ್ಯಮಂತ್ರಿಗಳಿಗೆ ಈ ಮೂಲಕ ಮನವಿಮಾಡಿದರು.
ಇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾದ್ಯಕ್ಷರಾದ ಮಲ್ಲನಗೌಡ ಪಾಟೀಲ, ಹುಣಸಗಿ ತಾಲ್ಲೂಕು ಅದ್ಯಕ್ಷರಾದ ಮುರಿಗೆಣ್ಣ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಹೊನ್ನಕೇಶವ ದೇಸಾಯಿ, ಬಸವರಾಜ ಮಲಗಲದಿನ್ನಿ, ನಂದನಗೌಡ ಬಿರಾದಾರ, ಸಿದ್ದನಗೌಡ ಮೈಲೇಶ್ವರ ಮಾಳನೂರ, ಟಿ.ಜಿ.ಕಾರನೂರ, ಬಸವರಾಜ ಕವಿತಾಳ ಗುಂಡಲಗೇರಾ, ಬಸನಗೌಡ ತಾಳಿಕೋಟಿ ಗುಂಡಲಗೇರಾ, ಗೌಡಪ್ಪಗೌಡ ಬಿರಾದಾರ ಗುಂಡಲಗೇರಾ, ಈರಣ್ಣ ಚಂಗಳಿ ಮಾಳನೂರ, ಶಾಂತಗೌಡ ಕವಿತಾಳ ಗುಂಡಲಗೇರಾ, ಮಲ್ಲನಗೌಡ ಹಾರಗಡ್ಲಿ ಕೊಡೆಕಲ್ಲ, ಚನ್ನಬಸವ ಮೇಲಿನಮನಿ, ಅಂಬ್ರೇಶ ಪಾಟೀಲ್ ,ಶಿವಲಿಂಗ ಸಾಸಬಾಳ, ರಾಕೇಶ ಬಳೂರಗಿ, ಪರಮಣ್ಣ ಮಲಗಲದಿನ್ನಿ, ಗೊಲ್ಲಾಳೇಶ ಗೋಗಿ, ವೀರೇಶ ದೇಸಾಯಿ, ಸತೀಶ ದೇಸಾಯಿ, ಬಸಲಿಂಗಪ್ಪ ಚನ್ನೂರ ಹಾಗೂ ಇನ್ನಿತರ ಸಮಾಜದ ಮುಖಂಡರು ಇದ್ದರು.
Be the first to comment