ಕೋಳೂರ ಗ್ರಾಪಂಯಲ್ಲಿ ವಸತಿ ಯೋಜನೆಯಡಿಯಲ್ಲಿ ಕೋಟಿಗಟ್ಟಲೇ ಲೂಟಿ…..! ಹಗರಣ ಹೊರಹಾಕಿದ ಸಮಾಜ ಸೇವಕ ಜಗದೀಶ ಚವ್ಹಾಣ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ ಅ.15:
ತಾಲೂಕಿನ ಕೋಳೂರ ಗ್ರಾಮ ಪಂಚಾಯತಿಯಲ್ಲಿ ಬಡವರಿಗಾಗಿ ಸರಕಾರ ಅನುಷ್ಠಾನಗೊಳಿಸಿದ ಬಸವ ವಸತಿ ಯೋಜನೆ, ಡಾ.ಬಿಆರ್.ಅಂಬೇಡ್ಕರ್ ಯೋಜನೆ ಹಾಗೂ ಇಂದಿರಾ ಆವಾಸ ಯೋಜನೆಯಲ್ಲಿ ಬಾರಿ ಬ್ರಷ್ಠಾಚಾರ ನೆಡೆದಿದ್ದು ಕೂಡಲೇ ಇದರಲ್ಲಿ ಶಾಮಿಲಾಗಿರುವವರಿಗೆ ಕಾನೂನು ರೀತಿ ಕ್ರಮ ಕೈಗೊಂಡು ಲೂಟಿ ಹೊಡೆದ ಸರಕಾರದ ಹಣವನ್ನು ಮರಳಿ ಸರಕಾರಕ್ಕೆ ಭರಣಾ ಮಾಡುವಂತೆ ಮಾಡಬೇಕು ಎಂದು ಸಮಾಜ ಸೇವಕ ಜಗದೀಶ ಚವ್ಹಾಣ ಆಗ್ರಹಿಸಿದರು.



ಈ ಕುರಿತು ಬುಧವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ೨೦೧೪-೧೫ನೇ ಸಾಲಿನಿಂದ ೨೦೧೯-೨೦ರ ವರೆಗೂ ಕೋಳೂರ ಗ್ರಾಪಂ ವ್ಯಾಪ್ತಿಗೆ ಬರುವ ಕೋಳೂರ ತಾಂಡಾದಲ್ಲಿ ನೌಕರರ ಕುಟುಂಬಕ್ಕೆ ವಸತಿ ಯೋಜನೆಯಲ್ಲಿ ಮನೆಗಳನ್ನು ಹಾಕಿ ಯಾವುದೇ ಮನೆ ಕಟ್ಟದೇ ವಸತಿ ಯೋಜನೆಗಳಲ್ಲಿ ಬರುವ ಹಣವನ್ನು ಬೊಗಸ್ ಬಿಲ್ ಮಾಡುವ ಮೂಲಕ ಸರಕಾರದ ಹಣವನ್ನು ಲೂಟಿ ಮಾಡಿದ್ದಾರೆ. ಇದರ ಬಗ್ಗೆ ಮುದ್ದೇಬಿಹಾಳ ತಾಪಂ ಇಓ ಅವರಿಗೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷಿಸಿ ಬೇಜವಾಬ್ದಾರಿತ ಮೆರೆದಿದ್ದಾರೆ. ಆದ್ದರಿಂದ ಈ ಪ್ರಕರಣ ಬಗ್ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.



ಸಂಪೂರ್ಣ ಅಧ್ಯಕ್ಷರ ಕೈವಾಡ:
ಕೋಳೂರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಗೊಂಡು ಬಡವರಿಗೆ ಮುಟ್ಟಿಸಬೇಕಾದ ಸರಕಾರಯೋಜನೆಯ ಹಣವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಬೇಕಾಬಿಟ್ಟಿಯಾಗಿ ತಮಗೆ ಬೇಕಾದ ಕುಟುಂಬಕ್ಕೆ ವಸತಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿ ಸರಕಾರದಿಂದ ಮನೆ ಕಟ್ಟಲು ಬರುವ ಲಕ್ಷಾಂತ ರೂಪಾಯಿ ಹಣವನ್ನು ಲೂಟಿ ಮಾಡಿರುವದರಲ್ಲಿ ಗ್ರಾಪಂ ಅಧ್ಯಕ್ಷರ ಕೈವಾಡವಿದೆ. ಅಲ್ಲದೇ ಇಂತಹ ಕಾರ್ಯಕ್ಕೆ ಕೈಜೋಡಿಸಿರುವ ಪಿಟಿಓ ಅವರನ್ನೂ ಶಿಕ್ಷಯಾಗುವಂತೆ ಮಾಡಿ ಲೂಟಿ ಹೊಡೆದ ಹಣವನ್ನು ಸರಕಾರಕ್ಕೆ ಮರಳಿ ಭರಿಸಬೇಕು ಎಂದು ಜಗದೀಶ ಚವ್ಹಾಣ ಆಗ್ರಹಿಸಿದ್ದಾರೆ.



Be the first to comment

Leave a Reply

Your email address will not be published.


*