ನಿಡಗುಂದಿ ತಹಸೀಲ್ದಾರಗೆ ನೋಟಿಸ್ ಜಾರಿಸುವಂತೆ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎಸಿಗೆ ಸೂಚಿನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ಮುದ್ದೇಬಿಹಾಳ ಮತಕ್ಷೇತ್ರದ ಮಸೂತಿ ಗ್ರಾಮದಲ್ಲಿ ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ವೃದ್ಧ ಮಹಿಳೆಯರು ದೂರಿದ ಹಿನ್ನೆಲೆಯಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನಿಡಗುಂದಿ ತಹಶೀಲ್ದಾರ್ ಗೆ ನೋಟಿಸ್ ನೀಡುವಂತೆ ಎಸಿ ಅವರಿಗೆ ಸೂಚಿಸಿದರು.



ಕೆಳೆದ ಕೆಲ ತಿಂಗಳ ಹಿಂದೆ ಶಾಸಕರು ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿಯೇ ಗ್ರಾಮಸ್ಥರು ದೂರು ನೀಡಿದ್ದರು. ಅಂದೆ ಸಂಬಂದಿಸಿದ ಅಧಿಕಾರಿಗಳಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಶಾಸಕ ನಡಹಳ್ಳಿ ಅವರು ರವಿವಾರ ನೇರವಾಗಿ ಉಪ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಕೂಡಲೇ ತಹಸೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡುವಂತೆ ತಿಳಿಸಿದರು.

 

 

Be the first to comment

Leave a Reply

Your email address will not be published.


*