ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ನವನಗರದ ಯುನಿಟ್ 2ರ ವ್ಯಾಪ್ತಿಯಲ್ಲಿ ಬರುವ 160 ಸಂತ್ರಸ್ಥರಿಗೆ ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹಕ್ಕುಪತ್ರಗಳನ್ನು ಶನಿವಾರ ವಿತರಣೆ ಮಾಡಿದರು.
ಯುನಿಟ್2ರ ಎಫ್.ಆರ್.ಎಲ್ 521-523 ಹಾಗೂ 100 ಮೀಟರ್ ವ್ಯಾಪ್ತಿಯಲ್ಲಿ ಬರುವ 117 ಬಾಡಿಗೆದಾರರು, 15 ಬಯಲು ಜಾಗೆ ಸಂತ್ರಸ್ಥರು, 11 ಮುಖ್ಯ ಸಂತ್ರಸ್ಥರು, 9 ಮುಖ್ಯ ಸಂತ್ರಸ್ಥರ ವಯಸ್ಕರ ಮಕ್ಕಳು, 5 ಜನ ಅತಿಕ್ರಮಣದಾರರ ಹಾಗೂ 3 ವಾಣಿಜ್ಯ ಸಂತ್ರಸ್ಥರು ಸೇರಿ ಒಟ್ಟು 160 ಸಂತ್ರಸ್ಥರಿಗೆ ಹಕ್ಕು ಪತ್ರಗಳನ್ನು ಶಾಸಕರು ವಿತರಿಸಿ ನಂತರ ಮಾತನಾಡಿದ ಅವರು ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರದ ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ಮೊದಲ ಹಂತದಲ್ಲಿ 72, ಎರಡನೇ ಹಂತದಲ್ಲಿ 93 ಹಾಗೂ ಮೂರನೇ ಹಂತದಲ್ಲಿ 16 ಸೇರಿ ಇಲ್ಲಿಯವರೆಗೆ ಒಟ್ಟು 325 ಸಂತ್ರಸ್ಥರಿಗೆ ಹಕ್ಕು ಪತ್ರ ವಿತರಿಸಿರುವುದಾಗಿ ತಿಳಿಸಿದರು.
ಹಕ್ಕುಪತ್ರ ವಿತರಣೆಯಲ್ಲಿ ಯಾವುದೇ ನ್ಯೂನ್ಯತೆಗಳು ಇರುವುದಿಲ್ಲ. ಈ ಹಕ್ಕುಪತ್ರವನ್ನು ಬ್ಯಾಮಕಿನಲ್ಲಿಟ್ಟು ಸಾಲ ಪಡೆಯಬಹುದಾಗಿದೆ. ಎಲ್ಲ ರೀತಿಯಿಂದ ಕಂದಾಯ ಇಲಾಖೆಯಿಂದ ಪರಿಶೀಲಿಸಲಾಗಿ ಹಕ್ಕು ಪತ್ರ ನೀಡಲಾಗಿದೆ. ಆದರೆ ಕಳೆದ 6 ವರ್ಷಗಳಲ್ಲಿ ಹಕ್ಕು ಪತ್ರ ವಿತರಣೆಯಲ್ಲಿ ನ್ಯೂನ್ಯತೆಗಳು ಕಂಡುಬಂದಿದ್ದು, ಅವುಗಳ ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಹಕ್ಕುಪತ್ರ ಪಡೆದ ಸಂತ್ರಸ್ಥರು ತಮಗೆ ನೀಡಿದ ಜಾಗವನ್ನು ಯಾರಿಗೂ ಮಾರಾಟ ಮಾಡಲು ಬರುವದಿಲ್ಲ. ಇನ್ನು ಒಂದು ವರ್ಷದಲ್ಲಿ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ವಾಸ ಮಾಡಬೇಕು. ಒಂದು ವರ್ಷದಲ್ಲಿ ಮನೆಗಳನ್ನು ಕಟ್ಟಿಕೊಳ್ಳದಿದ್ದರೆ ಪುನಃ ನೀಡಿದ ಜಾಗವನ್ನು ಬಿಟಿಡಿಎಗೆ ಪಡೆಯಲಾಗುವುದೆಂದು ತಿಳಿಸಿದರು.
ಆಸ್ತಿ ಕಳೆದುಕೊಂಡ ಸಂತ್ರಸ್ಥರಾದವರು ನೇರವಾಗಿ ಬಿಟಿಡಿಎ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಯಾವುದೇ ರೀತಿಯಲ್ಲಿ ಮಧ್ಯವರ್ತಿಗಳಿಗೆ ಮೊರೆ ಹೋಗಬಾರದು. ತಾವು ಪದೇ ಪದೇ ಕಚೇರಿಗೆ ಅಲೇದಾಡಬಾರದು. ತಾವು ಕೊಟ್ಟ ಅರ್ಜಿಯನ್ನು ಪರಿಶೀಲಿಸಿ ಹಕ್ಕು ವಿತರಣೆಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಟಿಡಿಎ ಸದಸ್ಯರಾದ ಶಿವಾನಂದ ಟವಳಿ, ಮೋಹನ ನಾಡಗೌಡರ, ಕುಮಾರ ಎಳ್ಳಿಗುತ್ತಿ, ಬಿಟಿಡಿಎ ಮುಖ್ಯ ಅಭಿಯಂತರ ಅಶೋಕ ವಾಸನದ, ಪುನರ್‍ರ್ವಸತಿ ಅಧಿಕಾರಿ ಗಣಪತಿ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಬ್ಬಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿವೇಶಕ್ಕೆ ಬಿಟಿಡಿಎ ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿ.
ಬಾಗಲಕೋಟೆ ಪಟ್ಟಣದಲ್ಲಿ ಆಸ್ತಿ ಕಳೆದುಕೊಂಡ ಸಂತ್ರಸ್ಥರು ಹಾಗೂ ಬಾಡಿಗೆ ನಾತೆಯಿಂದ ವಾಸವಾಗಿ ಸಂತ್ರಸ್ಥರಾದವರು ನವನಗರದಲ್ಲಿ ನಿವೇಶ ಪಡೆಯಲು ನೇರವಾಗಿ ಸಂತ್ರಸ್ಥರೆ ಬಾಗಲಕೋಟೆ ಪಟ್ಟಣ ಅಭಿವೃಧ್ದಿ ಪ್ರಾಧಿಕಾರಕ್ಕೆ ಬಂದು ಅರ್ಜಿ ಸಲ್ಲಿಸಬೇಕು. ಮಧ್ಯವರ್ತಿಗಳ ಮೂಲಕ ಸಲ್ಲಿಸತಕ್ಕದ್ದಲ್ಲ. ಸಂತ್ರಸ್ಥರು ಬಿಟಿಡಿಎ ಕಚೇರಿಯಿಂದ ತೊಂದತೆ ಅನುಭವಿಸುತ್ತಿದ್ದಲ್ಲಿ. ಸಿಬ್ಬಂದಿ ವಿಳಂಬ ದೋರಣೆ ಮಾಡಿದಲ್ಲಿ, ಲಂಚ ಆಮಿಷ ಒಡ್ಡಿದಲ್ಲಿ ನೇರವಾಗಿ ದೂರವಾಣಿ ಮೂಲಕ ಪುನರ್ವಸತಿ ಅಧಿಕಾರಿಗಳು, ಮುಖ್ಯ ಇಂಜಿನೀಯರ್ ಇಲ್ಲವೇ ಪ್ರಾಧಿಕಾರದ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ.
ಯಾವುದೇ ಸಂತ್ರಸ್ಥರು ಅಧಿಕೃತವಲ್ಲದ, ಖೊಟ್ಟಿ ದಾಖಲೆ ಪತ್ರಗಳನ್ನು ಸಲ್ಲಿಸಿ ನಿವೇಶನ ಪಡೆದುಕೊಳ್ಳಲು ಯತ್ನಿಸಿದಲ್ಲಿ ಅಂತಹ ಅರ್ಜಿದಾರರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ಪ್ರಾಧಿಕಾರದ ಪುನರ್ವಸತಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಿಸಬೇಕಾದ ಮೊನಂ. ಪುನರ್ವಸತಿ ಅಧಿಕಾರಿಗಳು (9902407759), ಮುಖ್ಯ ಅಭಿಯಂತರರು (08354-233353), ಸದಸ್ಯರಾದ ಮೋಹನ ನಾಡಗೌಡ (9448073888), ಜಿ.ಜಿ.ಯಳ್ಳಿಗುತ್ತಿ (9448336663), ಶಿವಾನಂದ ಟವಳಿ (7019225105).
Be the first to comment