ಮುದ್ದೇಬಿಹಾಳ ಪುರಸಭೆಯಲ್ಲಿ ಅನಧಿಕೃತ ಕೆಲಸ ಮಾಡಲು ಬಿಡುವುದಿಲ್ಲ….!!! ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇರದ ಕಾರಣ ಬಿಜೆಪಿಯಿಂದ ನಾಮಪತ್ರ ಹಿಂಪಡೆಯಲಾಗಿದೆ: ಶಾಸಕ ನಡಹಳ್ಳಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಅ.28:
ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕಣದಲ್ಲಿ ಇರದ ಕಾರಣ ಬಿಜೆಪಿ ಪಕ್ಷದ ಸದಸ್ಯರು ಸಲ್ಲಿಸಿದ್ದ ನಾಮಪತ್ರಗಳನ್ನು ಹಿಂಪಡೆಯಲಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.



ಬುಧವಾರ ದಾಹೋಸ ನಿಲಯದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಕ್ಷೇತ್ರದಲ್ಲಿ ಯಾವುದೇ ಆಡಳಿತವಾಗಬಾರದು ಎಂಬುವುದು ನಮ್ಮ ಉದ್ದೇಶವಾಗಿತ್ತು. ಅದರಂತೆ ಬುಧವಾರ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು ಹಾಗೂ ಯಾವುದೇ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಕಾರಣ ನಮ್ಮ ಪಕ್ಷದ ಬೆಂಬಲಿತ ಸದಸ್ಯರು ತಾವು ನೀಡಿದ್ದ ನಾಮಪತ್ರವನ್ನು ಹಿಂಪಡೆದಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿ 8 ಜನ ಸದಸ್ಯರಿದ್ದು ಪಕ್ಷೇತರ ಸದಸ್ಯರ ಸಹಮತವಿಲ್ಲದ ಕಾರಣ ಹಿನ್ನೆಡೆಯಾಗಿದೆ. ಆದರೆ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೆ ಪಕ್ಷೇತರ ಅಭ್ಯರ್ಥಿಗಳಿಗೆ ಮನವೊಳಿಸಿ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರನ್ನೆ ಅಧ್ಯಕ್ಷರನ್ನಾಗಿ ಮಾಡಿಸುತ್ತಿದ್ದೇವು ಎಂದು ಅವರು ಹೇಳಿದರು.
ಅನಧಿಕೃತ ಅಭಿವೃದ್ಧಿಗೆ ಅವಕಾಶ ಕೊಡುವುದಿಲ್ಲ: ಶಾಸಕ ನಡಹಳ್ಳಿ
ಕ್ಷೇತ್ರದಲ್ಲಿ ನಾನು ಶಾಸಕನಾಗಿ ಅಧಿಕಾರ ವಹಿಸಿಕೊಂಡಿದ್ದು ಕ್ಷೇತ್ರದ ಅಭಿವೃದ್ಧಿಯೊಂದೆ ನನ್ನ ಗುರಿಯಾಗಿದೆ. ಮುದ್ದೇಬಿಹಾಳ ಪಟ್ಟಣದಲ್ಲೂ ಯಾವುದೇ ಅನಧಿಕೃತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಾನು ಬಿಡುವುದಿಲ್ಲ. ಇನ್ನೂ ಪಟ್ಟಣದ ಅಭಿವೃಧ್ಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಾರ್ಯಕ್ಕೆ ನಾನೂ ಯಾವುದೇ ಅಡಚರಣೆ ಮಾಡುವುದಿಲ್ಲ ಎಂದು ಶಾಸಕ ನಡಹಳ್ಳಿ ತಿಳಿಸಿದ್ದಾರೆ.
ಅಭಿವೃಧ್ಧಿ ಕಾಮಗಾರಿಗಳನ್ನು ಕೇವಲ ಎಸ್ಟಿಮೇಟ್ ಮಾಡಿಸಿದರೆ ಸಾಲದು:
ಮುದ್ದೇಬಿಹಾಳ ಮತಕ್ಷೇತ್ರವು ಕಳೆದ 20 ವರ್ಷಗಳ ಹಿಂದೆಯೇ ಸಾಕಷ್ಟು ಅಭಿವೃದ್ಧಿಯಾಗಬೇಕಿತ್ತು. ಆದರೂ ಯಾಕೆ ಆಗಿಲ್ಲ ಎಂಬುವುದು ಇಲ್ಲಿನ ಜನಸಾಮಾನ್ಯರಿಗೆ ಈಗಾಗಲೇ ತಿಳಿದಿದೆ. ಅಭಿವೃದ್ಧಿ ಕೆಲಸಗಳನ್ನು ಕೇವಲ ಅಂದಾಜು ಮೊತ್ತ ಮಾಡಿಸಿ ಕೈಬಿಟ್ಟರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಆ ಕಾಮಗಾರಿಗೆ ಬೇಕಾಗುವ ಹಣವನ್ನು ಸರಕಾರದಿಂದ ಬಿಡುಗಡೆ ಮಾಡುವಂತೆ ವಿಧಾನಸೌಧದಲ್ಲಿ ವಾದ ಮಂಡಿಸಬೇಕು. ನಾನು ಕ್ಷೇತ್ರದಲ್ಲಿ ಇದೇ 3 ವರ್ಷದಲ್ಲಿ ಎಷ್ಟು ಅಭಿವೃದ್ಧಿ ಹಣವನ್ನು ತೆಗೆದುಕೊಂಡು ಬಂದಿದ್ದೇನೆ ಎಂಬುವುದರ ಬಗ್ಗೆ ಅಧಿಕೃತ ದಾಖಲೆಗಳೊಂದಿಗೆ ತಿಳಿಸುತ್ತೇನೆ ಎಂದು ಪರೋಕ್ಷವಾಗಿ ಮಾಜಿ ಸಚಿವ ನಾಡಗೌಡ ಅವರಿಗೆ ಶಾಸಕ ನಡಹಳ್ಳಿ ತಿರುಗೇಟು ನೀಡಿದರು.



ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಬಸವರಾಜ ಮುರಾಳ, ಅಶೋಕ ವನಹಳ್ಳಿ. ಸದಾಶಿವ ಮಾಗಿ, ಬಸಪ್ಪ ತಟ್ಟಿ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ ಇತರರಿದ್ದರು.

Be the first to comment

Leave a Reply

Your email address will not be published.


*