ಸುರೇಶ ಕಲಾಲಗೆ ಸನ್ಮಾನ….!!! ಸಮಾಜದ ಋಣ ತೀರಿಸುವ ಕೆಲಸ ಮಾಡೋಣ: ಕುಲಕರ್ಣಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಾಗೂ ಜೇಸಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೂರ್ಯವಂಶ ಕಲಾಲ ಸಮಾಜದ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸುರೇಶ ಕಲಾಲ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಸಮಾಜದಿಂದ ಸಾಕಷ್ಟು ಪಡೆದಿರುವ ನಾವು, ಮರಳಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ಕೊಡುವ ಕೆಲಸ ಮಾಡಬೇಕೆಂದು ಭಾರತೀಯ ಜೀವವಿಮಾ ನಿಗಮದ ಹಿರಿಯ ಅಧಿಕಾರಿ ಶ್ರೀನಿವಾಸ ಕುಲಕರ್ಣಿ ಹೇಳಿದರು.


ಮುದ್ದೇಬಿಹಾಳದ ಹಸಿರು ತೋರಣ ಉದ್ಯಾನವನದಲ್ಲಿ ಸೂರ್ಯವಂಶ ಕಲಾಲ ಸಮಾಜದ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸುರೇಶ ಕಲಾಲ ಅವರ ಸನ್ಮಾನ ಸಮಾರಂಭದಲ್ಲಿ ಎಲ್.ಐ.ಸಿ. ಹಿರಿಯ ಅಧಿಕಾರಿ ಶ್ರೀನಿವಾಸ ಕುಲಕರ್ಣಿ ಮಾತನಾಡಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಾಗೂ ಜೇಸಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸೂರ್ಯವಂಶ ಕಲಾಲ ಸಮಾಜದ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸುರೇಶ ಕಲಾಲ ಅವರ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಸನ್ಮಾನಗಳು ನಮ್ಮ ಜವಾಬ್ದಾರಿ ಹೆಚ್ಚಿಸುತ್ತವೆ. ಸಮಾಜ ನಮ್ಮ ಮೇಲಿಟ್ಟಿರುವ ಜವಾಬ್ದಾರಿ ನೆನಪಿಸುತ್ತವೆ ಎಂದು ಹೇಳಿದ ಅವರು ಸಮಾಜದ ಕೆಳಸ್ಥರದ ಜನರನ್ನು ಮೇಲೆತ್ತುವ ಕೆಲಸವನ್ನು ಧುರೀಣರಾದವರು ಮಾಡಬೇಕು. ಕಲಾಲ ಸಮಾಜದ ಬಹಳಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದು, ಅವರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತಿ ಸಾಧಿಸುವಂತಾಗಬೇಕು. ಇದಕ್ಕೆ ಹಿರಿಯ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.

 

ಕರ್ನಾಟಕ ಕೋ.ಆಪ್ ಬ್ಯಾಂಕ್ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ಕಲಾಲ ಸಮಾಜದ ಜನರು ಶ್ರಮಜೀವಿಗಳು. ದಿನನಿತ್ಯ ಶ್ರಮಪಟ್ಟು ದುಡಿಯುವದರಲ್ಲಿಯೇ ತಮ್ಮ ದಿನ ಕಳೆಯುತ್ತಾರೆ. ಇತರೆ ಸಮಾಜದ ಜನರು ಗುರುತಿಸುವಂತಾಗಬೇಕೆಂದರೆ ನಾವೂ ಸಹ ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು. ಅಂದಾಗ ಉಳಿದ ಸಮಾಜಗಳೊಂದಿಗೆ ಸರಿಸಮನಾಗಿ ಬೆಳೆಯಲು ಸಾಧ್ಯ ಎಂದವರು ಹೇಳಿದರು.

ಸಭೆಯಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ತಾಳಿಕೋಟಿಯ ಹಸಿರು ಸಂಪದ ಬಳಗದ ಸಂಚಾಲಕ ಶರಣಬಸು ಗಡೇದ, ಜೆಸಿ ಸಂಸ್ಥೆಯ ಅಧ್ಯಕ್ಷ ರವಿ ಗೂಳಿ, ಡಾ.ಉತ್ಕರ್ಷ ನಾಗೂರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ತೆರಿಗೆ ಸಲಹೆಗಾರ ನಾಗಭೂಷಣ ನಾವದಗಿ ವಕೀಲರು, ಮಹಾಬಲೇಶ್ವರ ಗಡೇದ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ.ಎಂ.ಮುದ್ದೇಬಿಹಾಳ, ಲಯನ್ಸ ಕ್ಲಬ್ ಅಧ್ಯಕ್ಷ ರಾವಸಾಹೇಬ ದೇಸಾಯಿ, ಮಾಜಿ ಅಧ್ಯಕ್ಷ ಮಹೇಂದ್ರ ಓಸ್ವಾಲ, ಗಣ್ಯರಾದ ಕೆ.ಆರ್.ಕಾಮಟೆ, ರಾಜಶೇಖರ ಕಲ್ಯಾಣಮಠ, ಬಿ.ಎಂ.ಪಲ್ಲೇದ, ಎಲ್.ಎಂ.ಚಲವಾದಿ, ಎಂ.ಎಸ್.ಬಾಗೇವಾಡಿ, ಸುಧೀರ ಕತ್ತಿ, ಅಮರೇಶ ಕೆ. ಗೂಳಿ, ಬಿ.ಎ.ನಾಡಗೌಡ ವಕೀಲರು, ಎಚ್.ವೈ.ಪಾಟೀಲ ವಕೀಲರು, ಡಾ.ವೀರೇಶ ಪಾಟೀಲ, ಡಾ.ವೀರೇಶ ಇಟಗಿ, ರವಿ ತಡಸದ, ಬಿ.ಎಚ್.ಬಳಬಟ್ಟಿ, ವಿಶ್ವನಾಥ ನಾಗಠಾಣ, ಪಿ.ಆರ್.ಕೂಡಗಿ, ಶರಣು ಹಿರೇಕುರುಬರ ಮತ್ತಿತರರು ಪಾಲ್ಗೊಂಡಿದ್ದರು. ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಸ್ವಾಗತಿಸಿ, ನಿರೂಪಿಸಿದರು. ವೀರೇಶ ಹಂಪನಗೌಡ್ರ ವಂದಿಸಿದರು.

Be the first to comment

Leave a Reply

Your email address will not be published.


*