ಗುಡೂರ ಭಾಗದ ರೈತರಿಗೂ ಹನಿ ನೀರಾವರಿ ವಿಸ್ತರಿಸಿ:ಬಸವರಾಜ ನಾಡಗೌಡ

ವರದಿ: ಶರಣಪ್ಪ ಬಾಗಲಕೋಟೆ

ಬಾಗಲಕೋಟೆ:ಗುಡೂರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೂ ಹನಿ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ವಿವಿಧ ಗ್ರಾಮಗಳ ಮುಖಂಡರು ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಕೆಲೂರ ಗ್ರಾಮದ ಬಿಜೆಪಿ ಮುಖಂಡ ಬಸವರಾಜ ನಾಡಗೌಡ ಮಾತನಾಡಿ ಗುಡೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹದಿನೈದಕ್ಕೂ ಹೆಚ್ಚು ಹಳ್ಳಿಗಳಿಗೆ ಹನಿ ನೀರಾವರಿ ಭಾಗ್ಯ ದೊರೆತಿಲ್ಲ ಶಾಸಕರು ಕೆಲವು ಗ್ರಾಮಗಳಿಗೆ ಹನಿ ನೀರಾವರಿ ಯೋಜನೆಯನ್ನು ತಂದಿದ್ದಾರೆ. ಗುಡೂರು ಜಿಲ್ಲಾ ಪಂಚಾಯತ್ ಭಾಗದ ಗ್ರಾಮಗಳ ಭೂಮಿಗೆ ನೀರು ಒದಗಿಸಬೇಕು ಎಂದು ಕೋರಿದರು.ಹನಿ ನೀರಾವರಿ ಯೋಜನೆ ವಿಸ್ತರಿಸುವುದರಿಂದ ಈ ಭಾಗದ ರೈತರಿಗೆ ಶಕ್ತಿ ಕೊಟ್ಟಂತಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಾಗೇಶ ಗಂಜಿಹಾಳ, ಸಂಗಣ್ಣ ನಾಡಗೌಡ, ಗ್ಯಾನಪ್ಪ ಗೋನಾಳ, ದೇವರಾಜ್ ಮೇಟಿ ಹಾಗೂ ವಿವಿಧ ಗ್ರಾಮಗಳ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*