ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ ಅ.28:
ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಸರ್ವ ಸದಸ್ಯರು ಪಕ್ಷಾತೀತವಾಗಿ ಅವಿರೋಧ ಆಯ್ಕೆಮಾಡಿದ್ದು ಇತಿಹಾಸ ಸೃಷ್ಠಿ ಮಾಡಿದಂತಾಗಿದೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಾಗೂ ಉಪಾಧ್ಯಕ್ಷೆ ಶಹಜಾದಬಿ ಹುಣಚಗಿ ಅವರು ಪಟ್ಟಣದ ಅಭಿವೃದ್ಧಿಯತ್ತ ಆಡಳಿತ ಮಾಡಲಿ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹೇಳಿದರು.
ಪಟ್ಟಣದಲ್ಲಿ ಕೇವಲ ಸಿಸಿ ರಸ್ತೆ ಮಾಡಿದರೆ ಅಭಿವೃದ್ಧಿಯಾಗುವುದಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಸರಕಾರದ ಮಟ್ಟಿನಲ್ಲಿ ಪ್ರಸ್ತಾಪಿಸಿ ಅನುಷ್ಠಾನ ಮಾಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯದ ಬಜೇಟ್ ಕೇವಲ ನೂರರ ಸಂಖ್ಯೆಯಲ್ಲಿ ಆದರೆ ಇಂದು ಸಾವಿರ ಸಂಖ್ಯೆಯಲ್ಲಿ ಬಜೇಟ್ ಮಂಡನೆಯಾಗುತ್ತಿದೆ. ಇದರಿಂದ ವಿಶೇಷ ಅನುಧಾನ ಹಣ ಬರುತ್ತಿದೆ. ನಮ್ಮನ್ನು ಹುಟ್ಟಿಸಿದ ತಂದೆಯನ್ನೇ ನಾನು ಹುಟ್ಟಿಸಿದ್ದೇನೆ ಎನ್ನುವ ಮಾತು ಯಾವ ಲೆಕ್ಕದ್ದು ಎಂದು ಅವರು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ಗಪೂರ ಮಕಾನದಾರ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಗುರು ತಾರನಾಳ, ವಾಯ್.ಎಚ್.ವಿಜಯಕರ, ಎಸ್.ಎಸ್.ಮಾಲಗತ್ತಿ ವಕೀಲರು, ಕಾಮರಾಜ ಬಿರಾದಾರ, ಯರಝರಿ ಗ್ರಾಪಂ ಅಧ್ಯಕ್ಷ ರೇವಣೆಪ್ಪ ಗುರಿಕಾರ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶರಣಬಸು ಚಲವಾದಿ, ಕಾಂಗ್ರೆಸ್ ತಾಲೂಕಾ ಎಸ್ಸಿ ಅಧ್ಯಕ್ಷ ಅಶೋಕ ಅಜಮನಿ, ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಶಿರೋಳ, ಸಂತೋಷ ಚವ್ಹಾಣ, ಪಿಂಟು ಸಾಲಿಮನಿ, ಅಶೋಕ ನಾಡಗೌಡ, ರುದ್ರಗೌಡ ಅಂಗಡಗೇರಿ ಇದ್ದರು.
Be the first to comment