ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಅ.15:
ತಾಲೂಕಿನ ಯರಝರಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಧಂದೆಯಲ್ಲಿ ತೊಡಗಿದ್ದಾರೆ ಎಂಬದೂರುಗಳು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಗಣ್ಣ ಬಾಗೇವಾಡಿ ಎಂಬುವರನು ಸಂಘದ ಹುದ್ದೆಯಿಂದ ತಾತ್ಕಾಲಿಕವಾಗಿ ವಜಾಗೊಳಿಸಿ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಪ್ರ.ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ ಅವರು ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುತ್ತಿದ್ದು ಯರಝರಿ, ನಾಗರಾಳ, ಹಂಡರಗಲ್ಲ ವ್ಯಾಪ್ತಿಯ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ ಸ್ಥಳೀಯ ತಹಸೀಲ್ದಾರ ಅವರಿಗೆ ಲಿಖಿತ ದೂರು ಬಂದಿದ ಹಿನ್ನೆಲೆಯಲ್ಲಿ ಅಂಬಿಗಾ ನ್ಯೂಸ್ ಟಿವಿ ಅಕ್ರಮ ಮರಳು ಗಣಿಗಾರಿಕೆ ಮಾಡುವ ಬಗ್ಗೆ ವಿಶೇಷ ವರದಿ ಮಾಡಿತ್ತು. ಇದನ್ನು ಪರಿಗಣಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗುವವರೆಗೂ ಸಂಗಣ್ಣ ಬಾಗೇವಾಡಿ ಅವರನ್ನು ಸಂಘದ ಅವರ ಹುದ್ದೆಯಿಂದ ತಾತ್ಕಾಲಿಕವಾಗಿ ವಜಾಗೊಳಿಸಿ ರೈತರ ಸಂಘದ ಎಲ್ಲ ಚಟುವಟಿಕೆಗಳಿಂದಲ್ಲಿ ಭಾಗಿಯಾಗದಂತೆ ಆದೇಶದಲಿ ತಿಳಿಸಿದ್ದಾರೆ.
Be the first to comment