ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನನಗೆ 5 ವರ್ಷ್ ಅಧಿಕಾರ ನೀಡಿದ್ದೆ ಇಂದು ನಿಮ್ಮ ಗ್ರಾಮಕ್ಕೆ 4ಕೋಟಿ ಅನುಧಾನ ತರಲು ಸಾದ್ಯವಾಗಿದೆ. ಇನ್ನು ನನಗೆ 30 ವರ್ಷ ಅಧಿಕಾರ ನೀಡಿದ್ದರೇ ಎಷ್ಟು ಅನುದಾನ ಬರಬಹುದಿತ್ತು ಎನ್ನುವುದು ತಿಳಿಯಿರಿ ಎಂದು ರಾಜ್ಯ ಆಹಾರ ಮತ್ತು ಸರಬರಾಜು ನಾಗರೀಕ ಇಲಾಖೆ ಅಧ್ಯಕ್ಷ ಹಾಗೂ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಮುದೂರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಿ.ಸಿ. ರಸ್ತೆ, ಚರಂಡಿ ಹಾಗೂ ಶಾಲಾ ಕೊಠಡಿ, ಸಮುದಾಯ ಭವನ ನಿರ್ಮಾಣದ ಸುಮಾರು 360 ಲಕ್ಷ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೇವಲ ಪಟ್ಟಣವಲ್ಲದೆ ಗ್ರಾಮೀಣದಲ್ಲೂ ಶುದ್ಧ ಕುಡಿಯುವ ನೀರಿನ ಸರಬರಾಜು ಒದಗಿಸುವ ಯೋಜನೆ ನಿರ್ಮಿಸಿದ್ದು ಶೀಘ್ರದಲ್ಲಿಯೇ ತಾಲೂಕಿನ ಪ್ರತಿ ಮನೆಯಲ್ಲೂ ಶುದ್ಧ ನೀರು ಸಿಗುತ್ತದೆ ಎಂದು ಶಾಸಕರು ಹೇಳಿದರು.
ಕೇವಲ ಅನುದಾನ ತರುವುದು ಅಷ್ಟೇ ಅಲ್ಲ ಉತ್ತಮ ಕಾಮಗಾರಿಯನ್ನು ಮಾಡುವುದೇ ಮುಖ್ಯಗುರಿಯಾಗಿದೆ. ಆದರೆ ಕೆಲವು ಗ್ರಾಮಗಳಲ್ಲಿ ನಮ್ಮ ಕಾರ್ಯಕರ್ತರು ಗುತ್ತಿಗೆದಾರರು ಇದ್ದರೂ ಅವರಿಗೆ ಗುತ್ತಿಗೆಯನ್ನು ನೀಡಿಲ್ಲ. ಅಂತಹ ಜನರು ತಪ್ಪು ಭಾವಿಸಬೇಡಿ. ಯಾಕೆ ನೀಡಿಲ್ಲ ಎಂದರೆ ಕೆಲವು ಕಾಮಗಾರಿ ಬಗ್ಗೆ ಎಲ್ಲರಿಗೂ ತಿಳಿದಿರುವುದಿಲ್ಲ. ಆದರೆ ಉನ್ನತ ಮಟ್ಟದ ಕಾಮಗಾರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಯರಝರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹಂಡರಗಲ್ ಗ್ರಾಮದಲ್ಲಿ 322.20ಲಕ್ಷ ಹಾಗೂ ನಾಗರಾಳ ಗ್ರಾಮದಲ್ಲಿ 289ಲಕ್ಷ ರೂಪಾಯಿ ಕಾಮಗಾರಿಗೆ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಪಿ. ಎಸ್. ಐ. ಮಲ್ಲಪ್ಪ ಮಡ್ಡಿ ಸೇರಿದಂತೆ ಪ್ರಮುಖ ಗ್ರಾಮಸ್ಥರು ಇದ್ದರು.
Be the first to comment