ಮುದ್ದೇಬಿಹಾಳ ಪುರಸಭೆ ಅಧ್ಯಕ್ಷೆಯಾಗಿ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆಯಾಗಿ ಶಹಜಾದಬಿ ಹುಣಚಗಿ ಅವಿರೋಧವಾಗಿ ಆಯ್ಕೆ….! ಆಡಳಿತ ಬಿಜೆಪಿ ಪಕ್ಷಕ್ಕೆ ಬಾರಿ ಮುಖಭಂಗ….!!!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

ಮುದ್ದೇಬಿಹಾಳ ಅ.28:

ಮುದ್ದೇಬಿಹಾಳ ಪುರಸಭೆಯ ಬುಧವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧ ಫಲಿತಾಂಸ ಹೊರಬಿದ್ದಿದ್ದು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ಬಾರಿ ಮುಖಭಂಗವಾಗಿದ್ದು ಎರಡೂ ಸ್ಥಾನಗಳೂ ಕಾಂಗ್ರೆಸ್ ಮಡಲಿಗೆ ಒದಗಿ ಬಂದಿದೆ.



ಪುರಸಭೆ ಅಧ್ಯಕ್ಷೆಯಾಗಿ  ಪ್ರತಿಭಾ ಅಂಗಡಗೇರಿ ಅವರು ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಶಹಜಾದಬಿ ಹುಣಚಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುರಸಭೆ ಸದಸ್ಯರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರತಿಭಾ ಅಂಗಡಗೇರಿ ಹಾಗೂ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಹಜಾದಬಿ ಹುಣಚಗಿ ಅವರು ಸುನಾಯಿತ ಸದಸ್ಯರಾಗಿದ್ದರು. ಆದರೆ ಈಗಾಗಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಬೇಟಿ ಮಾಡಿರುವ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸದಸ್ಯತ್ವ ಪಡೆಯಲು ಸಿದ್ಧರಿದ್ದಾರೆ ಮೂಲಗಳಿಂದ ತಿಳಿದು ಬಂದಿದೆ.

ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾಕಾರಿಯಾಗಿದ್ದ ತಹಸೀಲ್ದಾರ ಜಿ.ಎಸ್.ಮಳಗಿ ಅವರು ಬೆಳಿಗ್ಗೆ 10 ಗಂಟೆಗೆ ನಾಮಪತ್ರಿ ಸ್ವೀಕಾರ ಪ್ರಾರಂಭಿಸಿದರು. ಪ್ರಥಮವಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪ್ರತಿಭಾ ಅಂಗಡಗೇರಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪಕ್ಷೇತರ ಅಭ್ಯರ್ಥಿ ಶಹಜಾದಬಿ ಹುಣಚಗಿ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ನಂತರ ಬಿಜೆಪಿ ಬೆಂಬಲಿತ ಸದಸ್ಯೆ ಸಂಗಮ್ಮ ದೇವರಳ್ಳಿ ಹಾಗೂ ಸಹನಾ ಬಡಿಗೇರ ಅವರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಬೆಂತಲಿತ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಂತರ ಸಂಗಮ್ಮ ದೇವರಳ್ಳಿ ಅವರು ನಾಮಪತ್ರ ಹಿಂಪಡೆದರೆ ಸಹನಾ ಬಡಿಗೇರ ಅವರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆ ಅಧ್ಯಕ್ಷ ಸ್ಥಾನವು ಪ್ರತಿಭಾ ಅಂಗಡಗೇರಿ ಅವರು ಅವಿರೋಧವಾಗಿ ಆಯ್ಕೆಯಾದರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸಹನಾ ಬಡಿಗೇರ ಹಾಗೂ ಪಕ್ಷೇತರ ಅಭ್ಯರ್ಥಿ ಶಹಜಾದಬಿ ಹುಣಚಗಿ ಅವರು ನಾಮಪತ್ರ ಸಲ್ಲಿಸಿದ್ದು ಸಹನಾ ಬಡಿಗೇರ ಅವರು ತಮ್ಮ ನಾಮಪತ್ರವನ್ನು ಹಿಂಪಡೆದ ಕಾರಣ ಉಪಾಧ್ಯಕ್ಷ ಸ್ಥಾನವು ಶಹಜಾದಬಿ ಹುಣಚಗಿ ಅವರು ಅವಿರೋಧವಾಗಿ ಆಯ್ಕೆಯಾದರು.



ಡಿಜೆ ಜಪ್ತಿ ಮಾಡಿದ ಪೊಲೀಸ ಅಕಾರಿಗಳು:
ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ವಿಜಯೋತ್ಸವ ಆಚರಣೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ತರಿಸಿದ್ದ ಬೃಹತ್ ಧ್ವನಿವರ್ಧಕವನ್ನು ಸ್ಥಳೀದಲ್ಲಿದ್ದ ಸಿಪಿಐ ಆನಂದ ವಾಘ್ಮೋರೆ ಹಾಗೂ ಪಿಎಸ್‌ಐ ಮಲ್ಲಪ್ಪ ಮಡ್ಡಿ ಅವರು ಡಿಜೆಯನ್ನು ಹೊತ್ತು ತಂದಿದ್ದ ಟ್ರಾö್ಯಕ್ಟರ್‌ರನ್ನು ಜಪ್ತಿ ಮಾಡಿ ಠಾಣೆಗೆ ಕರೆದೊಯ್ದರು. ಇದೇ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಪೊಲೀಸರಲ್ಲಿ ಮಾತಿನ ಚಕುಮತಿ ನಡೆಯಿತು.



ಪುರಸಭೆಯಿಂದ ಸನ್ಮಾನ:
ನೂತನವಾಗಿ ಪುರಸಭೆ ಅಧ್ಯಕ್ಷಯಾಗಿ ಆಯ್ಕೆಯಾದ ಪ್ರತಿಭಾ ಅಂಗಡಗೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶಹಜಾದಬಿ ಹುಣಚಗಿ ಅವರಿಗೆ ಪುರಸಭೆ ಮುಖ್ಯಾಕಾರಿ ಗೋಪಾಲ ಕಾಸೆ, ಯೋಜನಾಕಾರಿ ರಮೇಶ ಮಾಡಬಾಳ, ಆರ್‌ಓ ಭಾರತಿ ಮಾಡಗಿ ಸೇರಿದಂತೆ ಅಕಾರಿ ವರ್ಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಮಕಾನದಾರ, ಮಾಜಿ ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಮಾಜಿ ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಚಿನ್ನು ನಾಡಗೌಡ, ಕಾಂಗ್ರೆಸ್ ಜಿಲ್ಲಾ ಯುವ ಪ್ರ.ಕಾರ್ಯದರ್ಶಿ ಶರಣಬಸು ಚಲವಾದಿ, ಯುವ ಕಾಂಗ್ರೆಸ್ ಅಧ್ಯಕ್ಷ ರಫೀಕ ಶೀರೋಳ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಕಾಂಗ್ರೆಸ್ ಎಸ್ಸಿ ತಾಲೂಕಾಧ್ಯಕ್ಷ ಅಶೋಕ ಅಜಮನಿ, ಕಾಮರಾಜ ಬಿರಾದಾರ, ದಾದಾಧನಿ ನಾಡಗೌಡ, ಸಂತೋಷ ಚವ್ಹಾಣ, ಬಾಪುಗೌಡ ಪಾಟೀಲ ಇದ್ದರು.

 

Be the first to comment

Leave a Reply

Your email address will not be published.


*