ವ್ಯಾಕುಲತೆ, ಚಿಂತೆ ದೂರ ಮಾಡುವ ಶಕ್ತಿ ಸಂಗೀತಕ್ಕಿದೆ : ಫೋಸ್ಟ ಮಾಸ್ಟರ್ ಮಹಾಬಳೇಶ ಗಡೇದ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.19:
ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ಶಾಂತಿ, ಸಮಾಧಾನದಿಂದ ಇರುತ್ತದೆ ಎಂದು ಪಟ್ಟಣದ ಅಂಚೆ ಸಹಾಯಕ ಮಹಾಬಲೇಶ್ವರ ಗಡೇದ ಹೇಳಿದರು.
ಅವರು ಭಾನುವಾರ ಪಟ್ಟಣದ ಮೇಘಾ ಕರೋಕೆ ಸಿಂಗಿAಗ್ ಕ್ಲಾಸ್ ಹಾಗೂ ಮಿಣಜಗಿಯ ಸ್ನೇಹಜೀವಿ ಕರೋಕೆ ವೇದಿಕೆ ಆಶ್ರಯದಲ್ಲಿ ನಡೆದ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಗೀತಕ್ಕೆ ನಮ್ಮ ವ್ಯಾಕುಲತೆ, ಚಿಂತೆ ದೂರ ಮಾಡುವ ಶಕ್ತಿ ಇದೆ. ದಣಿದ ದೇಹ ಹಾಗೂ ಮನಸ್ಸಿಗೆ ನವಚೈತನ್ಯ ತುಂಬುವ ಅಪರ‍್ವ ಶಕ್ತಿ ಇದೆ. ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರು ದೈಹಿಕವಾಗಿ ದೂರವಾಗಿದ್ದರೂ ಅವರು ಹಾಡಿರುವ ಸುಮಧುರ ಗೀತೆಗಳು ಶಾಶ್ವತವಾಗಿ ಸಂಗೀತ ಕೇಳುಗರ ಹೃದಯಂಗಳದಲ್ಲಿ ಇರುತ್ತವೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಸಾವಿರಾರು ಮಕ್ಕಳಿಗೆ ಸಂಗೀತದ ಗುರುವಾಗಿ ಅವರು ಮಾರ್ಗದರ್ಶಕರಾಗಿದ್ದರು ಎಂದರು.

ಅತಿಥಿಯಾಗಿದ್ದ ಶಿಕ್ಷಕ ಬಿ.ವಿ.ಕೋರಿ ಮಾತನಾಡಿ, ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಅವರು ನಾಲ್ಕು ಭಾಷೆಗಳಲ್ಲಿ ನಾಲ್ವತ್ತೆöÊದು ಸಾವಿರಕ್ಕೂ ಹೆಚ್ಚು ಚಲನಚಿತ್ರಗೀತೆಗಳನ್ನು, ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಅಮರರಾಗಿದ್ದಾರೆ. ಸಂಗೀತ ಲೋಕಕ್ಕೆ ಅವರ ಕೊಡುಗೆ ದೊಡ್ಡದು. ಸಂಗೀತ ಕೇಳುವುದು, ಹಾಡುವುದು ಒಂದು ದಿವ್ಯ ಔಷಧಿ ಇದ್ದಂತೆ. ಸಂಗೀತದಿAದ ಎಷ್ಟೋ ಖಾಯಿಲೆಗಳು ದೂರವಾದ ಉದಾಹರಣೆಗಳಿವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಿಣಜಗಿಯ ಸ್ನೇಹಜೀವಿ ಕರೋಕೆ ವೇದಿಕೆ ಸಂಚಾಲಕ ಸೋಮಶೇಖರಯ್ಯ ಹಿರೇಮಠ, ಸಂಗೀತ ಲೋಕಕ್ಕೆ ನಾವು ಪ್ರವೇಶಿಸಿದರೆ ನಾವು ಎಲ್ಲವನ್ನೂ ಮರೆಯಬೇಕು. ಸಂಗೀತದಿAದ ಸಿಗುವ ನೆಮ್ಮದಿ ದೊಡ್ಡದು. ದೊಡ್ಡ ದೊಡ್ಡ ವಿದ್ವಾಂಸರು, ವಿಜ್ಞಾನಿಗಳು ಸಂಗೀತ ಕೇಳುವ ಮೂಲಕ, ಸಾಧನಗಳನ್ನು ನುಡಿಸುವ ಮೂಲಕ ತಮ್ಮ ದಣಿವು ಮರೆಯುತ್ತಿದ್ದರು ಎಂದರು.
ವೇದಿಕೆಯಲ್ಲಿ ಸೈನಿಕ ರಮೇಶ ಹೂಗಾರ, ಸನ್ ಟೆಕ್ ಕಂಪ್ಯೂಟರ್ ನಿರ್ದೇಶಕ ನಾಗರಾಜ ಬಿರಾದಾರ, ಮೇಘಾ ಕರೋಕೆ ಸಿಂಗಿAಗ್ ಕ್ಲಾಸ್ ಮುಖ್ಯಸ್ಥೆ ದೀಪರತ್ನಶ್ರೀ ಇದ್ದರು. ಕರ‍್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ರಾಧಾ ದೊಡಮನಿ, ಈರಮ್ಮ ಹಿರೇಮಠ, ಪ್ರೀತಿ ದೊಡಮನಿ, ಸಂಗನಗೌಡ ಬಿರಾದಾರ ಕೋರವಾರ, ಸಕ್ಕುಬಾಯಿ ದೊಡಮನಿ, ಬಸಯ್ಯ ಹೊಸಮಠ, ಶೈಲಾ ಗೊಂಗಡಿ, ಟಿ.ನಾಗೇಶ ಅರಕೇರಾ, ಸಂಜೀವಕುಮಾರ ದೇಸಾಯಿ, ಸುಮಾ ಮಠ, ಹಣಮಂತ ಮಹಾಲಿಂಗಪೂರ, ಪ್ರದೀಪ ದಾಸರ, ಶ್ರೀಕಾಂತ ಹೂಗಾರ, ಶರಣು ಅಮರಣ್ಣವರ, ಭರತ ಉಪ್ಪಲದಿನ್ನಿ, ಬಾಬು ಮುದ್ನಾಳ, ಇಬ್ರಾಹಿಂ ಢವಳಗಿ, ದಾವಲಸಾಬ ಮಮದಾಪೂರ, ಗುರುರಾಜ ಬಡಿಗೇರ ಮಡಕೇಶ್ವರ, ಅರುಣ ಬಡಿಗೇರ, ವಿಷ್ಣು ಲಮಾಣಿ, ಚಂದ್ರಶೇಖರ ಪ್ಯಾಟಿಗೌಡರ, ವೀರೇಶ ಹುನಗುಂದ, ಬಸವರಾಜ ಗೌಡರ, ಕಾಶೀನಾಥ ತಾಳಿಕೋಟಿ, ಶಿವಲೀಲಾ ಬಿರಾದಾರ, ಪ್ರಕಾಶ ಪತ್ತಾರ, ಗಿರೀಶ ದೇಶಪಾಂಡೆ ಎಸ್.ಪಿ.ಬಾಲಸುಭ್ರಮಣ್ಯಂ ಹಾಡಿದ ಹಾಡುಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಮೇಘಾ ಕರೋಕೆ ಸಿಂಗಿAಗ್ ಕ್ಲಾಸ್ ಮುಖ್ಯಸ್ಥೆ ದೀಪ ರತ್ನಶ್ರೀ ಸ್ವಾಗತಿಸಿದರು. ಶಿಕ್ಷಕ ಗುರು ಚಟ್ಟೇರ ನಿರೂಪಿಸಿದರು. ಚಂದ್ರಶೇಖರ ಪ್ಯಾಟಿಗೌಡರ ವಂದಿಸಿದರು.

Be the first to comment

Leave a Reply

Your email address will not be published.


*