ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಮೆಹಬೂಬಸಾಬ ಆಗ್ರಾ ವೃತ್ತಿಯಿಂದ ಡಿ ದರ್ಜೇ ನೌಕರರಾದರು ಸಹ ತಮ್ಮ ಮಗನ ಹುಟ್ಟು ಹಬ್ಬದ ನಿಮಿತ್ಯ ತಾವು ಕಾರ್ಯ ನಿರ್ವಹಿಸುತ್ತಿರುವ ಶಾಲೆಗೆ ಬಣ್ಣ ಹಚ್ಚುವ ಮೂಲಕ ಶಾಲೆಯ ಮೇಲಿರುವ ಕಾಳಜಿ ಹಾಗೂ ಸಾಮಾಜಿಕ ಕಾರ್ಯ ನಿರ್ವಹಿಸಿದ್ದಾರೆ. ಆಗ್ರಾ ರವರ ಈ ಕಾರ್ಯ ಶ್ಲಾಘನೀಯವಾದದ್ದು ಹಾಗೂ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ದೊಡ್ಡನಗೌಡ ಜಿ ಪಾಟೀಲ ರವರು ಸಮೀಪದ ಹಿರೇಶಿಂಗನಗುತ್ತಿಯ ಬಿ ವಿ ಸಂಗನಾಳ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಮೆಹಬೂಬಸಾಬ ಇಮಾಮಹುಸೇನ ಆಗ್ರಾರವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ ಜಿ ಬೆಳ್ಳನವರ ರವರು ಪ್ರಾಸ್ತಾವಿಕವಾಗಿ ಮಾತನಾಡಿ,ತಮ್ಮ ಆರ್ಥಿಕ ಇತಿಮಿತಿಯಲ್ಲಿ ಶಾಲೆಯ ಬಗ್ಗೆ ತೋರಿದ ಕಾಳಜಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಮೆಹಬೂಬಸಾಬ ಆಗ್ರಾರವರನ್ನು ಸನ್ಮಾನಿಸಲಾಯಿತು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇಳಕಲ್ಲ ಘಟಕದ ಅಧ್ಯಕ್ಷರಾದ ಪರಶುರಾಮ ಪಮ್ಮಾರ, ಹುನಗುಂದ ತಾಲೂಕ ಘಟಕದ ಅಧ್ಯಕ್ಷರಾದ ಸಂಗಣ್ಣ ಹಂಡಿ.ಇಳಕಲ್ಲ ಘಟಕದ ರಾಜ್ಯ ಪರಿಷತ್ತ ಸದಸ್ಯರಾದ ಈಶ್ವರ ಗಡ್ಡಿ,ಖಜಾಂಚಿ ಮಹಾಂತಗೌಡ ಗೌಡರ,ಕಾರ್ಯದರ್ಶಿ ಗುಂಡಪ್ಪ ಕುರಿ ,ಶಿಕ್ಷಣ ಸಂಯೋಜಕರಾದ ಈಶ್ವರ ಅಂಗಡಿ, ಪಿ ವಿ ಹೀರೆಗೊಂಡ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸನಗೌಡ ಹಾಗಲದಾಳ ಅದ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯ ಗುರುಗಳು, ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
Be the first to comment