ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನ ದೇಶಕ್ಕೆ ನಷ್ಟವಾಗಿದೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 



ಮುದ್ದೇಬಿಹಾಳ:

ಎಸ್.ಪಿ. ಅವರ ನಿಧನ ಕೇವಲ ಕರ್ನಾಟಕವಲ್ಲದೆ ಇಡೀ ದೇಶಕ್ಕೆ ನಷ್ಟವಾಗಿದೆ. ಸಂಗೀತದಲ್ಲಿ ವಿನೂತನ ತಂದ ಅವರು ಇಳಿಯ ನಟರ ಧ್ವನಿಯಲ್ಲಿಯೇ ಧ್ವನಿ ನೀಡಿದವರು. ಅಲ್ಲದೇ ರಾಜ್ಯದಲ್ಲಿ ಯುವ ಹಾಡುಗಾರರಿಗೆ ಒಳ್ಳೆಯ ವೇಧಿಕೆ ನೀಡಿದವರು ಎಂದು ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಹೇಳಿದರು.



ಪಟ್ಟಣದ ಮೇಘ ಕರೋಕೆ ಸಿಂಗಿಂಗ್ ಕ್ಲಾಸ್ ಹಾಗೂ ನ್ಯೂ ಸನ್ ಟೆಕ್ ಕಂಪ್ಯೂಟರ್ (ಕಿಯೋನಿಕ್ಸ್) ಸೆಂಟರ್ ನಲ್ಲಿ ಮುದ್ದೇಬಿಹಾಳ ಯುವ ವೇದಿಕೆ, ಕಲಾ ಸಿಂಚನಾ ಹಾಗೂ ಇಂಚರ ಮೆಲೋಡಿಸ್ ವತಿಯಿಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗುರುಗಳಿಗೆ ಹಮ್ಮಿಕೊಳ್ಳಲಾದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. 



ಬಾಲಸುಬ್ರಹ್ಮಣ್ಯಂ ಅವರು ಕೇವಲ ಕನ್ನಡವಲ್ಲದೆ ತಮಿಳು, ತೆಲಗು, ಮಲಯಾಳಂ, ಮರಾಠಿ, ಹಿಂದಿ ಭಾಷೆಗಳ್ಳಲ್ಲಿ ಹಾಡಿ ಎಲ್ಲ ಕ್ಷೇತ್ರಗಳಲ್ಲಿ ಭೃಹತ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.



ಈ ಸಂದರ್ಭದಲ್ಲಿ ಕಲಾವಿದರಾದ ದೀಪಾ ರತ್ನಾಶ್ರೀ, ನಾಗರಾಜಗೌಡ ಬಿರಾದಾರ, ಗೋಪಾಲ‌ ಹೂಗಾರ, ಹಣಮಂತ‌ ಮಹಾಲಿಂಗಪುರ, ಚಂದ್ರಶೇಖರ ಪ್ಯಾಟೀಗೌಡರ, ಸಂಗು ಮಾಗಿ, ಬಾಬು ಮುದ್ನಾಳ, ಶರಣು ಅಮರಣ್ಣವರ, ಸುಮಾ ಮಠ, ಚಂದ್ರಶೇಖರ ಬಿರಾದಾರ, ನಿಖಿಲ್ ಚೌಹಣ್, ಯಮನಪ್ಪ ರೂಡಗಿ, ಲಕ್ಕಪ್ಪ ತುರಡಗಿ ಇದ್ದರು.



 

Be the first to comment

Leave a Reply

Your email address will not be published.


*