ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ರೈಲ್ವೆ ನಿಲ್ದಾಣದಲ್ಲಿ ಆಗಬೇಕಾದ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಮಾಡುವ ಮೂಲಕ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಮಾಡಿಕೊಡಲು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ತಂದರು.
ವಿಜಯಪುರದಿಂದ ವಿಶೇಷ ನಿರೀಕ್ಷಣಾ ರೈಲು ಮೂಲಕ ಬಾಗಲಕೋಟೆ ರೈಲ್ವೆ ನಿಲ್ಧಾಣಕ್ಕೆ ಬಂದಿಳಿದ ರೈಲ್ವೆ ಇಲಾಖೆಯ DRM ಅರವಿಂದ ಅವರಿಗೆ ಶಾಸಕರಾದ ವೀರಣ್ಣ ಚರಂತಿಮಠವರು ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು.
ಬಾಗಲಕೋಟೆಯ ರೈಲ್ವೆ ನಿಲ್ಧಾಣದಲ್ಲಿ ಗೂಡಶೆಡ್ ನಿರ್ಮಾಣ ಕಾಮಗಾರಿ, ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ನೂತನ ವಸತಿ ಗೃಹ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗದ ಕಾಮಗಾರಿಯನ್ನು ವೇಗವಾಗಿ ಮಾಡಬೇಕು. ಖಜ್ಜಿಡೋಣಿಯಿಂದ ಲೋಕಾಪುರದವರೆಗೆ ರೈಲ್ವೆ ಮಾರ್ಗವಾಗಿದ್ದು ಮುಂದಿನ ಕಾಮಗಾರಿ ತೀವ್ರಗತಿಯಲ್ಲಿ ಆಗಬೇಕು. ಬರುವ ವಿಧಾನಸಭೆಯ ಅಧಿವೇನದಲ್ಲಿಯೂ ಕೂಡ ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತರಲಾಗುವುದು ಎಂದು ಶಾಸಕರು ಹೇಳಿದರು. ರೈಲ್ವೆ ಅಧಿಕಾರಿಗಳ ತಂಡ ರೈಲ್ವೆ ನಿಲ್ದಾಣದಲ್ಲಿ ಆಗಬೇಕಾದ ನೀಲನಕ್ಷೆಯ ಪ್ರಕಾರ ಕಾಮಗಾರಿಗಳ ಸ್ಥಳವನ್ನು ಪರಿಶೀಲಿಸಿದರು. ಗೂಡ್ಸ್ ಶೆಡ್, ಹಾಗೂ ಇಲಾಖೆಯ ಸಿಬ್ಬಂದಿಗೆ ನಿರ್ಮಾ ಣವಾಗಬೇಕಾದ ವಸತಿ ಗೃಹ ಸ್ಥಳ, ರೈಲ್ವೆ ನಿಲ್ದಾಣ ಸುತ್ತ ಸಂಚರಿಸಿ ವೀಕ್ಷಿಸಿದರು.
ರೈಲ್ವೆ ಇಲಾಖೆಯ ಸೀನಿಯರ್ ಡೆಪ್ಯೂಟಿ ಚೀಪ್ ಎಂಜನೀಯರ್ ಇಮ್ತಿಯಾಜ್, ಪ್ರಪುಲ್ ಕುಮಾರ ಎನ್.ಸೋಮಶೇಖರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Be the first to comment