ಸರಕಾರದ ಸುತ್ತೋಲೆ ಪ್ರಕಾರ ಕರ್ನಾಟಕ ರಾಜ್ಯೋತ್ಸವ ಆಚರಣೆ: ತಹಸೀಲ್ದಾರ ಜಿ.ಎಸ್.ಮಳಗಿ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.22:

ನವೆಂಬರನಲ್ಲಿ ಜರುಗಲಿರುವ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ನಿಮಿತ್ಯವಾಗಿ ಕೋವಿಡ್-19ರನ್ವಯ ರಾಜ್ಯ ಸರಕಾರ ಹೊರಡಿಸಿರುವ ಸುತ್ತೊಲೆ ಪ್ರಕಾರವೇ ಆಚರಣೆ ಮಾಡಬೇಕು ಎಂದು ತಹಸೀಲ್ದಾರ ಜಿ.ಎಸ್.ಮಳಗಿ ಹೇಳಿದರು.



ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯವಾಗಿ ಕರೆಯಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ಭಯ ತೊರೆದು ಸಾರ್ವಜನಿಕರ ಸೇವೆಯಲ್ಲಿ ನಿರತರಾದ ಕಾರ್ಮಿಕರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನೂ ನಡೆಸುವುದಾಗಿ ಅವರು ತಿಳಿಸಿದರು.

?

ಕನ್ನಡ ಪರ ಸಂಘಟಿತರೂ ಸುತ್ತೊಲೆ ಪ್ರಕಾರವೇ ಆಚರಣೆ ಮಾಡಿ:

ಇದೇ ವೇಳೆಯಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ವಿವಿಧ ಕನ್ನಡಪರ ಸಂಘಟಿತರು ರಾಜ್ಯೋತ್ಸವವನ್ನು ಆಚರಣೆ ಮಾಡುವಲ್ಲಿ ಸಾಮಾಜಿಕ ಅಂತರ, ಮಾಸ್ಕ ಸೇರಿದಂತೆ ಸರಕಾರದ ಸುತ್ತೊಲೆ ಪ್ರಕಾರವೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಬೇಕೆಂದು ತಹಸೀಲ್ದಾರ ಅವರು ಸೂಚಿಸಿದರು.



ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಿ: ತಹಸೀಲ್ದಾರ

ರಾಜ್ಯೋತ್ಸವ ಸಮಾರಭಕ್ಕೆ ಬರುವ ಪ್ರತಿಯೊಬ್ಬರಿಗೂ ಥರ್ಮಲ ಸ್ಕಾನ್ ಮಾಡಿ ಅವರಿಗೆ ಮಾಸ್ಕ ಪದಗಿಸುವ ಕೆಲಸ ಮಾಡಬೇಕು. ಅಲ್ಲದೇ ಇಲಾಖೆಯಿಂದ ಅಗತ್ಯವಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಹಸೀಲ್ದಾರ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಗೈರಾದ ಅಧಿಕಾರಿಗಳಿಗೆ ಸೂರವಾಣಿ ಮೂಲಕ ಜವಾಬ್ದಾರಿಯನ್ನು ತಿಳಿಸಿದ ತಹಸೀಲ್ದಾರ:

ಕರ್ನಾಟಕ ರಾಜ್ಯೋತ್ಸವ ನಿಮಿತ್ಯವಾಗಿ ಕರೆಯಲಾಗಿದ್ದು ಪೂರ್ವಭಾವಿ ಸಭೆಗೆ ಸ್ಥಳೀಯ ಹೆಸ್ಕಾಂ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಗೈರಾಗಿದ್ದನ್ನು ಕಂಡ ತಹಸೀಲ್ದಾರ ಜಿ.ಎಸ್.ಮಳಗಿ ಅವರು ದೂರವಾಣಿ ಮೂಲಕ ಅಧಿಕಾರಿಗಳಿಗೆ ಕರೆ ಮಾಡಿ ಕಾರ್ಯಕ್ರಮದ ನಿಮಿತ್ಯವಾಗಿ ಇಲಾಖೆಯ ಜವಾಬ್ದಾರಿಗಳನ್ನು ತಿಳಿಸಿದರು.

ಲೋಕೊಪಯೋಗಿ ಇಲಾಖೆಗೆ ಖಡಕ್ ಸೂಚನೆ ನೀಡಿದ ತಹಸೀಲ್ದಾರ:

ಲೋಕೊಪಯೋಗಿ ಇಲಾಖೆಯಿಂದ ಮಿನಿ ವಿಧಾನಸೌದ ಆವರಣದಲ್ಲಿ ಹಾಕುವ ಮಣ್ಣಿನಲ್ಲಿ ಕಲ್ಲುಗಳು ಸೇರಿದಂತೆ ಇತರೆ ಗಲೀಜು ಇಲ್ಲದಂತೆ ನಿಗಾವಹಿಸಿಬೇಕು. ಕಳೆದ ಬಾರಿ ನಡೆದ ಸಮಾರಂಭದಲ್ಲೂ ಇಲಾಖೆ ಅಧಿಕಾರಿಗಳಿಂದ ನಿರ್ಲಕ್ಷಗಳು ಕಂಡು ಬಂದಿದ್ದು ಇಂತಹ ನಿರ್ಲಕ್ಷಗಳನ್ನು ಮಾಡದೇ ಕಾರ್ಯನಿರ್ವಹಿಸಬೇಕು. ಅಲ್ಲದೇ ಇಲಾಖೆಗೆ ನೀಡಿದ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ನಿರ್ವಹಿಸಬೇಕು ಎಂದು ತಹಸೀಲ್ದಾರ ಮಳಗಿಯವರು ಖಡಕ್ಕಾಗಿ ಸೂಚಿಸಿದರು.

ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಯುವಜನ ಸೇನೆ ತಾಲೂಕು ಅಧ್ಯಕ್ಷ ಪ್ರಕಾಶ ಕೆಂದೂಳಿ, ಉಪಾಧ್ಯಕ್ಷರಾದ ಜಗದೇವರಾವ ಚಲವಾದಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ)ತಾಲೂಕು ಅಧ್ಯಕ್ಷ ಸಂಗಯ್ಶ ಸಾರಂಗಮಠ (ತಂಗಡಗಿ) ಇದ್ದರು. 

Be the first to comment

Leave a Reply

Your email address will not be published.


*