ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪುನರ್‌ ಸ್ಥಾಪನೆಗೆ ರಾಯಣ್ಣ ಅಭಿಮಾನಿ ಬಳಗ ಆಗ್ರಹ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಮನೆಗೊಬ್ಬ  ರಾಯಣ್ಣ: ಮುನ್ನುಗ್ಗಿ ಬಾರಣ್ಣಎಂಬ ಅಬಿಯಾನದ ಮೂಲಕ ಹೋರಾಟದ ಎಚ್ಚರಿಕೆ

ಬಾಗಲಕೋಟೆ:ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸರಕಾರ ಪುನಃ ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿ ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಮತ್ತು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕೂಡಲಸಂಗಮ ಜಿಲ್ಲಾ ಪಂಚಾಯತ ಸದಸ್ಯ ವಿರೇಶ ಉಂಡೋಡಿ ಮಾತನಾಡಿ ರಾಯಣ್ಣನವರ ಜನ್ಮದಿನದಂದು ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಬೆಳಗಾವಿ ಜಿಲ್ಲಾಡಳಿತ ಒಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿದಂತಾಗಿದೆ. ಈ ನಾಡ ಕಂಡ ಅಪ್ರತಿಮ ದೇಶ ಭಕ್ತ ರಾಯಣ್ಣನವರಿಗೆ ಅಪಮಾನ ಮಾಡುವ ಕಾರ್ಯವನ್ನು ಕೆಲವು ಅಧಿಕಾರಿಗಳು ಮಾಡಿದ್ದಾರೆ. ಅಂತವರನ್ನು ಅಲ್ಲಿನ ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣವೆ ವಿಚಾರಣೆ ಕೈಗೊಂಡು ಅಮಾನತ್ತು ಮಾಡಬೇಕು. ಮತ್ತು ಹೆದ್ದಾರಿ ನೆಪದಲ್ಲಿ ಸಂಗೊಳ್ಳಿರಾಯಣ್ಣನ ಮೂರ್ತಿಯನ್ನು ಪುನಃ ಅದೆ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದರು.

ಗುಡೂರ ಜಿಲ್ಲಾ ಪಂಚಾಯತ ಸದಸ್ಯ ಶಶಿಕಾಂತ ಪಾಟೀಲ್ ಪದೆ ಪದೆ ಕುರುಬ ಸಮಾಜದ ಮೇಲೆ ಆಗುತ್ತಿರುವ ಹಲ್ಲೆ ಮತ್ತು ಅನ್ಯಾಯವನ್ನು ರಾಜ್ಯ ಸರ್ಕಾರ ತಡೆಯಬೇಕು ಎಂದು ಮಾತಾಡುತ್ತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರನ ಮೂರ್ತಿ ತೆರವುಗೊಳಿಸಲು ಆದೇಶಿಸಿದ ಅಧಿಕಾರಿಯ ವಿರದ್ದ ಸೂಕ್ತ ಕ್ರಮ ಕೈಗೊಂಡು ಮೊದಲಿದ್ದ ಸ್ಥಳದಲ್ಲೆ ಮೂರ್ತಿಯನ್ನು ಮರಳಿ ಪ್ರತಿಷ್ಠಾಪಿಸಬೇಕೆಂದು ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಒತ್ತಯಿಸಿದ್ದಾರೆ.

ಈ ಸಂದರ್ಭದಲ್ಲಿ ಇಲಕಲ್ಲ ತಾಲೂಕು ಪಂಚಾಯತ ಅಧ್ಯಕ್ಷೆ ಶಾರದಾ ಗೋಡಿ,ಮಹಾಂತಗೌಡ ಪಾಟೀಲ, ಚೇತನ ಮುಕ್ಕಣ್ಣವರ,ಮುತ್ತಣ್ಣ ಹಂಡಿ,ಮಂಜೂ ಆಲೂರ,ಮಲ್ಲಿಕಾರ್ಜುನ ಚೂರಿ,ಸಂಗಮೇಶ ನಾರಗಲ್ಲ,ನಾಗೇಶ ಗಂಜಿಹಾಳ,ಸಿದ್ದು ಘಂಟಿ,ಕರವೆ ತಾಲೂಕಾ ಅಧ್ಯಕ್ಷ ಈರಣ್ಣ ಬಡಿಗೇರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*