ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ :
ಶನಿವಾರ ಗಣೇಶ ಚತುರ್ಥಿ ದಿನದ ರಾತ್ರಿ ವೇಳೆ ತುಂಬು ಗರ್ಭಿಣಿ ಮಹಿಳೆಗೆ 108 ಆಂಬುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆಯಾಗಿದ್ದು ಜನಿಸಿದ ಗಂಡು ಮಗುವಿಗೆ ಗಣೇಶ ಹೆಸರಿನಲ್ಲೇ ನಾಮಕರಣಕ್ಕೆ ಕುಟುಂಬ ಸದಸ್ಯರು ಮುಂದಾದ ಘಟನೆ ಕೋಳೂರ ತಾಂಡಾ ಹತ್ತಿರ ನೆಡದಿದೆ.
ತಾಲೂಕಿನ ಯರಗಲ್ಲ ಗ್ರಾಮದ ಮಹಿಳೆಯೊಬ್ಬರಿಗೆ ಕಾಣಿಸಿಕೊಂಡಿದ್ದ ಹೆರಿಗೆ ನೋವಿನ ಮಹಿಳೆಯನ್ನು ಮುದ್ದೇಬಿಹಾಳ ಪಟ್ಟಣದ ಸರಕಾರಿ ಆಸ್ಪತ್ರೆಗೆ ಕೆರೆದುಕೊಂಡು ಹೋಗುವ ಸಂದರ್ಭದಲ್ಲಿಯೇ ಮಹಿಳೆಗೆ ನೋವು ಹೆಚ್ಚಾಗಿ ಇದನ್ನು ಅರಿತು 108 ಇ ಎಂ. ಟಿ. ಶ್ರೀಶೈಲ ಹೂಗಾರ ಅವರು ಆಂಬುಲೆನ್ಸ್ ನಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿದ್ದು ತಾಯಿ ಮಗು ಆರೋಗ್ಯವಾಗಿದ್ದರೆ.
ಈ ಸಂದರ್ಭದಲ್ಲಿ 108ಪೈಲೊಟ್ ಡ್ರೆವರ್ ಲಾಲಾಸಾಬ್ ,ಯರಗಲ್ಲ ಆಶಾ ಕಾರ್ಯಕರ್ತೆ ಇದ್ದರು.
Be the first to comment