ಬ್ರೇಕಿಂಗ್ : ‘ಸುಪ್ರೀಂಕೋರ್ಟ್‌ ಮಹತ್ವದ ಆದೇಶ’ ರಾಜ್ಯ ಸರಕಾರಕ್ಕೆ ಬಿಗ್ ರಿಲೀಫ್‌, ಯಥಾಸ್ಥಿತಿ ಕಾಪಾಡುಂತೆ ಕಾಪಾಡುವಂತೆ ಆದೇಶ

ಬ್ರೇಕಿಂಗ್ : 'ಸುಪ್ರೀಂಕೋರ್ಟ್‌ ಮಹತ್ವದ ಆದೇಶ' ರಾಜ್ಯ ಸರಕಾರಕ್ಕೆ ಬಿಗ್ ರಿಲೀಫ್‌, ಯಥಾಸ್ಥಿತಿ ಕಾಪಾಡುಂತೆ ಕಾಪಾಡುವಂತೆ ಆದೇಶ

Ambig News Tv

ನವದೆಹಲಿ: ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಪಟ್ಟಂತೆ ಯಥಾಸ್ಥಿತಿ ಕಾಪಾಡುಂತೆ ಕಾಪಾಡುವಂತೆ ನ್ಯಾಯಾಪೀಠ ಹೇಳಿ ಈ ಮೂಲಕ ರಾಜೀನಾಮೆ ಅಂಗೀಕರ ಮಾಡುವಂತಿಲ್ಲ. ಅನರ್ಹತೆ ಇಲ್ಲ ಮಾಡುವಂತೆ ಹೇಳಿ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಇದರೊಂದಿಗೆ ಸ್ಪೀಕರ್‌ ನಮ್ಮ ರಾಜೀನಾಮೆಯನ್ನು ಅಂಗೀಕರ ಮಾಡುವಂತೆ ಆದೇಶ ನೀಡಬೇಕು ಅಂತ ಸುಪ್ರೀಂಕೋರ್ಟ್‌ ಕದತಟ್ಟಿದ ಶಾಸಕರಿಗೆ ದೊಡ್ಡಮಟ್ಟದ ಹಿನ್ನಡೆಯಾಗಿದೆ. ಅತೃಪ್ತರ ಬಗ್ಗೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು, ಸ್ಪೀಕರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ವಿಚಾರಣೆ ಆರಂಭವಾದ ವೇಳೆಯಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ಅವರು ನ್ಯಾಯಾಲಯದಲ್ಲಿ ಇರದ ಕಾರಣ ಮುಕುಲ್ ರೋಹಟಗಿ ಅವರ ಜ್ಯೂನಿಯರ್‌ ವಕೀಲರು ಕೆಲ ಕಾಲ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು.

ಹೀಗಾಗಿ ಕೆಲ ಕಾಲ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದರು. ನಂತರ ವಿಚಾರಣೆ ಪುನಃ ನಡೆಯಿತು. ಇದೇ ವೇಳೇ ನ್ಯಾಯಾಪೀಠಕ್ಕೆ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ನಿನ್ನೆ ಸ್ಪೀಕರ್‌ ಅವರು ನೀಡಿದ್ದ ವಿವರಣೆಯನ್ನು ನ್ಯಾಯಾಪೀಠಕ್ಕೆ ಸಲ್ಲಿಕೆ ಮಾಡಿದ್ದರು.

ನ್ಯಾಯಪೀಠದ ಮುಂಧೆ ಅತೃಪ್ತ ಶಾಸಕರ ಪರವಾಗಿ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಮುಕುಲ್ ರೋಹಟಗಿ ನಿನ್ನೆ ಅತೃಪ್ತ ಶಾಸಕರ ರಾಜೀನಾಮೆಯನ್ನು ಪಡೆದುಕೊಂಡ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಸ್ಪೀಕರ್‌ ಮಾತನಾಡಿದ ‘ವೈ ದ ಹೆಲ್‌’ ಮಾತುಗಳನ್ನು ನ್ಯಾಯಾಧೀಶರ ಮುಂದೆ ಗಮನಕ್ಕೆ ಮುಕುಲ್ ರೋಹಟಗಿ ತಂದರು. ಇದೇ ವೇಳೆ ಶಾಸಕರು ನ್ಯಾಯಾಲಯಕ್ಕೆ ಹೋದ ಬಗ್ಗೆ ಕೂಡ ಸ್ಪೀಕರ್‌ ಅವರು ಮಾತನಾಡಿದನ್ನು ಉಲ್ಲೇಖ ಮಾಡಿ ಈ ಸ್ಪೀಕರ್‌ ರೀತಿ ಹೇಳುವಂತೆ ಇಲ್ಲ, ಶಾಸಕರು ನ್ಯಾಯಾಲಯಕ್ಕೆ ಹೋಗುವುದು ತಪ್ಪ ಅಂತ ಹೇಳಿದರು. ಶಾಸಕರು ಸರಕಾರದ ಪರ ಮತ ಚಲಾವಣೆ ಮಾಡುವುದಕ್ಕೆ ಇಷ್ಟವಿಲ್ಲ ಅಂತ ಹೇಳಿದರು. ಸ್ಪೀಕರ್‌ ಉದ್ದೇಶವಾಗಿ ರಾಜೀನಾಮೆನ್ನು ಅಂಗೀಕರ ಮಾಡುವುದಕ್ಕೆ ತಡಮಾಡುತ್ತಿದ್ದಾರೆ ಅಂತ ಹೇಳಿದರು.

ಇನ್ನೂ ಸ್ಪೀಕರ್‌ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಸ್ಪೀಕರ್‌ ಅವರಿಗೆ ಮನವರಿಕೆಯಾದ್ರೆ ಮಾತ್ರ ರಾಜೀನಾಮೆ ಅಂಗೀಕರ ಮಾಡುತ್ತಾರೆ. ಶಾಸಕರ ವಿಚಾರಣೆಗೆ ಸಮಯವನ್ನು ನಿಗದಿಪಡಿಸಿದ್ದಾರೆ. ಶಾಸಕರು ಸ್ಪೀಕರ್‌ ಕೈಗೆ ರಾಜೀನಾಮೆ ನೀಡಬೇಕು ಅಂತ ಹೇಳಿದರು. ಅನರ್ಹತೆ ತಪ್ಪಿಸುವುದಕ್ಕೆ ರಾಜೀನಾಮೆ ನೀಡಿದ್ದಾರೆ ಅಂತ ಹೇಳಿದರು. ಇನ್ನು ಶಾಸಕರು ಮುಂಬೈನಲ್ಲಿ ಇರೋದು ಯಾಕೆ? ನ್ಯಾಯಾಲಯದಲ್ಲಿ ಪ್ರಶ್ನೆಮಾಡಿದರು. ಇದೇ ವೇಳೆ ಸಮಯದ ಗಡುವನ್ನು ಸ್ಪೀಕರ್‌ ನೀಡಲು ಸಾಧ್ಯವಾಗೋದಿಲ್ಲ ರಾಜೀನಾಮೆಯ ಅಂಗೀಕಾರ ಸಮಯದ ಗಡುವನ್ನು ಸ್ಪೀಕರ್‌ ನೀಡಲು ಸಾಧ್ಯವಾಗೋದಿಲ್ಲ ಅಂತ ಹೇಳಿದರು. ಅವರು ಹೀಗಾಗಿ ನೀವು ಇದಕ್ಕೆ ಗಡುವು ನೀಡಬೇಡ ಬೇಡಿ ಅಂತ ಹೇಳಿದರು, ಶಾಸಕರ ಅನರ್ಹತೆ ಮೊದಲು ಬಗ್ಗೆ ಸ್ಪೀಕರ್‌ ನಿರ್ಧಾರಿಸಲಿ ನಾಳೆ ಸರಕಾರ ರಚನೆಯಾದ್ರೆ ಶಾಸಕರು ಸಚಿವರಾವರಾಗುತ್ತಾರೆ, 1974 ರ ತಿದ್ದುಪಡಿ ಪ್ರಕಾರ ಸುಮ್ಮನೆ ರಾಜೀನಾಮೆಯನ್ನು ಅಂಗೀಕಾರ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದರು.

ಇನ್ನು ಸ್ಪೀಕರ್‌ಗೆ ನಮ್ಮ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನೆ ಮಾಡುತ್ತೀರಾ ಅಂತ ಸಿಜೆಐ ಪ್ರಶ್ನೆ ಮಾಡಿದರು. ನಾವು ಕೈ ಕಟ್ಟಿ ಕೂರಬೇಕಾ ಅನ್ನೋಂದು ನಿಮ್ಮ ನಿಲುವ ಅಂತ ಪ್ರಶ್ನೆ ಮಾಡಿದರು.

ಇನ್ನು ಸಿಎಂ ಪರವಾಗಿ ವಾದ ಮಂಡಿಸಿದ ವಕೀಲ ರಾಜೀವ್‌ ಧವನ್‌ ಉದ್ದೇಶ ಪೂರ್ವಕವಾಗಿ ಸರಕಾರವನ್ನು ಬೀಳಿಸುವುದಕ್ಕೆ ಇವರು ಮುಂದಾಗಿದ್ದಾರೆ. ಇದಲ್ಲದೇ ಸಿಎಂ ಕುಮಾರಸ್ವಾಮಿಯವರಿಗೆ ಬಹುಮತವಿದೆ. ನನ್ನ ವಿರುದ್ದವಾಗಿ ಎಕಪಕ್ಷೀಯವಾಗಿ ನೀವು ಆದೇಶ ನೀಡಿದ್ದಾರೆ.

ಶಾಸಕರು ಮಾಡುತ್ತಿರುವ ಆರೋಪ ಸರಿಯಿಲ್ಲ ಅಂತ ಹೇಳಿದರು. ಇನ್ನು ಅತೃಪ್ತ ಶಾಸಕರು ಸಲ್ಲಿಸಿದ್ದ ಈ ಅರ್ಜಿ ಸಲ್ಲಿಸಬಾರದಾಗಿತ್ತು. ಯಾವ ಆಧಾರದಲ್ಲಿ ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ ಮಧ್ಯಪ್ರವೇಶ ಮಾಡುವಂತೆ ಮವನಿ ಮಾಡಿಕೊಂಡಿದ್ದಾರೆ. ಇದಲ್ಲದೇ ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತೆ ಕೇಳಿಕೊಂಡಿರುವುದು ಕಾನೂನಿನಲ್ಲಿ ಇಲ್ಲ. ಸುಪ್ರೀಂಕೋರ್ಟ್‌ ಏನು ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ ಅಂತ ಪ್ರಶ್ನೆ ಮಾಡಿದರು. ಇನ್ನೂ ಸ್ಪೀಕರ್‌ ಸಮಯ ನೀಡುವುದಾಗಿ ಹೇಳಿದ್ದಾರೆ. ಶಾಸಕರು ರಾಜಕೀಯ ವಿಷಯವನ್ನು ನ್ಯಾಯಾಲಯಕ್ಕೆ ತಂದಿದ್ದಾರ ಅಂತ ಹೇಳಿದ್ದಾರೆ. ಸ್ಪೀಕರ್‌ ಶಾಸಕರು ನೀಡಿರುವ ರಾಜೀನಾಮೆಯನ್ನು ತೃಪ್ತಿಕರವಾಗಿದ್ದಾರೆ ಮಾತ್ರ ಅಂಗೀಕರಾ ಮಾಡುವುದಾಗಿ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆತಂಕಕಾರಿ ಬೆಳವಣಿಗೆಗೆ ಇವೆರೆಲ್ಲ ಕಾರಣವಾಗುತ್ತಿದ್ದಾರೆ ಅಂತ ಬೇಸರ ವ್ಯಕ್ತಪಡಿಸಿದರು. ಇನ್ನು ರಾಜೀನಾಮೆ ನೀಡಿರುವ ಕೆಲ ಶಾಸಕರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಿದರು.

https://www.facebook.com/profile.php?id=100023711673775

ಒಂದು ವೇಳೇ ಸ್ಪೀಕರ್‌ ಗೆ ನೀವು ರಾಜೀನಾಮೆ ಅಂಗೀಕಾರ ಮಾಡುವುದಕ್ಕೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಬೇಡಿ ಅಂತ ನ್ಯಾಯಾಪೀಠದ ಮುಂದೆ ಸ್ಪೀಕರ್‌ ಹಾಗು ಸಿಎಂ ಪರ ವಕೀಲರು ಮನವಿ ಮಾಡಿಕೊಂಡರು. ಇದೇ ವೇಳೆ ನ್ಯಾಯಾಪೀಠದ ಮುಂದೆ ಸ್ಪೀಕರ್‌ ರಮೇಶ್ ಕುಮಾರ್‌ ಅವರು ಶೀಘ್ರದಲ್ಲಿ ಶಾಸಕರ ರಾಜೀನಾಮೆ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಹೇಳಿದ್ದ ಅಫಿಡವಿಟ್‌ ಅನ್ನು ಸಲ್ಲಿಸಿದ್ದರು.

ನಿನ್ನೆ ಸುಪ್ರೀಂಕೋರ್ಟ್‌ ಏನು ಹೇಳಿತ್ತು?
ಕರ್ನಾಟಕದ ಅತೃಪ್ತ ಶಾಸಕರು ಕೊಟ್ಟಿರುವ ರಾಜೀನಾಮೆ ಕುರಿತು ಇಂದು (ಗುರುವಾರ) ಸಂಜೆ 6 ಗಂಟೆಯೊಳಗೆ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಎದುರು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್​ ಸೂಚನೆ ನೀಡಿತ್ತು. ಜತೆಗೆ ಸರ್ಕಾರ ಮತ್ತು ಸ್ಪೀಕರ್​. ಕೆ.ಆರ್​. ರಮೇಶ್​ಕುಮಾರ್​ ಅವರಿಗೆ ನೋಟಿಸ್​ ಜಾರಿ ಮಾಡಿತ್ತು. ಸ್ಪೀಕರ್​ ಎದುರು ಹಾಜರಾಗಲು ಬೆಂಗಳೂರಿಗೆ ಬರುವ ಅತೃಪ್ತ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಕರ್ನಾಟಕ ಪೊಲೀಸ್​ ಡಿಜಿಪಿ ಅವರಿಗೂ ನ್ಯಾಯಪೀಠ ಸೂಚನೆ ನೀಡಿತ್ತು. ಸ್ಪೀಕರ್​ ವಿರುದ್ಧ ಅತೃಪ್ತ ಶಾಸಕರು ಕೊಟ್ಟಿರುವ ದೂರುಗಳ ಕುರಿತು ಇಂದು (ಶುಕ್ರವಾರ) ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು. ಆದರಂತೆ ಅತೃಪ್ತ ಶಾಸರಕು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಖುದ್ದು ರಾಜೀನಾಮೆಯನ್ನು ಸಲ್ಲಿಸಿದರು. ಅಲ್ಲಿಗೆ ಅತೃಪ್ತ ಶಾಸಕರ ರಾಜೀನಾಮೆ ಅಧ್ಯಾಯನ ಮುಗಿದಿತ್ತು. ಇದೇ ವೇಳೆ ಅತೃಪ್ತ ಶಾಸಕರ ರಾಜೀನಾಮೆಗೆ ಕಾರಣ ನನಗೆ ಮನವರಿಕೆ ಆಗಬೇಕು, ನಂತರ ತೀರ್ಮಾನ ಮಾಡುತ್ತೇನೆಂದು ಅಂತ ಹೇಳಿ ಶಾಕ್‌ ಕೊಟ್ಟಿದ್ದರು

Be the first to comment

Leave a Reply

Your email address will not be published.


*