ಪ್ರಕರಣ ತಗ್ಗಿಸಲು ಸಿಸಿಟಿವಿ ಅಳವಡಿಸಿ: ಪಿಎಸ್ಐ ಮಡ್ಡಿ ಮನವಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

 

ಜಿಲ್ಲಾ ಸುದ್ದಿಗಳು

ನಾಲತವಾಡ:

ಪಟ್ಟಣದಲ್ಲಿ ಅಪರಾಧಗಳ ತಡೆಗೆ ಪ್ರಮುಖ ರಸ್ತೆ ಹಾಗೂ ವ್ಯಾಪಾರಸ್ಥರ ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಸೂಕ್ತ ಎಂದು ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ ಹೇಳಿದರು. 


 


ತಾಲೂಕಿನ ನಾಲತವಾಡ  ಪಂಚಾಯ್ತಿಯಲ್ಲಿ ಪ್ರಮುಖ ವ್ಯಾಪಾರಸ್ಥರು ಹಾಗೂ ಗಣ್ಯ ವ್ಯಕ್ತಿಗಳ ಸಭೆಯಲ್ಲಿ ಅವರು ಮಾತನಾಡಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಅಪರಾಧ ಪ್ರಕರಣಗಳು ನಡೆಯದಂತೆ ಸಾರ್ವಜನಿಕವಾಗಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಬೇಕು. ಇದಕ್ಕೆ ತಗಲುವ ಅನುದಾನ ವ್ಯಾಪಾರಸ್ಥರು ಹಾಗೂ ಗಣ್ಯವ್ಯಕ್ತಿಗಳು ಮುಂದಾಗಬೇಕು ಎಂದರು.

ಈಗಾಗಲೇ 41 ಸೂಕ್ಷ್ಮ ಸ್ಥಳಗಳನ್ನು ಸಿಸಿ ಕ್ಯಾಮರಾ ಅಳವಡಿಕೆಗೆ ಪರಿಶೀಲನೆ ಮಾಡಲಾಗಿದೆ.‌ ಇನ್ನು ಇದೆಲ್ಲವೂ ಸಾರ್ವಜನಿಕ ಅನುಕೂಲಕ್ಕಾಗಿ ಮತ್ತು ಅಪರಾಧ ತಡೆಯಲು ಪ್ರಯೋಜನವಾಗಯತ್ತದೆ. ಅದಕ್ಕಾಗಿ ನಾಲತವಾಡ ಜನತೆ ಪೊಲೀಸ್ ಇಲಾಖೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಈ ಸಭೆಯಲ್ಲಿ ಪೊಲೀಸ್ ಇಲಾಖೆಯ ಮನವಿಗೆ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಆದಷ್ಟು ಬೇಗನೆ ಸಿಸಿಟಿವಿ ಅಳವಡಿಸಲು ಸಭೆಯಲ್ಲಿ ಭಾಗವಹಿಸಿದ್ದವರು ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಹಾಗೂ ಗಣ್ಯರು ಹಾಜರಿದ್ದರು. ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಂ.ಆರ್.ದಾಯಿ, ಶಂಕರಾವ ದೇಶಮುಖ, ಬಸಣ್ಣ ವಡಿಗೇರಿ, ಕಾಜಹುಷನೆ ಎತ್ತಿನಮನಿ, ಕಾಂತು ಹಿರೆಮಠ, ಗುರನಾಥ ಡಿಗ್ಗಿ, ಶರಣಗೌಡ ಪಾಟೀಲ, ವಿಶ್ವನಾಥ ಡಿಗ್ಗಿ, ಸಿದ್ದಪ್ಪ ಕಟ್ಟಿಮನಿ, ಸಿದ್ದಪ್ಪ ಆಲಕೊಪ್ಪರ, ಬಸಣ್ಣ ವಡಿಗೇರಿ, ಮಹಾಂತೇಶ ಗಂಗನಗೌಡರ, ನಜೀರ್ ಕೊಣ್ಣೂರ ಇದ್ದರು. 

 

Be the first to comment

Leave a Reply

Your email address will not be published.


*