ಸಿಲಿಂಡರ್ ಸ್ಫೋಟಗೊಂಡ್ರೆ ಕಂಪನಿ ನೀಡುತ್ತೆ 50 ಲಕ್ಷ ರೂ

ವರದಿ–ಜನ ಮಾಹಿತಿ
ಗ್ಯಾಸ್ ಸಿಲಿಂಡರ್ ಸೋರಿಕೆ ಹಾಗೂ ಸ್ಫೋಟಗೊಂಡ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಸಿಲಿಂಡರ್ ಕಂಪನಿಗೆ 10 ಲಕ್ಷ 46 ಸಾವಿರ ರೂಪಾಯಿ ದಂಡ ವಿಧಿಸಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಗೆ 1 ಲಕ್ಷ 75 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ.

ಭಾರತದಲ್ಲಿ ಎಲ್ಪಿಜಿ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅಡುಗೆ ಅನಿಲವನ್ನು ಹೇಗೆ ಬಳಸಬೇಕು? ಅದ್ರಿಂದಾಗುವ ದುರ್ಘಟನೆಯನ್ನು ಹೇಗೆ ತಡೆಯಬೇಕು ಹಾಗೂ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡರೆ ಏನು ಮಾಡಬೇಕು ಎಂಬುದನ್ನು ಕಂಪನಿ ಜನರಿಗೆ ಅವಶ್ಯವಾಗಿ ತಿಳಿಸಬೇಕಾಗುತ್ತದೆ.

ಸಿಲಿಂಡರ್ ನಲ್ಲಿ ಸೋರಿಕೆಯಾದ್ರೆ ಇದು ವ್ಯಾಪಾರಿ ಹಾಗೂ ಕಂಪನಿ ಜವಾಬ್ದಾರಿಯಾಗುತ್ತದೆ. ರಾಷ್ಟ್ರೀಯ ಗ್ರಾಹಕ ವೇದಿಕೆಯು 16 ವರ್ಷಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ಈ ತೀರ್ಪು ನೀಡಿದೆ.

ಎಲ್ಪಿಜಿ ಸಂಪರ್ಕ ಹೊಂದಿದ ವ್ಯಕ್ತಿ ಮನೆಯಲ್ಲಿ ಎಲ್ಪಿಜಿ ದುರ್ಘಟನೆ ನಡೆದ್ರೆ ಆತ 50 ಲಕ್ಷ ರೂಪಾಯಿ ವಿಮೆ ಪಡೆಯಲು ಅರ್ಹನಾಗಿರುತ್ತಾನೆ. ಅಪಘಾತದಲ್ಲಿ ಗಾಯಕ್ಕೊಳಗಾದ ಪ್ರತಿಯೊಬ್ಬ ವ್ಯಕ್ತಿಗೆ 10 ಲಕ್ಷ ರೂಪಾಯಿ ಸಿಗುತ್ತದೆ. ಎಲ್ಪಿಜಿ ದುರ್ಘಟನೆ ನಡೆದ ತಕ್ಷಣ ಪೊಲೀಸ್ ಹಾಗೂ ಸ್ಥಳೀಯ ಎಲ್ ಪಿ ಜಿ ವಿತರಕರಿಗೆ ಮಾಹಿತಿ ನೀಡಿದ್ರೆ ಮಾತ್ರ ವಿಮೆ ಪಡೆಯಬಹುದು.

Be the first to comment

Leave a Reply

Your email address will not be published.


*