ಅವೈಜ್ಞಾನಿಕ ಸಿಸಿ ರಸ್ತೆ..! ಮಳೆ ನೀರು ಮನೆ ಒಳಗೆ ಹರಿಯುತ್ತಿರುವುದಕ್ಕೆ ಗ್ರಾಮಸ್ಥರು ಪಪಂ ವಿರುದ್ಧ ಆಕ್ರೋಶ…!

ವರದಿ: ಕಾಶಿನಾಥ ಬಿರಾದಾರ

ಜಿಲ್ಲಾ ಸುದ್ದಿಗಳು 



ನಾಲತವಾಡ:

ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ವಿಜಯಪುರ ಜಿಲ್ಲೆಯ ನಾಲತವಾಡಪಟ್ಟಣದ ಜನತೆ ಕಂಗಾಲಾಗಿದ್ದಾರೆ. ಇನ್ನು ನಾಲತವಾಡದಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ನೀರು ಮನೆಯಂಗಳದಲ್ಲಿ ಹರಿಯುತ್ತಿದೆ.



ವಿನಾಯಕನಗರದ ಗಣಪತಿ ದೇವಸ್ಥಾನದ ಮುಂದಗಡೆ ನಾಲತವಾಡ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮಾಡಿರುವ ಅವೈಜ್ಞಾನಿಕ ಸಿಸಿ ರಸ್ತೆಯಿಂದಾಗಿ ಗೋಡೆಗಳು ಬಿರುಕು ಬಿಟ್ಟು ಮಧ್ಯದಲ್ಲಿ ಮಳೆ ನೀರು ಹಾಯ್ದು ಹೋಗುತ್ತಿರುವುದಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ.

ಮನೆ ನೀರಿನಿಂದ ಗೋಡೆ ಕುಸಿದ್ರೇ ಸಮಸ್ಯೆ ಆಗಬಹುದು ಎಂದು ಪಟ್ಟಣ ಪಂಚಾಯ್ತಿ ವಿರುದ್ಧ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಗಣಪತಿ ದೇವಸ್ಥಾನದ ಪಕ್ಕದ ಪ್ಲಾಟ್ ನಲ್ಲಿ ಮಳೆ ನೀರು ನಿಂತಿರುವುದಕ್ಕೆ ಇಷ್ಟೆಲ್ಲ ಕಾರಣವಾಗಿದೆ. ಅದಕ್ಕಾಗಿ ಆ ಪ್ಲಾಟ್ ಒನರ್ ಕರೆಯಿಸಿ ಸಮಸ್ಯೆ ಇತ್ಯರ್ಥ ಮಾಡುವಂತೆ ಪಪಂ‌ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.



ಈ ವೇಳೆ ವಿ.ಎಸ್. ಪನಗೌಡರ, ಈರಪ್ಪ ಲಾಟಿ, ವೀರೆಶ ಕಸೆಬೆಗೌಡರ, ಬಸವರಾಜ ಗಡ್ಡಿ,  ಮಾಂತಪ್ಪ ಗಡ್ಡಿ, ಮಲಯ್ಯ ಹಿರೆಮಠ, ಅಂಬ್ರಮ್ಮ ಹಿರೇಮಠ, ಶಾಂತಾ ಗಡ್ಡಿ, ಮಾಂತು ಗಂಗನಗೌಡರ ಇದ್ದರು





 

 

Be the first to comment

Leave a Reply

Your email address will not be published.


*